ಡಿಪ್ಲೋಮಾ ಮತ್ತು ಪೋಸ್ಟ್ ಗ್ಯಾಜುಯೇಟ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೀದರ ಜುಲೈ 16 (ಕರ್ನಾಟಕ ವಾರ್ತೆ) 2021-22ನೇ ಸಾಲಿನ ಡಿಪ್ಲೊಮಾ ಮತ್ತು ಪೋಸ್ಟ್ ಗ್ರ‍್ಯಾಜುಯೇಟ್ ಡಿಪ್ಲೊಮಾ ಪ್ರವೇಶಕ್ಕೆ ಆನ್‌ಲೈನ್, ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಯುಕ್ತ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) – 3 years ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT) – 3 years & ಪೋಸ್ಟ್ ಗ್ರ‍್ಯಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೋಸೆಸ್ಸಿಂಗ್ & ಟೆಸ್ಟಿಂಗ್ (PGD-PPT) – 2 years ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಆರ್.ಟಿ. ನಾಗರಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ.25 ಕೊನೆಯ ದಿನಾಂಕ ಆಗಿರುತ್ತದೆ.
ಎಸ್.ಎಸ್.ಎಲ್.ಸಿ , ಪಿ.ಯು.ಸಿ.(ವಿಜ್ಞಾನ) ಮತ್ತು ಬಿ.ಎಸ್.ಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು, ಹಾಜರಾದವರು ಜುಲೈ. 29 ರಂದು ಕಂಪ್ಯೂಟರ್ ಬೇಸ್ಡ್ ಪ್ರವೇಶ ಪರೀಕ್ಷೆ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗೆ : www.cipet.gov.in ಅಥವಾ ದೂ: 0821-2510618, 9480253024, 9141075968 ಕ್ಕೆ ಸಂಪರ್ಕಿಸಬಹುದು.

Latest Indian news

Popular Stories

error: Content is protected !!