ಜೂ.1ರಿಂದ 30ವರೆಗೆ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಹಾಲಿನ ಪೂರೈಕೆ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಹೆಚ್ಚುವರಿ ಹಾಲಿನ ಪೂರೈಕೆ

ಬಳ್ಳಾರಿ,ಮೇ31(ಕರ್ನಾಟಕ ವಾರ್ತೆ): ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ಜೂನ್ 1ರಂದು ವಿಶ್ವದಾದ್ಯಂತ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ “ಹೆಚ್ಚು ಹಾಲು ಕುಡಿಯಿರಿ” ಎಂಬ ಕಾರ್ಯಕ್ರಮದಡಿ ಇಡೀ ಜೂನ್ ತಿಂಗಳಲ್ಲಿ ಒಕ್ಕೂಟದಿಂದ ಮಾರಾಟವಾಗುತ್ತಿರುವ ಎಲ್ಲಾ ಮಾದರಿಯ ಹಾಲಿನ ಪ್ರತಿ ಲೀಟರ್‍ಗೆ 40 ಎಂಎಲ್ ಹಾಗೂ ಅರ್ಧ ಲೀಟರ್‍ಗೆ 20 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಉಚಿತವಾಗಿ ಗ್ರಾಹಕರಿಗೆ ಪೂರೈಸಲಾಗುತ್ತದೆ ಎಂದು ರಾಯಚೂರು, ಬಳ್ಳಾರಿ & ಕೊಪ್ಪಳ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬಳ್ಳಾರಿ ಹಾಲು ಒಕ್ಕೂಟವು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಕೋವಿಡ್-19 ಮಹಾಮಾರಿಯ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ದಿನಗಳಲ್ಲಿ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಹೆಚ್ಚುವರಿ ಹಾಲನ್ನು ಜೂ.1 ರಿಂದ ಜೂ.30ರವರೆಗೆ ಪೂರೈಸಲಾಗುತ್ತದೆ. ಈ ಹೆಚ್ಚುವರಿ ಹಾಲಿನ ಸೇವನೆಯಿಂದ ಗ್ರಾಹಕರ ಆರೋಗ್ಯದಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Latest Indian news

Popular Stories