ಬೀದರ್: ಡಾ. ರೋಶನ್ ಝಮೀರ್ ಎಂ. ರಚಿಸಿರುವ ಎರಡು ಕೃತಿ ಬಿಡುಗಡೆ

ಬೀದರ್:ಬೀದರ್‍ನ ಬ್ರಿಮ್ಸ್‍ನಲ್ಲಿ ಬ್ರಿಮ್ಸ್ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಅವರು ಡಾ. ರೋಶನ್ ಝಮೀರ್ ಎಂ. ರಚಿಸಿರುವ ಎರಡು ಕೃತಿಗಳನ್ನು ಬಿಡುಗಡೆ ಮಾಡಿದರು

ಅಂಗರಚನಾ ಶಾಸ್ತ್ರ: ಎರಡು ಕೃತಿ ಬಿಡುಗಡೆ


ಬೀದರ್: ಲೇಖಕ ಡಾ. ರೋಶನ್ ಝಮೀರ್ ಎಂ. ರಚಿತ ‘ಅಪ್ಪರ್ ಲಿಂಬ್ ಥೊರಾಕ್ಸ್ ಭಾಗ-1’ ಹಾಗೂ ‘ಹ್ಯುಮನ್ ನ್ಯೂರೊಅನಾಟಮಿ’ ಕೃತಿಗಳನ್ನು ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ ಬಿಡುಗಡೆ ಮಾಡಿದರು.


ನ್ಯಾಷನಲ್ ಮೆಡಿಕಲ್ ಕಮಿಷನ್ ಪಠ್ಯಕ್ರಮದ ಅನ್ವಯ ರಚಿಸಲಾದ ಕೃತಿಗಳು ಅಟಿಟ್ಟ್ಯುಡ್ ಎಥಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಷಯವನ್ನು ಒಳಗೊಂಡಿವೆ.ವೈದ್ಯಕೀಯ ಅಂಗ ರಚನಾ ಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು ಎಂ.ಬಿ.ಬಿ.ಎಸ್. ಮೊದಲ ವರ್ಷ, ಎಂ.ಡಿ. ಹಾಗೂ ಡಿ.ಎಂ. ಕೋರ್ಸ್ ಅಧ್ಯಯನ ಮಾಡುವವರಿಗೆ ಉಪಯುಕ್ತವಾಗಿವೆ.
ಡಾ. ರೋಶನ್ ಝಮೀರ್ ಎಂ. ಅವರು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂಗ ರಚನಾ ಶಾಸ್ತ್ರ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿದ್ದಾರೆ.


ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ. ಎಸ್.ವಿ. ಕ್ಷೀರಸಾಗರ್, ಡಾ. ವಿಜಯಕುಮಾರ, ಡಾ. ಉಮಾ ದೇಶಮುಖ, ಡಾ. ಸಂದೀಪ್, ಡಾ. ಗಜಾನಂದ ಕುಲಕರ್ಣಿ, ಡಾ. ಶಂಶುದ್ದಿನ್, ಡಾ. ಉಝೈರ್, ಡಾ. ಮೋಸಿನುಲ್ಲಾ ಹಕ್, ಡಾ. ಜಾಧವ್, ಡಾ. ಜ್ಞಾನೇಶ್ವರ ಪಾಟೀಲ ಉಪಸ್ಥಿತರಿದ್ದರು.

Latest Indian news

Popular Stories