ಕಾರ್ಮಿಕ ಭವನಕ್ಕೆ ಮಂಜೂರಾದ ೧೨ ಗುಂಟೆ ಭೂಮಿ, ೧.೫೦ ಕೋಟಿ ರೂ. ನುಂಗಿದರ‍್ಯಾರು?

ಬೀದರ, ಜುಲೈ. ೧೯ಃ ಬಡ ಕಾರ್ಮಿಕರಿಗೆ ಸಭೆ, ಸಮಾರಂಭ ಮತ್ತು ನಾನಾ ಚಟುವಟಿಕೆಗಳು ನಡೆಸಲು ನಗರದ ನೌಬಶದ ಸಮೀಪದ ಸರ್ವೇ ನಂ.೧೮ ರಲ್ಲಿ ೧೨ ಗುಂಟೆ ಜಮೀನು ಮಂಜೂರು ಮಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ೧.೫೦ ಕೋಟಿ ರೂಪಾಯಿಗಳು ಮಂಜೂರು ಮಾಡಿತ್ತು. ಕಾರ್ಮಿಕ ಭವನಕ್ಕೆ ಮಂಜೂರಾದ ೧೨ ಗುಂಟೆ ಭೂಮಿ ಮತ್ತು ಕಾರ್ಮಿಕ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರಾದ ೧.೫೦ ಕೋಟಿ ರೂಪಾಯಿಗಳು ಮಾತ್ರ ಯಾರು ಗುಳಂ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕರ ಟ್ರಸ್ಟ ಅಧ್ಯಕ್ಷರಾದ ರವೀಂದ್ರ ಕೊಳ್ಳೂರು, ಉಪಾಧ್ಯಕ್ಷರಾದ ಧನರಾಜ ದೊಡ್ಡೆ, ಬೀದರ ತಾಲೂಕಾಧ್ಯಕ್ಷರಾದ ರಾಮದಾಸ ಸಿಕಿಂದ್ರಾಪೂರಕರ್, ಸದಸ್ಯರಾದ ಎಂ.ಡಿ. ಲೈಕೊದ್ದೀನ್, ಸಂಜು ಶಹಾಬಾದ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಈ ಸಂಬAಧ ಹಲವು ಸಲ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದ ಅವರು, ಭೂಮಿ ಮತ್ತು ಹಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕರ ಟ್ರಸ್ಟ ಪದಾಧಿಕಾರಿಗಳ ಮನವಿ ಮೇರೆಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಆಯುಕ್ತರು ದಿನಾಂಕ ೦೪-೦೯-೨೦೧೦ ರಂದು ಬೀದರ ಜಿಲ್ಲಾಧಿಕಾರಿಗಳಿಗೆ ಬೀದರ ಜಿಲ್ಲಾ ಕೇಂದ್ರ ನಗರದಲ್ಲಿ ಕಾರ್ಮಿಕ ಭವನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ೦೦.೨೦ ಎಕರೆ ನಿವೇಶನ (ಜಮೀನು) ಹಂಚಿಕೆ ಮಾಡುವ ಬಗ್ಗೆ ಪತ್ರ ಬರೆದಿದ್ದರು ಎಂದು ತಿಳಿಸಿದ್ದಾರೆ.
ದಿನಾಂಕ ೨೮-೦೮-೨೦೨೧ ರಂದು ಕಾರ್ಮಿಕ ಸಚಿವರು ಬೀದರ ನಗರ ಕಾರ್ಮಿಕ ವರ್ಗದವರ ಸೌಲಭ್ಯಕ್ಕಾಗಿ ಒಂದು ಸಮುದಾಯ ಭವನ ನಿರ್ಮಿಸಲು ಬೀದರ ಜಿಲ್ಲಾ ಕೇಂದ್ರದಲ್ಲಿ ೦೦.೨೦ ಎಕರೆ ಭೂಮಿ ಕಾರ್ಮಿಕರ ಹಿತರಕ್ಷಣೆಗಾಗಿ ಮಂಡಳಿಗೆ ಹಂಚಿಕೆ ಮಾಡಲು ಮೇರೆಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದರು ಎಂದು ತಿಳಿಸಿದ್ದಾರೆ.
ದಿನಾಂಕ ೦೨-೦೬-೨೦೧೨ ರಂದು ಬೀದರ ಉಪ ವಿಭಾಗದ ಸಹಾಯಕ ಆಯುಕ್ತರು ಬೀದರ ತಹಸೀಲ್ದಾರರಿಗೆ ಪತ್ರ ಬರೆದು ಕಾರ್ಮಿಕ ಭವನ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಭೂಮಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದ್ದರು. ಪುನಃ ದಿನಾಂಕ : ೧೦-೦೧-೨೦೧೩ ರಂದು ಬೀದರ ಸಹಾಯಕ ಆಯುಕ್ತರು ಬೀದರ ತಹಸೀಲ್ದಾರರಿಗೆ ಪತ್ರ ಬರೆದು ಬೀದರ ಜಿಲ್ಲಾ ಕೇಂದ್ರ ನಗರದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ೦೦.೨೦ ಎಕರೆ ಜಮೀನು ಮಂಜೂರು ಮಾಡುವ ಬಗ್ಗೆ ಸೂಚನೆ ನೀಡಿದಂತೆ ಬೀದರ ತಹಸೀಲ್ದಾರರು ದಿನಾಂಕ ೧೯-೦೧-೨೦೧೩ ರಂದು ಬೀದರ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದ ವರದಿಯಲ್ಲಿ ಕಮಠಾಣಾ ಕಂದಾಯ ನಿರೀಕ್ಷಕರು ಹಾಗೂ ಬೀದರ ತಾಲೂಕಾ ಭೂ ಮಾಪಕರು ಜಂಟಿಯಾಗಿ ಪರಿಶೀಲಿಸಿ ಕಮಠಾಣಾ ಹೋಬಳಿಯ ನೌಬಾದ ಗ್ರಾಮದ ಸರ್ವೇ ನಂ. ೧೮ರಲ್ಲಿ ೦.೨೦ ಎಕರೆ ಭೂಮಿ ಲಭ್ಯವಿಲ್ಲ. ಬದಲಾಗಿ ೧೨ ಗುಂಟೆ ಜಮೀನು ಮಾತ್ರ ಲಭ್ಯವಿದೆ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕರ ಟ್ರಸ್ಟ ಮನವಿ ಮೇರೆಗೆ ರಾಜ್ಯ ಸರ್ಕಾರ ಕಾರ್ಮಿಕ ಭವನ ನಿರ್ಮಾಣಕ್ಕೆ ಬೀದರ ನಗರದ ನೌಬಾದ ಸರ್ವೇ ನಂ. ೧೮ ರಲ್ಲಿ ೧೨ ಗುಂಟೆ ಜಮೀನು ಮಂಜೂರು ಮಾಡಿದೆ. ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಕಾರ್ಮಿಕ ಭವನ ನಿರ್ಮಾಣಕ್ಕೆ ೧.೫೦ ಕೋಟಿ ರೂಪಾಯಿಗಳು ಮಂಜೂರು ಮಾಡಿದ್ದರು ಎಂದು ತಿಳಿಸಿದ್ದಾರೆ.
ಬೀದರ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಕಾರ್ಮಿಕ ಭವನದ ೧೨ ಗುಂಟೆ ಭೂಮಿ ಮತ್ತು ೧.೫೦ ಕೋಟಿ ರೂಪಾಯಿಗಳು ಬಗ್ಗೆ ವಿಚಾರಿಸಿದರೆ, ಕಾರ್ಮಿಕ ಭವನದ ಕಡತ ಕ್ಲೋಸ್ ಆಗಿದೆ ಎಂದು ಹೇಳುತ್ತಾರೆ. ಕ್ಲೋಸ್ ಅಂದರೆ, ಏನರ್ಥ ವೆಂದು ಅಧಿಕಾರಿಗಳಿಗೆ ಕೇಳಿದರೆ, ಕಾರ್ಮಿಕ ಭವನ ಮಂಜೂರಾಗಬಹುದು. ಇಲ್ಲವೇ ತಿರಸ್ಕೃತಗೊಳ್ಳÀಬಹುದು ಎಂಬ ಮಾತು ಅಧಿಕಾರಿಗಳು ಹೇಳುತ್ತಾರೆ ಎಂದು ತಿಳಿಸಿದ್ದಾರೆ.

Latest Indian news

Popular Stories

error: Content is protected !!