ಕಸಾಯಿಖಾನೆ ನಡೆಸಿದರೆ ಶಿಸ್ತು ಕ್ರಮ

ಬೀದರ ಜೂನ್ 29 (ಕ.ವಾ.): ಗೋಹತ್ಯೆ ನಿಷೇಧ ಕಾಯಿದೆ ಜಾರಿ ಇದ್ದಾಗ್ಯೂ ಜಿಲ್ಲೆಯ ವಿವಿಧೆಡೆಯಲ್ಲಿ ಕಸಾಯಿಖಾನೆಗಳು ನಡೆಯುತ್ತಿವೆ ಎನ್ನುವ ದೂರುಗಳು ಇದ್ದು, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಸೂಚಿಸಿದರು.
ಜೂನ್ 29ರಂದು ಕಟ್ಟಿತೂಗಾಂವ್ ದೇವಣಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಸಚಿವರು, ಗೋವುಗಳ ರಕ್ಷಣೆ ಉದ್ದೇಶದಿಂದಲೇ ಗೋಹತ್ಯೆ ನಿಷೇಧ ಕಾಯಿದೆ ಜಾರಿ ತರಲಾಗಿದೆ. ಎಲ್ಲಿಯಾದರು ಯಾರಾದರು ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವುದು ಕಂಡು ಬಂದಲ್ಲಿ ಯಾರೇ ಇರಲಿ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಗೋವುಗಳನ್ನು ಹೈದ್ರಾಬಾದ್‌ಗೆ ಸಾಗಣೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಇದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಅಂತವರ ಮೇಲೆ ಸೂಕ್ತ ಪ್ರಮಾಣದ ದಂಢವಿದಿಸಿ ಎಚ್ಚರಿಕೆ ನೀಡಬೇಕು. ಜಿಲ್ಲೆಯ ಯಾವುದೇ ಕಡೆಗಳಲ್ಲಿ ಕಸಾಯಿಖಾನೆಗೆ ಹಸುಗಳು ಹೋಗದಂತೆ ಕ್ರಮ ವಹಿಸಬೇಕು ಎಂದು ಸಚಿವರು ಅಧಿಖಾರಿಗಳಿಗೆ ನಿರ್ದೇಶನ ನೀಡಿದರು.
311 ಹುದ್ದೆಗಳು ಭರ್ತಿ: ಪಶು ಸಂಗೋಪನೆ ಇಲಾಖೆಯನ್ನು ತಾವು ಮುಖ್ಯಮಂತ್ರಿಗಳ ಬಳಿ ವಿನಂತಿಸಿ ಪಡೆದುಕೊಂಡಿದ್ದಾಗಿ ತಿಳಿಸಿದ ಸಚಿವರು, ತಾವು ಪಶು ಸಂಗೋಪನೆ ಸಚಿವರಾದ ಮೇಲೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ ಒಟ್ಟು 504 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 311 ಭರ್ತಿಯಾಗಿವೆ. ಹತ್ತಾರು ವರ್ಷಗಳ ಕಾಲ ಭಡ್ತಿ ಇಲ್ಲದವರಿಗೆ ಮುಂಬಡ್ತಿ ನೀಡಲಾಗಿದೆ. ಇಲಾಖೆಯ ಕಾರ್ಯದರ್ಶಿಗಳಾದ ಮಣಿವಣ್ಣನ್ ಪಿ ಅವರೊಂದಿಗೆ ಹಲವಾರು ಬಾರಿ ಸಭೆ ನಡೆಸಿ ಚರ್ಚಿಸಿದ್ದು, ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು, 20202-21ನೇ ಸಾಲಿನಲ್ಲಿ ಎನ್.ಎಲ್.ಎಮ್. ಯೋಜನೆಯಡಿ ಗ್ರಾಮೀಣ ಕುರಿಮೇಕೆ ಸಾಕಾಣಿಕೆ ಯೋಜನೆಯಡಿ 44 ಜನ ಫಲಾನುಭವಿಗಳಿಗೆ ಒಟ್ಟು 26,13,600 ರೂ.ಗಳ ಸಹಾಯಧನ ವಿತರಿಸಲಾಗಿದೆ. 2020-21ನೇ ಸಾಲಿನಲ್ಲಿ ಬೀದರ ಜಿಲ್ಲೆಯ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ 3,38,818 ಹಾಗೂ ಪ್ರವಾಸ ಕಾಲದಲ್ಲಿ 1,54,133 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. 15563 ಜಾನುವಾರುಗಳಿಗೆ ಕಸಿ ಮಾಡಲಾಗಿದೆ ಎಂದು ತಿಳಿಸಿದರು.
ತಮ್ಮ ಮಾತೃ ಜಿಲ್ಲೆಯಲ್ಲಿ ಪಶು ಸಂಗೋಪನೆ ಇಲಾಖೆಯ ಯೋಜನೆಯ ಅನುಷ್ಠಾನಗಳ ಬಗ್ಗೆ ತಮಗೆ ಸಾಕಷ್ಟು ನಿರೀಕ್ಷೆ ಇದೆ ಎಂದು ತಿಳಿಸಿದ ಸಚಿವರು, 2020-21ನೇ ಸಾಲಿನಲ್ಲಿ 52084 ರಾಸುಗಳಿಗೆ ಕೈತಕ ಗರ್ಭಧಾರಣಿ ಮಾಡಿ ಶೇ.98 ಗುರಿ ಸಾಧಿಸಲಾಗಿದೆ. 46,775 ರಾಸುಗಳಿಗೆ ಗರ್ಭಪರೀಕ್ಷೆ, 2,53,527 ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ, 1,45,496 ಕುರಿ ಮೇಕೆಗಳಿಗೆ ಪಿ.ಪಿ.ಆರ್. ಲಸಿಕೆ, 2,86,792 ಕುರಿ ಮೇಕೆಗಳಿಗೆ ಕರುಳುಬೇನೆ ಲಸಿಕೆ, 1,60,486 ಕೋಳಿಗಳಿಗೆ ಕೊಕ್ಕರೆ ರೋಗದ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.
20202-21ನೇ ಸಾಲಿನಲ್ಲಿ ಎನ್.ಎಲ್.ಎಮ್. ಯೋಜನೆಯಡಿ ಗ್ರಾಮೀಣ ಕುರಿಮೇಕೆ ಸಾಕಾಣಿಕೆ ಯೋಜನೆಯಡಿ 44 ಜನ ಫಲಾನುಭವಿಗಳಿಗೆ ಒಟ್ಟು 26,13,600 ರೂ.ಗಳ ಸಹಾಯಧನ ವಿತರಿಸಲಾಗಿದೆ. 2020-21ನೇ ಸಾಲಿನಲ್ಲಿ ಬೀದರ ಜಿಲ್ಲೆಯ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ 3,38,818 ಹಾಗೂ ಪ್ರವಾಸ ಕಾಲದಲ್ಲಿ 1,54,133 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. 15563 ಜಾನುವಾರುಗಳಿಗೆ ಕಸಿ ಮಾಡಲಾಗಿದೆ ಎಂದರು.

Latest Indian news

Popular Stories