ಕಲಾವಿದರುಗಳಿಗೆ ಆಹಾರ ಧಾನ್ಯಗಳ ಕಿಟ್ಟ್ ವಿತರಣೆ

ಬೀದರ್, ಜೂ. ೨೪: ಜಗತ್ತಿನಾದ್ಯಂತ ಕರೋನಾ ವೈರಸ್ ಹಾವಳಿಗೆ ಜನಸಾಮಾನ್ಯರು ತತ್ತರಿಸಿದ್ದು, ತೀವ್ರ ಸಂಕಷ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ನಾವು ಅಹಂನ್ನು ಬದಿಗಿಟ್ಟು ಮನುಷ್ಯರು ಮನುಷ್ಯರಂತೆ ವರ್ತಿಸುವ ಮೂಲಕ ಒಬ್ಬರಿಗೊಬ್ಬರು ಸಹಾಯ ಹಸ್ತ ನೀಡಿದರೆ ಮಾತ್ರ ನೊಂದವರ ಬಾಳಿನಲ್ಲಿ ಕೊಂಚ ಬೆಳಕು ಚೆಲ್ಲಬಹುದು. ಹಾಗಾಗಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವರಿಗೆ ಸಹಕರಿಸಬೇಕು, ಹಾಗಾದಾಗ ಮಾತ್ರ ಮಾನವೀಯ ಮೌಲ್ಯ ಉಳಿಯುತ್ತದೆ. ಅದಕ್ಕೊಂದು ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂಚೂಣ ಯಲ್ಲಿದ್ದು, ಬಡವರಿಗೆ ನೊಂದವರಿಗೆ, ಕಲಾವಿದರಿಗೆ, ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ದುಡಿಯುವ ವರ್ಗಕ್ಕೆ ಆಹಾರÀ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಜನರ ನೋವಿಗೆ ಸ್ಪಂದಿಸುತ್ತಿದೆ. ಈ ನಮ್ಮ ಪವಿತ್ರ ಕಾರ್ಯಕ್ಕೆ ನಮ್ಮ ಜೊತೆಗೆ ಕೈ ಜೋಡಿಸಿರುವ ಜನಪದ ಮತ್ತು ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರಿಗೆ ಅನಂತ ಕೃತಜ್ಞತೆಗಳು ಸಲ್ಲಿಸುವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಉಮರ್ ರಬ್ಬಾ ಅವರು ನುಡಿದರು.
ಅವರು ಗುರುವಾರ ಬೆಳಿಗ್ಗೆ ನಗರದ ಚನ್ನಬಸವಪಟ್ಟದೇವರ ರಂಗಮAದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜನಪದ ಕಲಾವಿದರ ಬಳಗ ಬೀದರ ವತಿಯಿಂದ ಏರ್ಪಡಿಸಿದ ಕಲಾವಿದರುಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕಿಟ್ಟ್ ವಿತರಿಸುವರ ಮೂಲಕ ಮಾತನಾಡುತ್ತಿದ್ದರು.
ಕನ್ನಡ ಮತ್ತು ಸಂಸ್ಖೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಮುಖ್ಯ ಅತಿಥಿಗಳಾ ಆಗಮಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜನಪದ ಕಲಾವಿದರ ಬಳಗದ ಶಿಸ್ತು ಬದ್ದತೆ, ಮತ್ತು ಅವರ ಸೇವಾಕೈಂಕರ್ಯವನ್ನು ಶ್ಲಾಘಿಸಿದರು. ಸದರಿ ಸಂಸ್ಥೆಯವರು ನೀಡುತ್ತಿರುವ ಆಹಾರ ಧಾನ್ಯಗಳು ಹಸಿದವರಿಗೆ ಹೊಟ್ಟೆ ತುಂಬಿಸುವ ಕಾರ್ಯ ಮಹದುಪಕಾರವಾಗಿದೆ. ಇಂತಹ ಸೇವಾ ಮನೋಭಾವದವರು ದೊರಕುವುದು ತೀರ ವೀರಳ. ಇವರಿಗೆ ದೇವರು ಇನ್ನಷ್ಟು ಸಹಾಯ, ಸೇವೆ ಮಾಡುವ ಶಕ್ತಿ ನೀಡಲಿ ಎಂದು ಮನದುಂಬಿ ಹಾರೈಸಿ, ಉಳ್ಳವರು, ಅನುಕೂಲಸ್ಥರು ಸಹ ಹಸಿದವರ ಹೊಟ್ಟೆ ತುಂಬಿಸವ ಕಾರ್ಯಕ್ಕೆ ಮುಂದಾಗಬೇಕೆAದರು.
ಜನಪದ ಮತ್ತು ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೊನಾರೆ ಅವರು ಮಾತನಾಡಿ, ನಮ್ಮ ಸಂಸ್ಥೆ ಯಾವತ್ತೂ ಜನಪರವಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕರೋನಾ ಜಾಗೃತಿ, ವ್ಯಾಕ್ಸಿನ್ ಸೇರಿದಂತೆ ಸಮಾಜಪರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಯಾವುದೇ ಭೇದ-ಭಾವವಿದಲ್ಲದೆ ಸದಾ ಸಮಾಜಮುಖಿಯಾದ ಚಿಂತನೆಯಲ್ಲಿರುತ್ತದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯೊAದಿಗೆ ನಮ್ಮ ಜನಪದÀ ಮತ್ತು ಕಲಾವಿದರ ಬಳಗಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು, ಸುಮಾರು ೧೨೦ ಆಹಾರ ಧಾನ್ಯಗಳ ಕಿಟ್ ವಿತರಿಲಾಯಿತು ಎಂದು ಕೃತಜ್ಷತೆಗಳನ್ನು ಸಲ್ಲಿಸಿದರು.
ಸುನೀಲ ಕಡ್ಡೆ ಕಾರ್ಯಕ್ರಮ ನಿರೂಪಿಸಿದರು. ಸುನೀಲ ಬಾವಿಕಟ್ಟಿ ಸ್ವಾಗತಿಸಿದರು. ಕೊನೆಯಲ್ಲಿ ಎಂ. ಪಿ. ಮುದಾಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ಅಧಿಕಾರಿ ರಮೇಶ ಸರ್, ಯುವ ಸಾಹಿತಿ ನಾಗಶೆಟ್ಟಿ ಪಾಟೀಲ ಗಾದಗಿ, ಸುರೇಶ ಕುಲಕಣ ð, ರವಿ ಕಾಂಬಳೆ, ಏಸುದಾಸ ಅಲಿಯಂಬುರೆ, ಶಶಿಕಾಂತ ಭಾವಿಕಟ್ಟಿ ಸೇರದಿಂತೆ ಹಲವರು ಉಪಸ್ಥಿತರಿದ್ದರು.
ಸುಮಾರು ೧೨೦ ಜನ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವುದರೊಂದಿಗೆ ಕರೋನಾ ವ್ಯಾಕ್ಸಿನ್ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಯಿತು.

Latest Indian news

Popular Stories

error: Content is protected !!