ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹರಾಜು ಪ್ರಕ್ರಿಯೆ ಜೂ.30ರಂದು

ಬಳ್ಳಾರಿ,ಜೂ.14(ಕರ್ನಾಟಕ ವಾರ್ತೆ): ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 20 ನಿವೇಶನಗಳ ಹರಾಜು ಪ್ರಕ್ರಿಯೆಯು ಜೂ.30ರಂದು ನಡೆಯಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಧಿಕಾರದಿಂದ ನಿರ್ಮಿಸಿದ ಬಡಾವಣೆಗಳಾದ ರಾಘವೇಂದ್ರ ಕಾಲೋನಿ 2ನೇ ಹಂತ, ಕುವೆಂಪು ನಗರ, ಶ್ರೀ ಕನಕದುರ್ಗಮ್ಮ ಬಡಾವಣೆ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಹಾಗೂ ಶ್ರೀ ಲಾಲ್‍ಬಹದ್ದೂರ್ ಶಾಸ್ರೀ ವಾಣಿಜ್ಯ ಸಂಕೀರ್ಣದ ಕಟ್ಟಡ ಖಾಲಿ ಜಾಗ ಹಾಗೂ ವಾಸಯೋಗ್ಯ/ಮೂಲೆ/ಮಧ್ಯಂತರ/ವಾಣಿಜ್ಯ ನಿವೇಶನಗಳನ್ನು ಹರಾಜು ಮೂಲಕ ವಿಲೇ ಮಾಡಲಾಗುತ್ತದೆ.
ನಿವೇಶನ ಪಡೆಯಲು ಇಚ್ಚೆಯುಳ್ಳವರು ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್ http://www.eproc.karnataka.gov.in ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‍ಸೈಟ್ www.bellary.\uda.gov.in. ರಲ್ಲಿ ವೀಕ್ಷಿಸಬಹುದು.

Latest Indian news

Popular Stories

error: Content is protected !!