ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಭಾಷಾ ಬಳಕೆಗೆ ಸುತ್ತೋಲೆ ಮೂಲಕ ಆದೇಶ –ಡಾ. ವಿ.ಜಿ. ರೆಡ್ಡಿ

ಬೀದರ, ಜುಲೈ. ೦೨ ಃ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಭಾಷಾ ಬಳಕೆಗೆ ಹಾಗೂ ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹಿರಿಸಲು ಸುತ್ತೋಲೆಯ ಮೂಲಕ ಎಲ್ಲ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಆದೇಶಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಅವರು ಭರವಸೆ ನೀಡಿದರು.
ಅವರು ಇಂದು ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನ ಅಂಗವಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರು ಸಲ್ಲಿಸಿದ ಮನವಿ ಪತ್ರ ಸ್ವೀಕರಿಸಿ ಮಾತನಾಡುತ್ತ, ನಗರ ಹಾಗೂ ಗ್ರಾಮೀಣ ಭಾಗದ ಖಾಸಗಿ ಕ್ಲಿನಿಕ್ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಾಮಫಲಕಗಳು ಕನ್ನಡ ಭಾಷೆಯಲ್ಲಿರಬೇಕು. ಹಾಗೂ ವೈದ್ಯರು ರೋಗಿಗಳೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಸರ್ಕಾರದಿಂದ ಈಗಾಗಲೇ ಸುತ್ತೋಲೆ ಬಂದಿದೆ. ಇದನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯಿಂದ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ರೋಗ ಮತ್ತು ರೋಗಿಯ ಚಿಕಿತ್ಸೆ ಫಲಿತವಾಗುವುದು ವೈದ್ಯನ ಔಷಧಿ ಅಥವಾ ಚುಚ್ಚುಮದ್ದಿನಿಂದಷ್ಟೇ ಅಲ್ಲ: ಇಲ್ಲಿ ವೈದ್ಯನ ಸಾಂತ್ವನದ ಮಾತು ಕೂಡ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ವೈದ್ಯಕೀಯ ವಲಯದಲ್ಲಿ ಬರುವ ವಿಶೇಷ ಪರಿಣ ತ ಶಸ್ತçಚಿಕಿತ್ಸಕರಿಂದ ಹಿಡಿದು ಶುಸ್ರೂಷಣಾ ಸಿಬ್ಬಂದಿಯವರೆಗೆ ಸೇವೆಯರಿಸಿ ಬಂದ ರೋಗಿಗಳಿಗೆ, ಅವರದೇ ಭಾಷೆಯಲ್ಲಿ ಸೇವೆ ನೀಡುವುದು ಸೇವೆಯ ಮೂಲ ಆಶಯ ಎಂದು ಭಾವಿಸುವುದು ವೈದ್ಯ ವೃತ್ತಿಯ ಆದ್ಯ ಕರ್ತವ್ಯವಾಗಿದೆ ಮತ್ತು ಇದು ಪ್ರತಿ ರೋಗಿಯ ಹಕ್ಕು ಕೂಡ.
ಕರೋನಾ ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಮಾನಸಿಕ ದುಗುಡದ ನಡುವೆ ರೋಗಿ ಮತ್ತು ವೈದ್ಯರ ನಡುವಿನ ಸಂಬAಧವನ್ನು ಭಾಷೆಯ ನೆಲೆಯಲ್ಲಿ ಗಟ್ಟಿಗೊಳಿಸುತ್ತಾ ರೋಗಿ ಮತ್ತು ವೈದ್ಯಕೀಯ ವಲಯದಲ್ಲಿ ಜಾಗೃತಿ ಮೂಡಿಸುವುದೇ ಈ ಅಭಿಯಾನದ ಮೂಲ ಆಶಯವಾಗಿದೆ.
ಡಾ. ಬಿ.ಸಿ ರಾಯ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಜುಲೈ ೧ ರಂದು ರಾಷ್ಟಿçÃಯ ವೈದ್ಯರ ದಿನದ ಸಂದರ್ಭದಲ್ಲಿ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿರುವ ಎಲ್ಲಾ ವೈದ್ಯಕೀಯ ವಲಯದ ಸಿಬ್ಬಂದಿಗಳು ಕನ್ನಡ ಬಲ್ಲವರಾದರೆ, ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಸುಲಭವಾಗುತ್ತದೆ.
ವೈದ್ಯಕೀಯ ಶಿಕ್ಷಣಕ್ಕಾಗಿ ರಾಜ್ಯಕ್ಕೆ ಬಂದಹೊರ ರಾಜ್ಯ / ಹೊರ ದೇಶದವರು ಶಿಕ್ಷಣವನ್ನು ಪಡೆದ ನಂತರ ಇಲ್ಲಿಯೇ ನೆಲೆನಿಲ್ಲುವವರು ಹಾಗೂ ಉಳಿದವರೂ ಕೂಡ ಕಡ್ಡಾಯವಾಗಿ ಕನ್ನಡ ಕಲಿಯುವಂತಾಗಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಿಸಿಕೊಂಡು ಶಿಕ್ಷಣ ಪಡೆದು ಬದುಕು ರೂಪಸಿಕೊಂಡವರು ಇಲ್ಲಿಯ ಭಾಷೆಯನ್ನು ಬಳಿಸುವುದು ಔಚಿತ್ಯಪೂರ್ಣವಾಗಿದೆ.
ಅವರು ಸುಮಾರು ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸ ಮಾಡುತ್ತಾರೆ ಎಂದಾದರೆ ಅವರು ಕನಿಷ್ಠಪಕ್ಷ ರೋಗಿಯೊಂದಿಗೆ ಸಂವಹನ ದೃಷ್ಟಿಯಿಂದಾದರೂ ಓದಲು, ಬರೆಯು ಮತ್ತು ಮಾತನಾಡಲು ಕಲಿತುಕೊಂಡು ಕನ್ನಡದಲ್ಲಿ ಸೇವೆ ನೀಡಬೇಕು ಎಂಬುದಷ್ಟೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾ ಕನ್ನಡ ಅನುಷ್ಟಾನ ಸಮಿತಿ ಕಳಕಳಿಯ ಮನವಿಯಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರಾದ ವಿಜಯಕುಮಾರ ಸೋನಾರೆ, ಎಂ.ಪಿ. ಮುದಾಳೆ, ಕನ್ನಡಪರ ಸಂಘಟನೆಗಳ ಮುಖಂಡರಾದ ಶ್ರೀಮಂತ ಸಪಾಟೆ, ಸುನೀಲ ಭಾವಿಕಟ್ಟಿ, ರವಿ ಕಾಂಬಳೆ ಮತ್ತು ಚಂದ್ರಕಾAತ ಹಳ್ಳಿಖೇಡಕರ್ ಅವರು ಸೇರಿದಂತೆ ಮೊದಲಾದವರು ಇದ್ದರು.

Latest Indian news

Popular Stories

error: Content is protected !!