ಕಮಲನಗರ ತಾಲೂಕಿನಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ

ಬೀದರ ಜೂನ್ 25 (ಕರ್ನಾಟಕ ವಾರ್ತೆ): ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜೂನ್ 25ರಂದು ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬೆಳಗ್ಗೆ 9.30ರಿಂದ ಕಮಲನಗರ ತಾಲೂಕಿನ ಬಾವಲಗಾಂವ್ ತಾಂಡಾ ಭೇಟಿಯಿಂದ ಆರಂಭಿಸಿ 14ಕ್ಕು ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಪಂಚಾಯತ್ ರಾಜ್ಯ ಎಂಜಿನಿಯರಿAಗ್, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಯೋಜನೆಗಳಡಿ ಅಂದಾಜು 22 ಕೋಟಿ ರೂ.ಮೊತ್ತದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
4.95 ಕೋಟಿ ರೂ.ವೆಚ್ಚದಲ್ಲಿ ಡೋಂಗರಗಾAವ್ ಕ್ರಾಸ್-ಹುಲ್ಯಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ, 4.89 ಕೋಟಿ ರೂ. ವೆಚ್ಚದಲ್ಲಿ ಚೀಮೇಗಾಂವ್ ಕ್ರಾಸ್-ಹುಲ್ಯಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ, 4 ಕೋಟಿ ರೂ. ವೆಚ್ಚದಲ್ಲಿ ಮದನೂರ-ಕಮಲನಗರ ರಸ್ತೆ ಕಾಮಗಾರಿಗೆ, 2.74 ಕೋಟಿ ರೂ. ವೆಚ್ಚದಲ್ಲಿ ಲಿಂಗದಳ್ಳಿ (ಯು)-ಬೆಡಕುಂದ ರಸ್ತೆ ಕಾಮಾಗಾರಿಗೆ, 2 ಕೋಟಿ ರೂ ವೆಚ್ಚದಲ್ಲಿ ಮುರ್ಕಿ-ಎಕಂಬಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಭವಾನಿ ನಗರದ ಬಾವಲಗಾಂವ್ ತಾಂಡಾದಲ್ಲಿ, ದಾಬಕಾ (ಸಿಎಚ್)ನಲ್ಲಿ ಮತ್ತು ಹಂದಿಕೇರಾ ಗ್ರಾಮಗಳಲ್ಲಿ ತಲಾ 15 ಲಕ್ಷ ರೂ ಮೊತ್ತದಲ್ಲಿ ಹಳೆಯ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಇನ್ನೀತರ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ: ಔರಾದ್ ಮತ್ತು ಕಮಲನಗ ತಾಲೂಕಿನಲ್ಲಿ ವಿಶೇಷ ಆದ್ಯತೆ ನೀಡಿದ ಎಲ್ಲಾ ಕಡೆಗಳಲ್ಲಿನ ರಸ್ತೆ ಕಾಮಗಾರಿಗಳು ಒಳ್ಳೆಯ ರೀತಿಯಲ್ಲಿ, ಉತ್ತಮ ಗುಣಮಟ್ಟದ್ದಾಗಿ ನಡೆಯಬೇಕು. ಮತ್ತು ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳಲು ಒತ್ತು ಕೊಡಬೇಕು ಎಂದು ವಿವಿಧ ಇಲಾಖೆಗಳ ಅಭಿಯಂತರರರಿಗೆ ಮತ್ತು ಗುತ್ತಿಗೆದಾರರಿಗೆ ಸಚಿವರು ಇದೆ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅನುದಾನ ಸಮರ್ಪಕ ಬಳಕೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಮಲನಗರ ತಾಲೂಕಿನ ಅಭಿವೃದ್ಧಿ ಸಲುವಾಗಿ ಕಳೆದ ವರ್ಷ ನಡೆಸಿದ ಗ್ರಾಮ ಸಭೆಗಳಲ್ಲಿ ಬಂದಿರುವ ಬೇಡಿಕೆಗಳ ಬಗ್ಗೆ ಗಮನ ಹರಿಸಿ ನಾನಾ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಯಡಿ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಮಲನಗರ ಮತ್ತು ಔರಾದ್ ತಾಲೂಕುಗಳು ಸಂಪೂರ್ಣ ಅಭಿವೃದ್ಧಿಯಾಗಬೇಕು ಎಂಬುದು ತಮ್ಮ ಸಂಕಲ್ಪವಾಗಿದ್ದು, ಅಂಗನವಾಡಿ, ಶಾಲಾ ಕಟ್ಟಡ, ಸಿಸಿ ರೋಡ್ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದ ರೀತಿಯಲ್ಲಿ ನಡೆಯುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಎಲ್ಲರೂ ಲಸಿಕೆ ಪಡೆದುಕೊಳ್ಳಿರಿ: ಕೋರೋನಾ ಮಹಾಮಾರಿ ಹರಡದಂತೆ ಜಿಲ್ಲೆಯಲ್ಲಿ ನಡೆಯುವ ಜಾಗೃತಿ ಕಾರ್ಯಕ್ರಮಗಳ ಮಹತ್ವವನ್ನು ಜನತೆ ಅರಿತು ಸಹಕರಿಸಬೇಕು. ಪ್ರತಿಯೊಬ್ಬರೂ ತಪ್ಪದೇ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಬೇಕು. ಕೊರೋನಾ ಮೂರನೇ ಅಲೆ ಬರುವ ಸಂಭವವಿದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ತಾವು ಈಗಾಗಲೇ ಔರಾದ್ ಮತ್ತು ಕಮಲನಗರ ತಾಲೂಕಿನ ಎಲ್ಲ ಹಳ್ಳಿಗಳಿಗೂ ಗ್ರಾಮ ಭೇಟಿ ಕಾರ್ಯಕ್ರಮ ಹಾಕಿಕೊಂಡು ಕೋವಿಡ್ ತಡೆ ಜಾಗೃತಿ ಮೂಡಿಸಲಾಗಿದೆ.
ಮತ್ತು ಕೋವಿಡ್ ತಡೆ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೇಟ್ಟಿ ಪನ್ನಾಳೆ, ಬಂಡೆಪ್ಪಾ ಕಂಟೆ, ವಸಂತ ವಕೀಲ, ಕಿರಣ ಪಾಟೀಲ, ಸತೀಶ್ ಪಾಟೀಲ, ಸಚಿನ್ ರಾಠೋಡ, ಗಿರಿಶ ಒಡೆಯಾರ್, ಸುಜಿತ್ ರಾಠೋಡ, ಸುರೇಶ ಭೋಸ್ಲೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ, ಪಂಚಾಯತ್ ರಾಜ್ಯ ಎಂಜಿನಿಯರಿAಗ್ ವಿಭಾಗದ ಎಂಜಿನಿಯರ್ ಅಶೋಕ ಸಜ್ಜನಶೆಟ್ಟಿ ಸೇರಿದಂತೆ ಇನ್ನೀತರ ಮುಖಂಡರು ಮತ್ತು ಅಧಿಕಾರಿಗಳು ಇದ್ದರು.

Latest Indian news

Popular Stories