ಕೋವಿಡ್-19ಗೆ ಬಲಿಯಾದ ಶಿಕ್ಷಕರು, ಶಿಕ್ಷಣ ಇಲಾಖಾ ಸಿಬ್ಬಂದಿಯ ನೊಂದ ಕುಟುಂಬದವರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದ ಶಾಸಕರಾದ ರಹೀಂ ಖಾನ್

ಬೀದರ ಜೂನ್ 15 (ಕರ್ನಾಟಕ ವಾರ್ತೆ):- ಕೋವಿಡ್-19 ನಿಂದ ಮೃತಪಟ್ಟ ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆಯ ಇನ್ನೀತರ ಸಿಬ್ಬಂದಿ ಅವರ ಮನೆಗಳಿಗೆ ಬೀದರ ನಗರ ಮತಕ್ಷೇತ್ರದ ವಿಧಾನಸಭಾ ಸದಸ್ಯರಾದ ಶ್ರೀ ರಹೀಂ ಖಾನ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಜೂನ್ 14 ಮತ್ತು 15 ರಂದು ಎರಡು ದಿನಗಳ ಕಾಲ ಸತತವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕರು ಸಂಚಾರ ಕೈಗೊಂಡು ಮೃತ ಶಿಕ್ಷಕರ ಮತ್ತು ಇನ್ನೀತರ ಸಿಬ್ಬಂದಿಗಳ ನಿವಾಸಕ್ಕೆ ತೆರಳಿ ನೊಂದ ಕುಟುಂಬದವರಿಗೆ ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದರು.
ಕುಟುAಬದವರಿಗೆ ಸಾಂತ್ವನ: ಶಾಸಕರು ಮೊದಲು ಜನವಾಡ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕರ ಕುಟುಂಬದವರ ಮನೆಗೆ, ನಂತರ ಗವಾನ ಶಾಲೆಯ ದಿವಂಗತ ಶಿಕ್ಷಕಿ ಶ್ರೀಮತಿ ಅವರ ಮನೆಗೆ, ಬಳಿಕ ಫತೇಪೂರ ಸರಕಾರಿ ಶಾಲಾ ಶಿಕ್ಷಕರಾದ ದಿವಂಗತ ಅಮಮುಲ್ಲಾ ಅವರ ಮನೆಗೆ ಭೇಟಿ ನೀಡಿ ಮೃತರ ಕುಟುಬದವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಶಾಸಕರು, ಕೋವಿಡ್-19 ವೈರಸ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಕೋರೋನಾ ಮಹಾಮಾರಿಗೆ ಅಸಂಖ್ಯಾತ ಜನರು ಬಲಿ ಆಗಿದ್ದಾರೆ. ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯು ಕೋರೋನಾಗೆ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ ಎಂದರು.
ಬೀದರ ಜಿಲ್ಲೆಯಲ್ಲಿ ಸುಮಾರು 64 ಕ್ಕೂ ಹೆಚ್ಚು ಜನ ಶಿಕ್ಷಣ ಇಲಾಖೆಯ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಬೀದರ ಜಿಲ್ಲೆಯಲ್ಲಿ ಅತಿ ಹೆಚ್ಚು 18 ಜನ ಬಲಿಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಡಿಡಿಪಿಐಗೆ ಸೂಚನೆ: ಮೃತ ಶಿಕ್ಷಕರ ಮತ್ತು ಶಿಕ್ಷಣ ಇಲಾಖೆಯ ಇನ್ನೀತರ ಸಿಬ್ಬಂದಿಯ ಕುಟುಂಬಸ್ಥರಿಗೆ ದಕ್ಕಬೇಕಾದ ಸರಕಾರಿ ಸೌಲಭ್ಯಗಳು, ಪಿಂಚಣಿ, ಕೋವಿಡ್ ಪರಿಹಾರ, ಅನುಕಂಪದ ನೇಮಕಾತಿ, ವೈದ್ಯಕೀಯ ವೆಚ್ಚ ಮರುಪಾವತಿ ಮುಂತಾದವುಗಳನ್ನು ಶೀಘ್ರದಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಇದೆ ವೇಳೆ ಶಾಸಕರು ಉಪನಿರ್ದೇಶಕರಿಗೆ ಸೂಚಿಸಿದರು.
ಬಿಇಓಗೆ ಸೂಚನೆ: ಕೋವಿಡ್ ನಿಂದ ಮೃತಪಟ್ಟ ಶಿಕ್ಷಣ ಇಲಾಖೆಯ ಶಿಕ್ಷಕರು ಮತ್ತು ಇನ್ನೀತರ ಸಿಬ್ಬಂದಿಯ ಕುಟುಂಬದವರಿಗೆ ನ್ಯಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಆದ್ಯತೆ ನೀಡಿ ಬೇಗನೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳೊAದಿಗೆ ಮಾತು: ಕರ್ತವ್ಯದ ವೇಳೆಯಲ್ಲಿ ಕೋವಿಡ್-19ಗೆ ಬಲಿಯಾದ ಶಿಕ್ಷಕರು ಮತ್ತು ಶಿಕ್ಷಣ ಇಲಾಖಾ ಸಿಬ್ಬಂದಿಯ ಬಗ್ಗೆ ತಾವು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮತ್ತು ಶಿಕ್ಷಣ ಸಚಿವರೊಂದಿಗೆ ಮಾತನಾಡಿ ಪರಿಹಾರದ ಬಗ್ಗೆ ತಿಳಿಸುವುದಾಗಿ ಇದೆ ಸಂದರ್ಭದಲ್ಲಿ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಸಿಎಂಸಿ ಕಮೀಷನರ್ ರವೀಂದ್ರನಾಥ ಅಂಗಡಿ, ಶಿಕ್ಷಣಾಧಿಕಾರಿಗಳಾದ ಮೊಹಮ್ಮದ್ ಪಟೇಲ್, ನಗರಸಭೆ ಸದಸ್ಯರುಗಳಾದ ಅಬ್ದುಲ್ ಖದೀರ್,ಮಹಮ್ಮದ್ ಗೌಸ್, ದಿಗಂಬರ ಮಡಿವಾಳ, ಅರುಣ್ ಕುಮಾರ,ವೀರಶೆಟ್ಟಿ ಪಾಟೀಲ್, ಸಂಗಮೇಶ್, ಮುಖಂಡರಾದ ಮಹಮ್ಮದ್ ಯೂಸುಫ್ , ಸಾಮಾಜಿಕ ಕಾರ್ಯಕರ್ತರಾದ ಎಂಡಿ ವಸೀಂ ಬಾಬಾ ,ಇರ್ಷಾದ್ ಅಲಿ ಪೈಲ್ವಾನ್ , ಶ್ರೀಮಂತ ಧಬಾಲೆ, ಶಿವ ವಿದ್ಯಾನಗರ, ಅಂಬ್ರೇಶ ಸ್ವಾಮಿ ಪ್ರತಾಪ್ ನಗರ, ವೆಂಕಟ್, ಬಸು, ಸೂರ್ಯಕಾಂತ, ಉಪತಹಶಿಲ್ದಾರರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories