ಸೋಯಾ, ತೊಗರಿ, ಹೆಸರು, ಉದ್ದು ಬೆಳೆಯುವ ರೈತರಿಗೆ ಸಲಹೆ

ಬೀದರ ಜೂನ್ 12 (ಕ.ವಾ.):ಬೀದರ ಜಿಲ್ಲೆಯ ರೈತರು 70 ಮಿ.ಮೀ ಕಿಂತ ಹೆಚ್ಚು ಮಳೆಯಾದರೆ ಮಾತ್ರ ತೊಗರಿ, ಹೆಸರು, ಉದ್ದು ಬೆಳೆಗಳನ್ನು ಬಿತ್ತನೆ ಮಾಡುವುದು ಸೂಕ್ತ. ಅದೇ ರೀತಿ 80 ರಿಂದ 100 ಮಿ.ಮೀ ಮಳೆಯಾದಲ್ಲಿ ಸೋಯಾಅವರೆ ಬಿತ್ತನೆ ಕೈಗೊಳ್ಳುವುದು ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಜಿ.ಎಚ್. ಅವರು ಬೀದರ ಜಿಲ್ಲೆಯ ರೈತರಿಗೆ ಸಲಹೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಸುರಿದಿರುವ ಮಳೆಯ ಪ್ರಮಾಣ ಬಿತ್ತನೆಗೆ ಸೂಕ್ತವಿಲ್ಲದಿರುವ ಕಾರಣ ಸಾಕಷ್ಟು ಮಳೆಯಾದನಂತರವೇ ಬಿತ್ತನೆ ಕೈಗೊಳ್ಳುವುದರಿಂದ ಎಕರೆಗೆ ಬೇಕಾಗುವ ಸಸಿಗಳ ಪ್ರಮಾಣವನ್ನು ಕಾಪಾಡುವುದರ ಜೊತೆಗೆ ಆರೋಗ್ಯಕರ ಸಸಿಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಸದ್ಯದಲ್ಲಿ ಬಿತ್ತನೆ ಕೈಗೊಂಡಲ್ಲಿ ಮೊಳಕೆ ಒಡೆಯದೆ ಬಿತ್ತನೆ ಬೀಜ ಮಣ್ಣಿನಲ್ಲಿಯೇ ಕೊಳೆಯುವ ಸಂಭವವಿರುತ್ತದೆ. ಪ್ರಯುಕ್ತ ತಮ್ಮ ಹೋಬಳಿಯಲ್ಲಿ ಬಿತ್ತನೆಗೆ ಅವಶ್ಯಕÀವಿರುವ ಮಳೆ ಸುರಿದಿದ್ದಲ್ಲಿ ಮಾತ್ರ ಬಿತ್ತನೆ ಕಾರ್ಯ ಕೈಗೊಳ್ಳಬೇಕು.
ಶಿಫಾರಸ್ಸು ಮಾಡಿದ ತಳಿಗಳು: ಬೀದರ ಜಿಲ್ಲೆಯ ಕೃಷಿ ವಲಯಕ್ಕೆ ಶಿಫಾರಸ್ಸು ಮಾಡಿದ ತಳಿಗಳಾದ ಜೆ.ಎಸ್.335 ಹಾಗೂ ಡಿ.ಎಸ್.ಬಿ-21 ಸೊಯಾ ತಳಿಗಳನ್ನು ಬೆಳೆಯುವುದು ಸೂಕ್ತ. ಬಿತ್ತನೆಗಾಗಿ ಪ್ರಮಾಣಿತ ಬಿತ್ತನೆ ಬೀಜಗಳನ್ನೆ ಬಳಸುವುದು ಅಥವಾ ರೈತರು ಕಳೆದ ವರ್ಷದಲ್ಲಿ ತಾವೇ ಬೆಳೆದ ಬೀಜಗಳ ಮೊಳಕೆ ಪ್ರಮಾಣವನ್ನು ಪರೀಕ್ಷಿಸಿ ಶೇ.70 ರಷ್ಟು ಮೊಳಕೆ ಇದ್ದಲ್ಲಿ ಬಿತ್ತನೆ ಮಾಡಬಹುದು ಎಂದು ಅವರು ಸಲಹೆ ಮಾಡಿದ್ದಾರೆ.
ಮಳೆ ವಿವರ: ಬೀದರ ಜಿಲ್ಲೆಯಲ್ಲಿ ದಿನಾಂಕ 01.06.2021 ರಿಂದ 10.06.2021ರ ಬೆಳಿಗ್ಗೆ 08.30 ರವರೆಗೆ ಬಂದಿರುವ ಮಳೆ ವಿವರ ಹೋಬಳಿವಾರು ಈ ಕೆಳಕಂಡAತಿದೆ. ಔರಾದ (ಬಿ) 80 ಮಿ.ಮೀ, ಚಿಂತಾಕಿ 65 ಮಿಮೀ, ಸಂತಪೂರ 81 ಮಿ.ಮೀ, ಕಮಲನಗರ 70 ಮಿ.ಮೀ, ದಾಬಕಾ(ಸಿ) 48 ಮಿ.ಮೀ, ಠಾಣಾಕೂಶನೂರ 111 ಮಿ.ಮೀ, ಬೀದರ ದಕ್ಷಿಣ 44 ಮಿ.ಮೀ, ಬಗದಲ 38 ಮಿ.ಮೀ, ಜನವಾಡ 57 ಮಿ.ಮೀ, ಕಮಠಾಣ 38 ಮಿ.ಮೀ, ಮನ್ನಳ್ಳಿ 46 ಮಿ.ಮೀ, ಹಲಬರ್ಗಾ 37 ಮಿ.ಮೀ, ಖಟಕಚಿಂಚೋಳಿ 38 ಮಿ.ಮೀ, ಲಖನಗಾಂವ 60 ಮಿ.ಮೀ, ಸಾಯಗಾಂವ 41 ಮಿ.ಮೀ, ನಿಟ್ಟೂರ 112 ಮಿ.ಮೀ, ಬಸವಕಲ್ಯಾಣ 14 ಮಿ.ಮೀ, ಕೋಹಿನೂರ 23 ಮಿ.ಮೀ, ಮಂಠಾಳ 16 ಮಿ.ಮೀ, ಮುಡಬಿ 16 ಮಿ.ಮೀ, ರಾಜೇಶ್ವರ 32 ಮಿ.ಮೀ, ಹುಮನಬಾದ 31 ಮಿ.ಮೀ, ದುಬಲಗುಂಡಿ 42 ಮಿ.ಮೀ, ಹಳ್ಳಿಖೇಡ (ಬಿ) 23 ಮಿ.ಮೀ, ಚಿಟಗುಪ್ಪಾ 24 ಮಿ.ಮೀ, ಬೆಮಳಖೇಡಾ 38 ಮಿ.ಮೀ, ನಿರ್ಣಾ 42 ಮಿ.ಮೀ, ಹೂಲಸೂರ 29 ಮಿ.ಮೀ ಮಳೆಯು ಸುರಿದಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Latest Indian news

Popular Stories

error: Content is protected !!