ಡೇ-ನಲ್ಮ್ ಯೋಜನೆಯಡಿ ವಿವಿಧ ಘಟಕಗಳ ಅನುಷ್ಠಾನಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ, ಜು.19(ಕರ್ನಾಟಕ ವಾರ್ತೆ):2021-22ನೇ ಸಾಲಿನ ಡೇ-ನಲ್ಮ್ ಯೋಜನೆಯಡಿ ವಿವಿಧ ಘಟಕಗಳನ್ನು ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿರುಗುಪ್ಪ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ 2021-22ನೇ ಸಾಲಿನ ಸ್ವಯಂ ಉದ್ಯೋಗ ಕಾರ್ಯಕ್ರಮದ ಉಪ ಘಟಕದ ವ್ಯಕ್ತಿಗತ ಉದ್ದಿಮೆ ಶೀಲತೆ (ಸಾಲ ಮತ್ತು ಸಹಾಯಧನ) ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇರುವ ಸ್ವ-ಸಹಾಯ ಗುಂಪಿನಲ್ಲಿ ಸದಸ್ಯರಿರುವ ಕುಟುಂಬದ ಅರ್ಹ ಫಲಾನುಭವಿಗಳು ಹಾಗೂ ಗುಂಪು ಉದ್ದಿಮೆಶೀಲತ ( ಸಾಲ ಮತ್ತು ಸಹಾಯಧನ ) ಚಟುವಟಿಕೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಮಹಿಳಾ ಸ್ವ-ಸಹಾಯ ಗುಂಪು ಹಾಗೂ ಪ್ರದೇಶ ಮಟ್ಟದ ಒಕ್ಕೂಟವನ್ನು ರಚಿಸಲು ಆಸಕ್ತಿ ಹೊಂದಿದ ಅರ್ಹ ಫಲಾನುಭವಿಗಳು/ಗುಂಪುಗಳಿಂದ ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಗುರುತಿನ ಚೀಟಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫಲಾನುಭವಿಗಳು ಸಿರುಗುಪ್ಪ ನಿವಾಸಿಯಾಗಿದ್ದು, ಬಡತನರೇಖೆಗಿಂತ ಕೆಳಗಿನ ಕುಟುಂಬದವರಾಗಿರಬೇಕು. ಅರ್ಜಿ ಸಲ್ಲಿಸಬಯಸುವವರು ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಭರ್ತಿಮಾಡಿ, ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಆ.13ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ನಗರಸಭೆಯ ಕಚೇರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ವಿವರ: ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಮೂರು ಭಾವಚಿತ್ರಗಳು, ಸ್ವಯಂ ಉದ್ಯೋಗದ ಬಗ್ಗೆ ಭಾವಚಿತ್ರ, ಗುಂಪಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್ ಪ್ರತಿ, ಅಂಗವಿಕಲರಿದ್ದಲ್ಲಿ ಪ್ರಮಾಣ ಪತ್ರವನ್ನು ನೀಡಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ನಗರಸಭೆ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಅಥವಾ ದೂ.ಸಂ: 7353745626ಗೆ ಸಂಪರ್ಕಿಸಬಹುದು.

Latest Indian news

Popular Stories