ಅತಿಥಿ ಶಿಕ್ಷಕರು, ಉಪನ್ಯಾಸಕರುಗಳ ನೇಮಕಕ್ಕೆ ಅರ್ಜಿ ಆಹ್ವಾನ

ಬೀದರ ಜುಲೈ 16 (ಕರ್ನಾಟಕ ವಾರ್ತೆ) ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಕಾಲೇಜಿನಲ್ಲಿ ಖಾಲಿ ಇರುವ ವಿಷಯವಾರು ಶಿಕ್ಷಕ, ಉಪನ್ಯಾಸಕರುಗಳಿಗೆ 2021-22ನೇ ಸಾಲಿಗೆ ಗೌರವಧನದ ಆಧಾರದ ಮೇಲೆ ಅತಿಥಿ ಶಿಕ್ಷಕರ ನೇಮಕಕ್ಕೆ B.A B.Ed & B.sc B.Ed ಕೋರ್ಸ ಮತ್ತು ಉಪನ್ಯಾಸಕರ ಹುದ್ದೆಗೆ MA .BEd & M.sc B.Ed ಮುಗಿಸಿದ ಸಂಬ0ಧಪಟ್ಟ ವಿಷಯವಾರು ಶಿಕ್ಷಕ,ಉಪನ್ಯಾಸಕರುಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಜುಲೈ.23 ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತರು: ತಮ್ಮ ಧೃಡೀಕೃತ ಸ್ವವಿವರ ಬಯೋಡಾಟ, ರೆಸೂಮ್ ಹಾಗೂ ಅನುಭವ ಪ್ರಮಾಣ ಪತ್ರ ಅಂಕಪಟ್ಟಿಗಳೊAದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ ಭವನ, ಗುರುನಾನಕ ಝಿರಾದಿಂದ ಚಿಕ್‌ಪೇಟ ರಿಂಗ್ ರಸ್ತೆ ಎಲ್‌ಐಜಿ ಎಮ್‌ಐಜಿ ಕಾಲೋನಿ ಹಿಂದಗಡೆ ಬೀದರ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ:ತಾಲೂಕ ವಿಸ್ತರಣಾಧಿಕಾರಿಗಳಾದ ಉಮೇಶ:-9448844387, ಪವೀತ್ರಾ-9731801013 ಸವಿತಾ-8073144502, ವಿಠಲ್ ಘಾಟೆ-9663948049 ಮತ್ತು ಜಿಲ್ಲಾ ಸಮನ್ವಯ ಅಧಿಕಾರಿಯಾದ ಡಾ:ಸುದರ್ಶನ-9164559747 ಇವರನ್ನು ಸಂಪರ್ಕಿಸಬಹುದು.

Latest Indian news

Popular Stories

error: Content is protected !!