ಕೃಷಿ ಪದ್ಧತಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತ ಬಾಂಧವರಲ್ಲಿ ಮನವಿ

ಬೀದರ, ಜೂನ್ 18 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆ ಕೋವಿಡ್ ಮಾರ್ಗಸೂಚಿಯನ್ವಯ ಆದ್ಯತೆ ಮೇರೆಗೆ ಸಣ್ಣ ಮತ್ತು ಅತಿಸಣ್ಣ ಹಾಗೂ ದೊಡ್ಡ ರೈತರಿಗೆ 2 ಹೆಕ್ಟೇರ್ ಪ್ರದೇಶಕ್ಕೆ ಮೀರದಂತೆ ಗರಿಷ್ಟ 3 ಎಕರೆಗೆ ಸೋಯಾಬಿನ್ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.ಇನ್ನುಳಿದ ಪ್ರದೇಶಕ್ಕೆ ತೊಗರಿ, ಹೆಸರು, ಉದ್ದು, ಹೈಬ್ರಿಡ್ ಜೋಳ, ಮೆಕ್ಕೆಜೋಳ ಮತ್ತು ಸಿರಿಧಾನ್ಯಗಳಾದ ನವಣೆ, ಸಜ್ಜೆ ಧಾನ್ಯಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ.
ಆದರೆ ಸೋಯಾಬಿನ್ ಬೆಳೆಯನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದು, ಬೀದರ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.
ಜಿಲ್ಲೆಯ ರೈತ ಬಾಂಧವರು ಏಕಬೆಳೆ ಪದ್ಧತಿ ಬದಲು ಮಿಶ್ರಬೆಳೆ ಪದ್ಧತಿ, ಅಂತರ ಬೆಳೆಪದ್ಧತಿ, ಬಹು ಬೆಳೆಪದ್ಧತಿ, ಸಮಗ್ರ ಕೃಷಿ ಪದ್ಧತಿ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ವೈವಿಧ್ಯತೆಯನ್ನು ಕಾಪಾಡಿಕೊಂಡು, ಆದಾಯ ಹೆಚ್ಚಿಸಿಕೊಳ್ಳುವುದಲ್ಲದೇ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ ಪರಿಸರ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ ಜಿಲ್ಲೆಯ ಮುಂಗಾರು ಹಂಗಾಮಿನ ಸಾಮಾನ್ಯ ಕ್ಷೇತ್ರ 3,70,982 ಹೆಕ್ಟೇರ್ ಬೆಳೆ ವಿಸ್ತೀರ್ಣ ಪ್ರದೇಶ ಇದ್ದು, ಅತೀ ಹೆಚ್ಚಿನ ಅಂದರೆ 1,80,000 ಹೆಕ್ಟೇರ್ ಪ್ರದೇಶದಲ್ಲಿ (ಸುಮಾರು 50%) ರೈತರು ಸೋಯಾಬಿನ್ ಬೆಳೆಯನ್ನು ಬೆಳೆಯುತ್ತಿದ್ದಾರೆ.
2021-22ನೇ ಸಾಲಿನ ಮುಂಗಾರು ಹಂಗಾಮಿನ ಒಟ್ಟು ಬೆಳೆ ವಿಸ್ತೀರ್ಣದಲ್ಲಿ 1,82,000 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೆಳೆ ವಿಸ್ತೀರ್ಣ ಗುರಿ ಇರುತ್ತದೆ. 1,82,000 ಹೆಕ್ಟೇರ್ ಪ್ರದೇಶಕ್ಕೆ 1,13,750ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆ ಇದ್ದು ಬೀಜ ಬದಲಾವಣೆ ಅನುಪಾತ (Seeಜ ಖeಠಿಟಚಿಛಿemeಟಿಣ ಖಚಿಣio) ಅನ್ವಯ 1,01,237 ಕ್ವಿಂಟಾಲ್ ಸೋಯಾಬಿನ್ ಬೀಜದ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.
2020-21ನೇ ಸಾಲಿನಲ್ಲಿ ಸೋಯಾಬಿನ್ ಕಟಾವು ಸಮಯದಲ್ಲಿ ಅತೀ ಹೆಚ್ಚಿನ ಮಳೆಯಿಂದಾಗಿ ಬಿತ್ತನೆ ಬೀಜದ ಗುಣಮಟ್ಟದ ಮೇಲೆ ಪರಿಣಾಮ ಬೀರಿರುವುದರಿಂದ ಕರ್ನಾಟಕ ರಾಜ್ಯದ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಇತರೆ ಸಂಸ್ಥೆಗಳು ಬಿಜೋತ್ಪಾದನೆ ಕೈಗೊಂಡಿದ್ದ ತಾಕುಗಳಲ್ಲಿ ಗುಣಮಟ್ಟದ ಬೀಜದ ಉತ್ಪಾದನೆ ಆಗದಿರುವ ಪ್ರಯುಕ್ತ ಮಧ್ಯಪ್ರದೇಶದಲ್ಲಿ ಉತ್ಪಾದನೆಯಾದ ಸೋಯಾಬಿನ್ ಧೃಢೀಕೃತ ಬಿತ್ತನೆ ಬೀಜಗಳನ್ನು 2 ಬಾರಿ e-ಠಿಡಿoಛಿuಡಿemeಟಿಣ ಮುಖಾಂತರ ಸರಬರಾಜುದಾರ ಕಂಪನಿಗಳ emಠಿಚಿಟಿeಟಟeಜ ಪಟ್ಟಿಗಳ ದರಪಟ್ಟಿ ನಿಗದಿಪಡಿಸಿ ಕೇಂದ್ರ ಕಛೇರಿಯಿಂದ ಜಿಲ್ಲೆಗಳಿಗೆ ನೀಡಲಾಗಿರುತ್ತದೆ. ಅದರನ್ವಯ 1,63,381 ಕ್ವಿಂಟಾಲ್ ಧೃಢೀಕೃತ ಬಿತ್ತನೆ ಬೀಜಗಳನ್ನು ಸರಬರಾಜುದಾರ ಕಂಪನಿಗಳು ಲಭ್ಯತೆಯನ್ನು ಖಚಿತಪಡಿಸಿರುತ್ತಾರೆ.
ಬೀದರ ಜಿಲ್ಲೆಗೆ ಅಗತ್ಯವಿರುವ 1,01,237 ಕ್ವಿಂಟಾಲ್ ಸೋಯಾಬಿನ್ ಬಿತ್ತನೆ ಬೀಜದಲ್ಲಿ 1,01,584 ಕ್ವಿಂಟಾಲ್ ಸರಬರಾಜು ಮಾಡಲು ವಿವಿಧ ಕಂಪನಿಗಳಿಗೆ ಇಂಡೆಂಟ್ ನೀಡಲಾಗಿತ್ತು. ಆದರೆ 93,000 (91100 ಕ್ವಿಂಟಾಲ್ ಪ್ರಮಾಣಿಕೃತ ಬೀಜ ಮತ್ತು 1900 ಕ್ವಿಂಟಾಲ್ ನಿಜ ಚೀಟಿ ಬೀಜ) ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಆಗಿರುತ್ತದೆ. ಸೋಯಾಬಿನ್ ಬೆಳೆಯುವ ಇತರೆ ಜಿಲ್ಲೆಗಳಿಗೆ ಬೆಳಗಾವಿ 37,918 ಕ್ವಿಂಟಲ್, ಧಾರವಾಡ 15,283, ಹಾವೇರಿ 9320, ಬಾಗಲಕೋಟೆ 1310 ಮತ್ತು ಕಲಬುರ್ಗಿ 6200, ಬೀದರ 93,000 ಕ್ವಿಂಟಾಲ್ ಒಟ್ಟು 1,63,381 ಪ್ರಮಾಣದ ಬೀಜಗಳು ಸರಬರಾಜಾಗಿದ್ದು ಯಾವುದೇ ಸಂಸ್ಥೆಯವರಲ್ಲಿ ಧೃಢೀಕೃತ ಬಿತ್ತನೆ ಬೀಜ ಲಭ್ಯತೆಇಲ್ಲದಿರುವುದರಿಂದ ನಿಜ ಚೀಟಿ ಬೀಜಗಳು ಒಂದೇ ಸಂಸ್ಥೆಯವರಲ್ಲಿ 1,900 ಕ್ವಿಂಟಾಲ್ ಮಾತ್ರ ಲಭ್ಯವಿದ್ದು ಪೂರ್ಣ ಪ್ರಮಾಣವನ್ನು ಬೀದರ ಜಿಲ್ಲೆಗೆ ನೀಡಲಾಗಿರುತ್ತದೆ. ದಿನಾಂಕ 17.06.2021 ರಿಂದ ನೀಜಚೀಟಿ ಬೀಜ ವಿತರಣೆ ಔರಾದ, ಭಾಲ್ಕಿ, ಮತ್ತು ಬಸವಕಲ್ಯಾಣ ತಾಲ್ಲೂಕಿನಲ್ಲಿ ಪ್ರಗತಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Latest Indian news

Popular Stories

error: Content is protected !!