ಸಿ.ಎಸ್.ಸಿ.ಕೇಂದ್ರಗಳ ಮೇಲೆ ಅಧಿಕಾರಿಗಳ ದಾಳಿ; ಎರಡು ಕೇಂದ್ರಗಳಿಗೆ ಬೀಗ

ಬೀದರ ಜುಲೈ02 (ಕರ್ನಾಟಕ ವಾರ್ತೆ):- ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಅಸಂಘಟಿತ ವಲಯದ 11 ವರ್ಗದ ಕಾರ್ಮಿಕರಿಗೆ ತಲಾ 2,000 ರೂ.ಗಳ ಒಂದು ಬಾರಿಯ ಆರ್ಥಿಕ ನೆರವನ್ನು ಘೋಷಿಸಿರುತ್ತದೆ. ಅರ್ಹ ಫಲಾನುಭವಿಗಳಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಜುಲೈ.31 ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ.
ಅರ್ಹ ಫಲಾನುಭವಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ತಂತ್ರಾAಶದಲ್ಲಿ ನೇರವಾಗಿ,ಸಿಟಿಜನ್ ಲಾಗಿನ್ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಗ್ರಾಮೀಣ ಮಟ್ಟದಲ್ಲಿ ಗ್ರಾಮ್ ಒನ್ ಕೇಂದ್ರದ ಮೂಲಕ ಹಾಗೂ ನಗರ ಪ್ರದೇಶಗಳಲ್ಲಿ ಸೇವಾ ಸಿಂಧು ನಾಗರಿಕ ಸೇವಾ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಮೂಲಕ 25 ರೂ.ಗಳ ನಿಗದಿತ ಸೇವಾ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಬೀದರ್ ನಗರದ ಹರಳಯ್ಯ ಸರ್ಕಲ್ ಹತ್ತಿರದ ಸೇವಾ ಸಿಂಧು ಕೇಂದ್ರ ಕಟ್ಟಡ ಕಾರ್ಮಿಕರ ನೋಂದಣಿಗೆ 600 ರೂ. ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಪರಿಹಾರ ಕೋರಿಕೆ ಅರ್ಜಿ ಹಾಕಲು 200 ರೂ. ರಂತೆ ಸೇವಾ ಶುಲ್ಕ ಪಡೆಯುತ್ತಿದ್ದರೆ, ಹಳೆ ಬಸ್ ನಿಲ್ದಾಣದ ಬಳಿ ಇರುವ ಹೊಸ ಚಿಗುರು ಸಾಮಾನ್ಯ ಸೇವಾ ಕೇಂದ್ರವು 600 ರೂ. ಹಾಗೂ 250 ರೂ. ಮತ್ತು ಅಂಬೇಡ್ಕರ್ ಸರ್ಕಲ್ ಬಳಿ ಇರುವ ಇ.ಸರ್ವಿಸ ಇಂಟರ್ ನೆಟ್ ಆನ್‌ಲೈನ್ ಸರ್ವಿಸ ಕೇಂದ್ರವು ಕಟ್ಟಡ ಕಾರ್ಮಿಕರ ನೋಂದಣಿ ಅರ್ಜಿ ಹಾಕಲು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರದ ಅರ್ಜಿ ಹಾಕಲು ಫಲಾನುಭವಿಗಳಿಂದ ತಲಾ 1000 ರೂ. ಗಳಂತೆ ಸೇವಾಶುಲ್ಕ ಪಡೆಯುತ್ತಿರುವುದಾಗಿ ತಿಳಿಸಿರುತ್ತಾರೆ.
ಸಾಮಾನ್ಯ ಸೇವಾ ಕೇಂದ್ರಗಳು ಸರ್ಕಾರ ನಿಗದಿಪಡಿಸಿರುವ ಸೇವಾ ಶುಲ್ಕಕ್ಕಿಂತ ಹೆಚ್ಚು ಮೊತ್ತವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿರುವ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ಕಾರ್ಮಿಕ ಆಯುಕ್ತರು, ಬೆಂಗಳೂರು ಅವರು ಜಿಲ್ಲಾಧಿಕಾರಿಗಳು, ಬೀದರ್ ಅವರನ್ನು ಕೋರಿದ್ದು, ಈ ದಿನ ಜಿಲ್ಲಾಧಿಕಾರಿಗಳು ಬೀದರ್ ರವರ ಸೂಚನೆ ಮೇರೆಗೆ , ಕಲಬುರಗಿಯ ಉಪಕಾರ್ಮಿಕ ಆಯುಕ್ತರಾದ ಡಿ.ಜಿ.ನಾಗೇಶ್, ಕಾರ್ಮಿಕ ಅಧಿಕಾರಿಗಳಾದ ರಮೇಶ್ ಸುಂಬಡ, ಬೀದರ ತಹಸೀಲ್ದಾರರಾದ ಶ್ರೀಮತಿ ಹೆಚ್.ಸಿ.ಗಂಗಾದೇವಿ, ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಪಕರಾದ ವಿರೇಶ್ ಸ್ವಾಮಿ, ವೀರೆಂದ್ರ ಬೊಮ್ಮ ಹಾಗೂ ಸಚಿನ್ ಉಪ್ಪೆ ಜಿಲ್ಲಾ ವ್ಯವಸ್ಥಾಪಕರು ಸಾಮಾನ್ಯ ಸೇವಾ ಕೇಂದ್ರ, ಸತೀಶ್ ವಾಲೆ ಜಿಲ್ಲಾಧಿಕಾರಿಗಳ ಕಛೇರಿ, ಸುಭಾಷ್ ಹೆಲ್ತ ಇನ್ಸಪೇಕ್ಟರ್ ಹಾಗೂ ಬಸವರಾಜ ನಗರ ಪೋಲಿಸ್ ಸಿಬ್ಬಂದಿ ನಗರ ಪೋಲಿಸ್ ಠಾಣೆ ಇವರುಗಳನ್ನು ಒಳಗೊಂಡ ತಂಡವು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಿದರು.
ಕಟ್ಟಡ ಕಾರ್ಮಿಕರ ನೋಂದಣಿ ಹಾಗೂ 11 ಅಸಂಘಟಿತ ವಲಯದ ಕಾರ್ಮಿಕರ ಪರಿಹಾರಕ್ಕೆ ಅರ್ಜಿ ಹಾಕಲು ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚು ಶುಲ್ಕ ತೆಗೆದುಕೊಳ್ಳುವುದು, ಸಿ.ಎಸ್.ಸಿ ಐಡಿ ನಿಶಕ್ರಿಯಾ ಆಗಿದ್ದರು, ಸೇವಾ ಸಿಂಧುವಿನ ಸೀಟಿಜನ್ ಲಾಗಿನ್ ಮುಖಾಂತರ 600 ರೂ. ಶುಲ್ಕ ಪಡೆದು ನೇರವಾಗಿ ಅರ್ಜಿ ಸಲ್ಲಿಸುತ್ತಿರುವುದು ಕಂಡುಬAದಿರುತ್ತದೆ ಎಂದು ಕಾರ್ಮಿಕ ಇಲಾಖೆ ಕಛೇರಿಯ ಕೆಳಗೆ ಇರುವ ನೆಲ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸನ್ ಶೈನ್ ಸರ್ವಿಸ ಸಾಮಾನ್ಯ ಸೇವಾ ಕೇಂದ್ರ ಮತ್ತು            ಇ.ಸರ್ವಿಸ ಇಂಟರ್ ನೆಟ್ ಆನ್‌ಲೈನ್ ಸರ್ವಿಸ ವಾಜೀದ್ ಕಾಂಪ್ಲೆಕ್ಸ ಅಂಬೇಡ್ಕರ ವೃತ್ತ ಎಂಬ 2 ಸಾಮಾನ್ಯ ಸೇವಾ ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ.
ಹಳೆ ಬಸ್ ನಿಲ್ದಾಣ ಬೀದರ್ ಇಲ್ಲಿ ಇರುವ ಹೊಸ ಚಿಗುರು ಎಂಬ ಸಾಮಾನ್ಯ ಸೇವಾ ಕೆಂದ್ರದಲ್ಲಿ ಅಧಿಕ ಸೇವಾ ಶುಲ್ಕ ವಿಧಿಸಿ ಅರ್ಜಿ ಹಾಕುತ್ತಿರುವ ಬಗ್ಗೆ ಮಾಹಿತಿ ಮತ್ತು ದಾಖಲೆ ಲಭ್ಯವಾಗಿರುವುದಿಲ್ಲ. ಅರ್ಜಿ ಸಲ್ಲಿಸಲು ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ತೆಗೆದುಕೊಳ್ಳಬಾರದೆಂದು ತಿಳುವಳಿಕೆ ನೀಡಲಾಯಿತು ಹಾಗೂ ಸದರಿ ಸಂಸ್ಥೆ ಮೇಲೆ ಇರುವ ದೂರಿನ ಬಗ್ಗೆ ನೋಟಿಸ್ ಜಾರಿ ಮಾಡಲಾಗುವುದು.
ಕಟ್ಟಡ ಕಾರ್ಮಿಕರು ನೋಂದಣಿಗಾಗಿ ಮತ್ತು 11 ವಲಯದ ಅಸಂಘಟಿತ ಕಾರ್ಮಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಹೋದಾಗ ಸಾಮಾನ್ಯ ಸೇವಾ ಕೇಂದ್ರಗಳು ಒದಗಿಸುವ ಸೇವೆಗೆ ಸ್ವೀಕೃತಿ ಮತ್ತು ಶುಲ್ಕದ ರಶೀದಿ ನೀಡಬೇಕೆಂದು ಕೇಳುವುದು. ಸ್ವೀಕೃತಿ ಅಥವಾ ಶುಲ್ಕದ ರಶೀದಿಯಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚು ಮೊತ್ತ ಕೇಳಿದಲ್ಲಿ ಅಂತಹ ಸಾಮಾನ್ಯ ಸೇವಾ ಕೇಂದ್ರದ ಮೇಲೆ ಜಿಲ್ಲಾಧಿಕಾರಿಗಳು, ಬೀದರ್ ಅಥವಾ ಜಿಲ್ಲಾ ಯೋಜನಾ ವ್ಯವಸ್ಥಾಪಕರು, ಸೇವಾ ಸಿಂಧು ಮೊ. 6363256373 ಅಥವಾ ಜಿಲ್ಲಾ ವ್ಯವಸ್ಥಾಪಕರು, ಸಾಮಾನ್ಯ ಸೇವಾ ಕೇಂದ್ರ, ಬೀದರ್ ಮೊ. 9538753252/8660815121 ಅಥವಾ ಕಾರ್ಮಿಕ ಅಧಿಕಾರಿ ಮೊ.9972776880 ಬೀದರ್ ಇವರಿಗೆ ದೂರು ನೀಡಬಹುದು ಹಾಗೆಯೇ ಸರ್ಕಾರದ ಸೇವೆಗಳನ್ನು ಒದಗಿಸಲು ನಿಗದಿ ಪಡಿಸಿದ ಸೇವಾ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾಮಾನ್ಯ ಸೇವಾ ಕೇಂದ್ರಗಳಿಗೆ ಹಾಗೂ ಸಾಮಾನ್ಯ ಸೇವಾ ಕೆಂದ್ರಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಕೆಫೆಗಳಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Latest Indian news

Popular Stories

error: Content is protected !!