ಬಿಸಿ ಊಟದ ಬದಲಾಗಿ ಆಹಾರ ಧಾನ್ಯಗಳ ವಿತರಣೆ: ಸಿಇಓ

ಬೀದರ ಜೂನ್ 16 (ಕ.ವಾ.): ಮಧ್ಯಾಹ್ನ ಉಪಹಾರ ಯೋಜನೆಯಡಿ 2020-21ನೇ ಸಾಲಿನಲ್ಲಿ ಕೋವಿಡ್-19 ವೈರಾಣು ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಸಿಯೂಟ ಬದಲಾಗಿ ಆಹಾರ ಭದ್ರತೆ ಭತ್ಯೆಯಾಗಿ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನವ್ಹೆಂಬರ-2020 ರಿಂದ ಏಪ್ರಿಲ್-2021ರ ಮಾಹೆಯ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ 132 ಶಾಲಾ ದಿನಗಳಿಗೆ ಆಹಾರ ಭದ್ರತಾ ಭತ್ಯೆಯಾಗಿ ಬಿಸಿ ಊಟದ ಬದಲಾಗಿ ಆಹಾರ ಧಾನ್ಯಗಳನ್ನು ನಿಗದಿತ ಪ್ರಮಾಣದಲ್ಲಿ ವಿತರಣೆ ಮಾಡಲು ಆಹಾರ ಧಾನ್ಯಗಳನ್ನು ತಾಲೂಕಾವಾರು ಹಂಚಿಕೆ ಮಾಡಲಾಗಿದೆ.
ನವ್ಹೆಂಬರ್-2020 ರಿಂದ ಏಪ್ರಿಲ್-2021ರ ಮಾಹೆಯ 132 ಶಾಲಾ ದಿನಗಳ ಅವಧಿಗೆ 2ಲೀಟರ್ ಹಾಗೂ ಆಗಸ್ಟ-2020 ರಿಂದ ಆಕ್ಟೋಬರ-2020ರ ಮಾಹೆಯ 55 ಶಾಲಾ ದಿನಗಳ ಅವಧಿಗೆ 1ಲೀಟರ್ ಒಟ್ಟು 3 ಲೀಟರ ಖಾದ್ಯ ತೈಲ್ ಹಾಗೂ 1 ಕೆಜಿ.ಉಪ್ಪು ಹಾಗೂ ಅಕ್ಕಿ, ಗೋಧಿ ಮತ್ತು ತೊಗರಿಬೇಳೆ, ನಿಗದಿತ ಪ್ರಮಾಣದಲ್ಲಿ ವಿತರಿಸುವುದು.
ವಿದ್ಯಾರ್ಥಿಗೆ ವಿತರಣೆ ಮಾಡುವ ಆಹಾರ ಧಾನ್ಯಗಳು ಮತ್ತು ಪ್ರಮಾಣದ ಬಗ್ಗೆ ಸಾರ್ವಜನಿಕರ ಗಮನಕ್ಕಾಗಿ ಶಾಲಾ ಸೂಚನಾ ಫಲಕದಲ್ಲಿ ನಮೂದಿಸಿ ಸೂಕ್ತ ಸ್ಥಳದಲ್ಲಿ ಪ್ರದರ್ಶಿಸಬೇಕು. ಹಾಗೂ ಸೂಕ್ತ ವಿಧಾನಗಳ ಮೂಲಕ ಸ್ಥಳೀಯವಾಗಿ ಪೋಷಕರಿಗೆ ಆಹಾರ ಧಾನ್ಯ ವಿತರಣೆ ಬಗ್ಗೆ ಮಾಹಿತಿ ತಲುಪುವಂತೆ ಕ್ರಮ ವಹಿಸುವುದು.
ಸದ್ಯ 132 ದಿನಗಳಿಗೆ ವಿತರಿಸಲಾಗುವ ಆಹಾರ ಧಾನ್ಯಗಳ ಪ್ರಮಾಣವು ಅಧಿಕ ಇರುವುದರಿಂದ ಕಡ್ಡಾಯವಾಗಿ ಮಕ್ಕಳ ಪಾಲಕರು ಶಾಲೆಗೆ ಖುದ್ದಾಗಿ ಹಾಜರಾಗಿ ಆಹಾರ ಧಾನ್ಯಗಳನ್ನು ಪಡೆಯಲು ಸೂಚಿಸುವುದು. ಶಾಲೆಯ ಎಲ್ಲಾ ಪೋಷಕರನ್ನು ಒಂದೇ ಬಾರಿಗೆ ಶಾಲೆಗೆ ಕರೆಸದೇ ಸೀಮಿತ ಸಂಖ್ಯೆಯಲ್ಲಿ ಕರೆಯಿಸಿ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿಕೊಂಡು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಎಸ್.ಒ.ಪಿ. ನಿಯಮಗಳ ಅನುಸಾರ ಆಹಾರ ಸಾಮಗ್ರಿಗಳನ್ನು ಹಂತ ಹಂತವಾಗಿ ವಿತರಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!