ಬೀದರ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಮುಂದುವರೆದ ಕೋವಿಡ್-19 ಲಸೀಕಾಕರಣ

ಬೀದರ ಜುಲೈ 04 (ಕರ್ನಾಟಕ ವಾರ್ತೆ):- ಬೀದರ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರ್ಕಾರದ ಮಾರ್ಗಸೂಚಿಯನುಸಾರ 18 ಮತ್ತು 45 ವರ್ಷ ಮೇಲ್ಪಟ್ಟ ವಯೋಮಾನದವರಿಗೆ, ಹಾಲುಣಿಸುವ ತಾಯಂದಿರರಿಗೆ, ವಿಕಲಚೇತನರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನೀತರರಿಗೆ ಕೋವಿಡ್-19 ಲಸೀಕಾಕರಣ ಮುಂದುವರೆದಿದೆ.
ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಸೂಚನೆಯಂತೆ ಸಹಾಯಕ ಆಯುಕ್ತರು, ತಹಸೀಲ್ದಾರರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಕೋವಿಡ್ ಲಸೀಕಾರಣವು ಅಚ್ಚುಕಟ್ಟಾಗಿ ನಡೆಯಲು ಕ್ರಮ ವಹಿಸುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ: ತಹಸೀಲ್ದಾರ ಗಂಗಾದೇವಿ ಸಿ.ಎಚ್. ಅವರ ನೇತೃತ್ವದಲ್ಲಿ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಲಹಳ್ಳಿಯ ವಿದ್ಯಾರ್ಥಿಗಳಿಗೆ ಕೋವಿಡ್ ಲಸೀಕಾರಣ ನಡೆಯಿತು. ಭಾಲ್ಕಿಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಆದಿತ್ಯ ಕಾಲೇಜಿನಲ್ಲಿ, ಬೀದರ ತಾಲೂಕು ವೈದ್ಯಾಧಿಕಾರಿ ಡಾ.ಸಂಗಾರೆಡ್ಡಿ ಕೆ ಅವರ ಸಮ್ಮುಖದಲ್ಲಿ ಬೀದರನ ಇಂಟರನ್ಯಾಷನಲ್ ಕಾಲೇಜಿನಲ್ಲಿ ಕೋವಿಡ್ ಲಸೀಕಾರಣ ನಡೆಯಿತು.
ವಿಕಲಚೇನರಿಗೂ ಲಸಿಕೆ: ವೈದ್ಯಾಧಿಕಾರಿಗಳಾದ ಡಾ.ಮಾರ್ಥಂಡರಾವ್ ಖಾಶೆಂಪೂರಕರ ಅವರ ನೇತೃತ್ವದಲ್ಲಿ ಬೀದರನ ಜಿಲ್ಲಾ ನ್ಯಾಯಾಲಯದಲ್ಲಿನ ವಕೀಲರು ಮತ್ತು ಅಲ್ಲಿನ ಸಿಬ್ಬಂದಿ ಜೊತೆಗೆ ವಿಕಲಚೇತನರಿಗು ಕೂಡ ಕೋವಿಡ್ ಲಸೀಕಾರಣ ನಡೆಯಿತು.
ಗಡಿಭಾಗದ ಹಳ್ಳಿಗಳಲ್ಲೂ ಲಸೀಕಾರಣ: ಗಡಿ ಜಿಲ್ಲೆ ಬೀದರ ಜಿಲ್ಲಾದ್ಯಂತ ಗಡಿಭಾಗದ ಹಳ್ಳಿಗಳಲ್ಲಿ ಆಯಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕೋವಿಡ್ ಲಸೀಕಾರಣ ನಡೆಯುತ್ತಿದೆ. ಭಾಲ್ಕಿ ತಾಲೂಕಿನ ಲಖನಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ಮೋರೆ ಅವರ ಸಮ್ಮುಖದಲ್ಲಿ ಗಡಿಗೆ ಹೊಂದಿಕೊAಡ ಹಳ್ಳಿಗಳಲ್ಲಿ ಕೋವಿಡ್ ಲಸೀಕಾರಣ ನಡೆಯುತ್ತಿದೆ.
ಬ್ರಿಮ್ಸನಲ್ಲಿ ಮುಂದುವರೆದ ಲಸೀಕಾರಣ: ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ ಶೆಟಕಾರ ಅವರ ನೇತೃತ್ವದಲ್ಲಿ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ 18 ಮತ್ತು 45 ವರ್ಷಗಳ ಮೇಲ್ಪಟ್ಟವರಿಗೆ ಕೋವಿಡ್ ಲಸೀಕಾರಣ ಮುಂದುವರಿದಿದೆ.
ಹಾಲುಣಿಸುವ ತಾಯಂದಿರರಿಗೂ ಲಸಿಕೆ: ಬಸವಕಲ್ಯಾಣ ತಾಲೂಕಿನಲ್ಲಿ ವೈದ್ಯಾಧಿಕಾರಿ ಡಾ.ಪ್ರವೀಣಕುಮಾರ ಹೂಗಾರ ಅವರ ಸಮ್ಮುಖದಲ್ಲಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಲುಣಿಸುವ ತಾಯಂದಿರರಿಗೆ ಕೋವಿಡ್ ಲಸೀಕಾರಣ ನಡೆಯಿತು.
ಬಸ್ ನಿಲ್ದಾಣದಲ್ಲಿ ಕೋವಿಡ್ ತಪಾಸಣೆ: ಅನ್‌ಲಾಕ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಸ್ಸುಗಳು ಆರಂಭಗೊAಡಿದ್ದರಿAದ ಬೀದರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ನಿಮಿತ್ತ ಪ್ರಯಾಣಿಕರ ದೇಹದ ತಾಪಮಾನ ಪರಿಶೀಲಿಸಲಾಯಿತು. ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವವರಿಗೆ ನೀಡುವ ಟಿಕೇಟ್ ಮೇಲೆ ಕೊರೋನಾ ನಿಯಂತ್ರಿಸಲು ಲಸಿಕೆ ಹಾಕಿಸಿಕೊಳ್ಳಿರಿ ಮಾಸ್ಕ ಧರಿಸಿ ಪ್ರಯಾಣಿಸಿರಿ ಎಂದು ಮುದ್ರಿಸಿ ಕೋವಿಡ್ ಹರಡದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.

Latest Indian news

Popular Stories