ಮಕ್ಕಳಿಗೂ ಕೋರೋನಾ ಸೋಂಕು ಹರಡುವ ಸಾಧ್ಯತೆ: ಸಿದ್ಧತೆಗಾಗಿ ಜಿಲ್ಲಾಧಿಕಾರಿಗಳಿಂದ ತುರ್ತು ಸಭೆ

  • ಪಕ್ಕದ ಮಹಾರಾಷ್ಟದಲ್ಲಿ ಮಕ್ಕಳಿಗೂ ಕೋರೊನಾ ಸೋಂಕು
  • ಮೂರನೇ ಅಲೆ: ಮಕ್ಕಳಿಗೂ ಕೋವಿಡ್ ಒಕ್ಕರಿಸುವ ಸಾಧ್ಯತೆ
  • ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ
  • ಸಭೆಯಲ್ಲಿ ಮಕ್ಕಳರೋಗ ತಜ್ಞರು, ಸ್ತ್ರೀರೋಗ ತಜ್ಞರು ಭಾಗಿ

ಬೀದರ ಜೂನ್ 01 (ಕರ್ನಾಟಕ ವಾರ್ತೆ): ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಸೋಂಕು ಮಕ್ಕಳಲ್ಲೂ ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಜೂನ್ 1ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎರಡು ಗಂಟೆಗೆ ಹೆಚ್ಚು ಕಾಲ ನಡೆದ ಈ ಜಿಲ್ಲಾ ಸಮನ್ವಯ ಸಮಿತಿಯ ತುರ್ತು ಸಭೆಯಲ್ಲಿ ವಿಶೇಷವಾಗಿ ಬ್ರಿಮ್ಸ್ ಆಸ್ಪತ್ರೆಯ ಮಕ್ಕಳರೋಗ ತಜ್ಞರ ವಿಭಾಗದ ಮತ್ತು ಸ್ತಿçÃರೋಗ ತಜ್ಞರ ವಿಭಾಗದ ಮುಖ್ಯಸ್ಥರು ಮತ್ತು ಮಕ್ಕಳರೋಗ ಹಾಗೂ ಸ್ತಿçರೋಗ ತಜ್ಞ ವೈದ್ಯರು ಹಾಜರಿದ್ದು ಹಲವಾರು ಸಲಹೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪಕ್ಕದ ಮಹಾರಾಷ್ಟç ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಶಂಕಿತ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಹಾರಾಷ್ಟç ರಾಜ್ಯದೊಂದಿಗೆ ಬೀದರ ಜಿಲ್ಲೆಯು ಗಡಿ ಹಂಚಿಕೊAಡಿರುವ ಕಾರಣಕ್ಕೆ ನಾವುಗಳು ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಕೋವಿಡ್ ಎರಡನೇ ಅಲೆಯು ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಬೀದರ ಜಿಲ್ಲೆಯಲ್ಲಿ ವೈರಸ್ ಹರಡುವಿಕೆಯನ್ನು ಹತೋಟಿಗೂ ತರಲಾಗಿದೆ. ಕೋವಿಡ್ ವೈರಸ್ ಸೋಂಕಿತ ಪ್ರಕರಣಗಳ ಪ್ರಮಾಣವು ಈಗ ಎರಡಂಖ್ಯೆಗೆ ಇಳಿದಿದೆ. ಆದರೂ ಕೂಡ ಮೈಮರೆಯುವಂತಿಲ್ಲ. ಮೂರನೇ ಅಲೆಯಲ್ಲಿ ಮಹಾಮಾರಿ ಕೋರೋನಾ ವೈರಸ್ ಮಕ್ಕಳಿಗೂ ಹರಡುವ ಶಂಕೆ ಇದ್ದು, ಈಗಿನಿಂದಲೇ ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಒಂದು ವೇಳೆ ಜಿಲ್ಲೆಯಲ್ಲಿ ಮಕ್ಕಳಲ್ಲೂ ಕೋವಿಡ್ ಸೋಂಕು ಹರಡುವುದು ಕಂಡು ಬಂದಲ್ಲಿ ಇದಕ್ಕಾಗಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೂತನ ಬೋಧಕ ಆಸ್ಪತ್ರೆಯಲ್ಲಿ ಮತ್ತು 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಲಾ 50 ಬೆಡ್‌ಗಳನ್ನು ಮೀಸಲಿಡಬೇಕು. ಐಸಿಯು, ವೆಂಟಿಲೇಟರ್ ಜೊತೆಗೆ ಬೆಡ್‌ಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
1 ತಿಂಗಳಿನಿAದ 10 ವರ್ಷದ ಮಕ್ಕಳಲ್ಲಿ ಕೋರೋನಾ ಸೋಂಕು ಕಾಣಿಸಿಕೊಂಡಲ್ಲಿ ಆಯಾ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆಂದು ಮೀಸಲಿಡುವ ತಲಾ 50 ಬೆಡ್‌ಗಳಲ್ಲಿ 20 ಐಸಿಯು ಬೆಡ್‌ಗಳು ಇರಬೇಕು. 10 ನವಜಾತ ಶಿಶುಗಳ ಆರೈಕೆಗೆ ಕಾಯ್ದಿರಿಸಬೇಕು. 20 ಆಕ್ಸಿಜನ್ ಬೆಡ್‌ಗಳೆಂದು ವಿಭಾಗೀಕರಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
10 ವರ್ಷ ಮೇಲ್ಪಟ್ಟ ವಯೋಮಾನದ ಮಕ್ಕಳಲ್ಲಿ ಕಡಿಮೆ ತಿವ್ರತರವಾದ ಕಾಯಿಲೆಗೆ ಚಿಕಿತ್ಸೆ ನೀಡಲು 100 ಹಾಸಿಗೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಮತ್ತೆ 50 ಬೆಡ್‌ಗಳನ್ನು ಕಾಯ್ದಿರಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮಕ್ಕಳಿಗೆ ಕೊರೋನಾ ಸೋಕು ತೀವ್ರ ರೀತಿಯಲ್ಲಿ ಹರಡುವುದು ಕಂಡು ಬಂದಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ
ನೀಡಿ, ಅದನ್ನು ಸಮರ್ಪಕ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ತಜ್ಞ ವೈದ್ಯರಿಗೆ ಕೂಡಲೇ ನಿರಂತರವಾಗಿ ತರಬೇತಿಗೆ ವ್ಯವಸ್ಥೆ ಮಾಡಬೇಕು. ಜೊತೆಗೆ ಮಕ್ಕಳ ತಜ್ಞ ವೈದ್ಯರು ಕೂಡ ಅಗತ್ಯ ಸಂಖ್ಯೆಯಲ್ಲಿ ಇರಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಮಕ್ಕಳಿಗೂ ಕೋರೊನಾ ವೈರಾಣು ಸೋಂಕು ಹರಡುವ ಸಾಧ್ಯತೆ ಇದೆ ಎಂದು ಮೊದಲಿನಿಂದಲೂ ತಜ್ಞ ವೈದ್ಯರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಯಾ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ತಾವು ಚರ್ಚಿಸಿದ್ದು, ಮಕ್ಕಳಿ ಚಿಕಿತ್ಸೆಗಾಗಿ ತಲಾ 10 ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾಗಿ ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಸಭೆಗೆ ಮಾಹಿತಿ ನೀಡಿದರು. ಮಕ್ಕಳು ಕೊರೋನಾ ಪೀಡಿತರಾದಲ್ಲಿ ಅವರಿಗೆ ಬೇರೆ ವೈದ್ಯರು ಕೂಡ ಚಿಕಿತ್ಸೆ ನೀಡಬಹುದಾಗಿದೆ. ಆದಾಗ್ಯೂ ಜಿಲ್ಲೆಯಲ್ಲಿ ಬ್ರಿಮ್ಸ್ ಹಾಗೂ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರು ಇದ್ದಾರೆ ಎಂದು ಡಾ.ರೆಡ್ಡಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ, ಡಿಎಸ್‌ಓ ಡಾ.ಕೃಷ್ನಾ ರೆಡ್ಡಿ, ಆರ್‌ಸಿಎಚ್ ಅಧಿಕಾರಿ ಡಾ.ರಾಜಶೇಖರ, ಮಕ್ಕಳ ರೋಗ ತಜ್ಞರ ವಿಭಾಗದ ಡಾ.ಶಾಂತಲಾ ಕೌಜಲಗಿ, ಸ್ತಿçÃರೋಗ ತಜ್ಞರ ವಿಭಾಗದ ಮುಖ್ಯಸ್ಥರಾದ ಉಮಾ ದೇಶಮುಖ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

Latest Indian news

Popular Stories

error: Content is protected !!