ಸೃಜನಶೀಲರಾಗಲು ಕುವೆಂಪುರವರ ಸಾಹಿತ್ಯ ಓದಿ:ಶಾಂತ ಜಯಾನಂದ್ ಬೆಂಗಳೂರು

ಖಿದ್ಮಾ ಫೌಂಡೇಶನ್ ಕರ್ನಾಟಕ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಬೆಂಗಳೂರು ಚಂದನ ಟಿವಿ ಮಾಜಿ ನಿರೂಪಕಿ ಹಾಗೂ ಪ್ರಾಧ್ಯಾಪಕಿ ಶ್ರೀಮತಿ ಶಾಂತಾ ಜಯಾನಂದ್ ರಾಷ್ಟ್ರಕವಿ ಕುವೆಂಪು ಅವರ ಜೀವನ ಸಾಹಿತ್ಯ ನಾಟಕ ವಿಶೇಷವಾಗಿ ಅವರು ಸಮಾಜಕ್ಕೆ ಬಿತ್ತರಿಸಿದ ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸಿ ಮಾತನಾಡಿ ಕುವೆಂಪು ಅವರು ಸಾಹಿತ್ಯ ಲೋಕದ ಅಜರಾಮರರಾಗಿದ್ದಾರೆ. ಇದಕ್ಕೆ ಮೂಲ ಪುರಾವೆ ಅವರು ನಮ್ಮೊಂದಿಗೆ ಸಾರಿದ ಮಾನವೀಯ ಸಂದೇಶಗಳಾಗಿವೆ ಎಂದು ಅಭಿಪಾಯ ಪಟ್ಟರು.

ಕಾರ್ಯಕ್ರಮದಲ್ಲಿ ಶ್ರೀ ಡಾ.ನಂದಿ ಬಾಷ, ಸಾಹಿತಿಗಳು ವೈದ್ಯರಾದ ಶ್ರೀ ಡಾ. ರವಿ ದಾನಿ ಬೆಂಗಳೂರು, ಹಿರಿಯ ಸಾಹಿತಿ, ಶಿಕ್ಷಕಿ ಶ್ರೀಮತಿ ಹಸೀನಾ ಎಂ ಸಿದ್ದಾಪುರ ಹಾಗೂ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು, ಯುವ ಕವಿಯತ್ರಿ ಸುಷ್ಮಾ ಪ್ರವೀಣ್ ಸಾಗರ ಉಪಸ್ಥಿತರಿದ್ದರು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!