ಅಬಕಾರಿ ಇಲಾಖೆಯಿಂದ ವಾಹನಗಳ ಬಹಿರಂಗ ಹರಾಜು

ಬೀದರ ಜುಲೈ 19 (ಕರ್ನಾಟಕ ವಾರ್ತೆ): ವಿವಿಧ ಅಬಕಾರಿ ಮೊಕದ್ದಮೆಗಳಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಬೇಕಾಗಿದೆ.
ಅಬಕಾರಿ ಉಪ ಆಯುಕ್ತರ ಕಛೇರಿ, ಅಬಕಾರಿ ಭವನದಲ್ಲಿ ಜುಲೈ 23 ರಂದು 38 ವಾಹನಗಳನ್ನು, ಅಬಕಾರಿ ನಿರೀಕ್ಷಕರ ಕಛೇರಿ ಔರಾದ್ ವಲಯದಲ್ಲಿ ಜುಲೈ 26ರಂದು 19 ವಾಹನಗಳನ್ನು, ಅಬಕಾರಿ ನಿರೀಕ್ಷಕರ ಕಛೇರಿ ಭಾಲ್ಕಿ ವಲಯದಲ್ಲಿ ಜುಲೈ 28ರಂದು 19 ವಾಹನಗಳನ್ನು ಹಾಗೂ ಅಬಕಾರಿ ನಿರೀಕ್ಷಕರ ಕಛೇರಿ ಬಸವಕಲ್ಯಾಣ ವಲಯದಲ್ಲಿ ಆಗಸ್ಟ್ 03ರಂದು 06 ವಾಹನಗಳು ಸೇರಿದಂತೆ ಒಟ್ಟು 82 ವಿವಿಧ ಬಗೆಯ ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿಗಾಗಿ ಹರಾಜು ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರ ಕಛೇರಿ, ಬೀದರ್, ಭಾಲ್ಕಿ, ಬಸವಕಲ್ಯಾಣ ಹಾಗೂ ಔರಾದ್ ವಲಯ ಅಥವಾ ಅಬಕಾರಿ ಉಪ ಅಧೀಕ್ಷಕರ ಕಛೇರಿ, ಬೀದರ್ ಉಪ ವಿಭಾಗ, ಬೀದರ್ ರವರಿಗೆ ಸಂಪರ್ಕಿಸಬೇಕು ಎಂದು ಬೀದರನ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೆöÊಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!