ಕೋವಿಡ್-19, ಇತರೇ ಕಾರಣ: ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ಕ್ರಮ

ಬೀದರ ಮೇ 30 (ಕರ್ನಾಟಕ ವಾರ್ತೆ): ಕೋವಿಡ್-19 ಹಾಗೂ ಇತರೇ ಕಾರಣದಿಂದ ಮರಣ ಹೊಂದಿದ ಪಾಲಕರ ಮಕ್ಕಳು ಮತ್ತು ದುಡಿಯುವ ಪೋಷಕರು ಮರಣ ಹೊಂದಿದ ಮಕ್ಕಳಿಗೆ ಪುನರ್ವಸತಿ ಮತ್ತು ಸಹಾಯ ಕಲ್ಪಿಸುವುದಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಮೇ.30ರಂದು ವಿಡಿಯೋ ಸಂವಾದ ನಡೆಸಿ ಸುಧೀರ್ಘ 3 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ವಿಡಿಯೋ ಸಂವಾದದಲ್ಲಿ ಎಲ್ಲ ತಹಸೀಲ್ದಾರರು ಮತ್ತು ತಾಲೂಕುಮಟ್ಟದ ಬಿಇಓ, ಸಿಡಿಪಿಓ ಅವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವಂತೆ ಹಾಗೂ ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅವರು ನೀಡಿರುವ ಶಿಫಾರಸ್ಸಿನ ಅಂಶಗಳAತೆ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕ್ರಮಗಳು ಕಾಲಮಿತಿಯೊಳಗೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲಿಗೆ ಮಾರ್ಚ 2020 ರಿಂದ ಇಲ್ಲಿಯವರೆಗೆ ಕೊವಿಡ್-19ನಿಂದ ಮರಣ ಹೊಂದಿರುವ ಪಾಲಕರ ಅನಾಥ ಮಕ್ಕಳು ಹಾಗೂ ದುಡಿಯುವ ಪಾಲಕ ಮರಣ ಹೊಂದಿದ್ದ ಪಕ್ಷದಲ್ಲಿ ಅವರ ಮಕ್ಕಳು ಹಾಗೂ ಇತರೆ ಕಾರಣದಿಂದ ಮರಣ ಹೊಂದಿದ ಪಾಲಕರ ಮಕ್ಕಳ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಹೊಂದಿರುವ ಮಾಹಿತಿಯನ್ನು ಕೆಪಿಎಂಇಯಿAದ ತುರ್ತಾಗಿ ಪಡೆಂiÀಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕೋವಿಡ್-19 ನಿಂದ ಅಥವಾ ಇತರೆ ಕಾರಣದಿಂದ ಮರಣ ಹೊಂದಿದ ಪಾಲಕರ ಮಕ್ಕಳು ಅನಾಥರಾಗಿದ್ದಲ್ಲಿ ಹಾಗೂ ದುಡಿಯುವ ಪೊಷಕರು, ಮರಣ ಹೊಂದಿದ್ದಲ್ಲಿ ಅಂತಹ ಮಕ್ಕಳ ಮಾಹಿತಿಯನ್ನು ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹಾಗೂ ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ ಅವರು ಶಿಫಾರಸ್ಸು ಮಾಡಿರುವ ಎಲ್ಲಾ ಅಂಶಗಳ ಕುರಿತು ಚರ್ಚಿಸಲು ನಡೆಸಿದ ಸಭೆಯ ಮಾಹಿತಿಯನ್ನು ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ ರೂಪಿಸಿರುವ ಬಾಲ ಸ್ವರಾಜ್ ತಂತ್ರಾAಶದಲ್ಲಿ ಅಳವಡಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತುರ್ತಾಗಿ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಗ್ರಾಮ ಹಾಗೂ ತಾಲೂಕುಮಟ್ಟದ ರಕ್ಷಣಾ ಸಮಿತಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಕಷ್ಟದಲ್ಲಿ ಇರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ಪುನರ್ವಸತಿ ಕಲ್ಪಿಸುವುದಕ್ಕಾಗಿ ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ಕಂಡುಬAದಲ್ಲಿ ಮಕ್ಕಳು ಸಹಾಯವಾಣಿ ಸಂಖ್ಯೆ 1098, ಪೊಲೀಸ್ ಸಹಾಯವಾಣಿ ಸಂಕ್ಯೆ 112 ಹಾಗೂ ಮಕ್ಕಳಿಗೆ ಆಪ್ತ ಸಮಾಲೋಚನೆ ಬೇಕಾದ್ದಲ್ಲಿ ಟೇಲಿ ಕಾನ್ಸಲಿಂಗ್ ನಂಬರ್ 14499 ಕರೆ ಮಾಡುವಂತೆ ಸಭೆಯಲ್ಲಿ ತಿಳಿಸಲಾಯಿತು.
ಕೋವಿಡ್ ತುರ್ತು ಸಂದರ್ಭದಲ್ಲಿ ಕೊವಿಡ್‌ನಿಂದ ಭಾದಿತರಾದ ಮಕ್ಕಳಿಗೆ ಸಹಾಯ ಧನ ನೀಡಲು ಜಿಲ್ಲಾ ಮಟ್ಟದಲ್ಲಿ ಬೀದರ್ ಜಿಲ್ಲಾ ಬಾಲ ನ್ಯಾಯ ನಿಧಿಯನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಜಂಟಿ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಸೂಚಿಸಲಾಯಿತು.
ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಒಂದು ಸದಸ್ಯತ್ವ ಹುದ್ದೆ ಖಾಲಿಯಿದ್ದು, ಅದನ್ನು ತುರ್ತಾಗಿ ಭರ್ತಿಮಾಡಿಕೊಳ್ಳಲು ಪ್ರಸ್ತಾವನೆಯನ್ನು ನಿರ್ದೇಶಕರು ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಅವರಿಗೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಪಂ ಸಿಇಓ ಜಹೀರಾ ನಸೀಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಡಾ.ಭುವನೇಶ ಪಾಟೀಲ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಟಿ.ಆರ್.ದೊಡ್ಡೆ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ಡಿಎಚ್‌ಓ ಡಾ.ವಿ.ಜಿ.ರೆಡ್ಡಿ, ಬೀದರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ ಹಾಗೂ ಇತರರು ಇದ್ದರು.

Latest Indian news

Popular Stories

error: Content is protected !!