ಕೋವಿಡ್ ತಡೆಗೆ ಶ್ರಮಿಸುತ್ತಿರುವ ಪತ್ರಕರ್ತರಿಗೆ ಸನ್ಮಾನಿಸಿದ ಸಚಿವರಾದ ಪ್ರಭು ಚವ್ಹಾಣ್

ಬೀದರ ಜೂನ್ ೨೮ (ಕರ್ನಾಟಕ ವಾರ್ತೆ):-ಕೋವಿಡ್-೧೯ ಹಿನ್ನೆಲೆಯಲ್ಲಿ ಬಹುದಿನಗಳಿಂದ ಜೀವಭಯ ತೊರೆದು ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ನಿರಂತರವಾಗಿ ವಿಸ್ತೃತ ವರದಿಗಳನ್ನು ಪ್ರಕಟಿಸಿ ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೀಗೆಯೇ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಬೀದರ ಜಿಲ್ಲೆಯ ಪತ್ರಕರ್ತರಿಗೆ ಮತ್ತು ಛಾಯಾಗ್ರಾಹಕರಿಗೆ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಸನ್ಮಾನಿಸಿ, ಗೌರವಿಸಿದರು.
ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಜೂ.೨೮ರಂದು ನಡೆದ ಕಾರ್ಯಕ್ರಮದಲ್ಲಿ ಬೀದರ ನಗರದ ಪತ್ರಕರ್ತರು ಸೇರಿದಂತೆ ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಔರಾದ್, ಹುಲಸೂರ, ಚಿಟಗುಪ್ಪ ಮತ್ತು ಕಮಲನಗರ ತಾಲೂಕು ಸೇರಿದಂತೆ ಒಟ್ಟು ೧೭೦ ಪತ್ರಕರ್ತರಿಗೆ ಸಚಿವರು ಶಾಲು ಹೊದಿಸಿ, ಸಿಹಿ ವಿತರಿಸಿ ಗೌರವಿಸಿರಲ್ಲದೇ, ಪತ್ರಕರ್ತರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕೋವಿಡ್-೧೯ ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಮತ್ತು ಪಂಚಾಯತ್ ರಾಜ್ಯ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯರಾಗಿ ಕೆಲಸ ಮಾಡಿದಂತೆ ಪತ್ರಕರ್ತರು ಕೂಡ ಕೋವಿಡ್ ತಡೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಪತ್ರಕರ್ತರನ್ನು ಮಂಚೂಣ ಕಾರ್ಯಕರ್ತರು ಎಂದು ಗುರುತಿಸಿದ್ದು, ಪತ್ರಕರ್ತರ ಸೇವೆಗೆ ಗೌರವಾರ್ಥ ತಾವುಗಳು ಬೀದರ ಜಿಲ್ಲೆಯ ಪತ್ರಕರ್ತರಿಗೆ ಸನ್ಮಾನ ಏರ್ಪಡಿಸಿರುವುದಾಗಿ ತಿಳಿಸಿದರು.
ಪ್ರಜಾಪ್ರಭುತ್ವ ೪ನೇ ಸ್ಥಂಬದAತೆ ಕೆಲಸ ಮಾಡುವ ಪತ್ರಿಕಾರಂಗವು ಸಮಾಜದಲ್ಲಿರುವ ಅಂಕುಡೊAಕುಗಳನ್ನು ಎತ್ತಿ ತೋರಿಸಿ ಸುಧಾರಿಸಲು ಹಾದಿ ತೋರಿಸುತ್ತದೆ. ಪ್ರಜೆಗಳು ಮತ್ತು ಸರ್ಕಾರದ ನಡುವೆ ಸಂಪರ್ಕದ ಕೊಂಡಿಯAತೆ ಕೆಲಸ ಮಾಡುತ್ತದೆ.
ಪತ್ರಕರ್ತರು ಆಡಳಿತದಲ್ಲಿನ ತಪ್ಪು ಹೆಜ್ಜೆಗಳನ್ನು ತಿಳಿಸುತ್ತಾರೆ. ಅಲ್ಲದೇ ಉತ್ತಮ ಕೆಲಸಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಪ್ರಜೆಗಳ ನೋವು, ಸಂಕಟಗಳನ್ನು ಎತ್ತಿ ತೋರಿಸಿ ಸರಿಪಡಿಸಲು ತಮ್ಮದೇ ಇತಿಮಿತಿಯಲ್ಲಿ ನಿರಂತರ ಶ್ರಮಿಸುವ ಪತ್ರಕರ್ತರ ಮೇಲೆ ತಮಗೆ ಅತೀವ ಪ್ರೀತಿಯಿದ್ದು, ತಾವು ಯಾವಾಗಲೂ ಪತ್ರಕರ್ತರ ಪರವಾಗಿರುವುದಾಗಿ ಸಚಿವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಸೇವೆ ಅನನ್ಯವಾಗಿದೆ. ಕೋವಿಡ್-೨ನೇ ಅಲೆಯ ಆರಂಭದಲ್ಲಿ ಕೋವಿಡ್ ಕುರಿತಂತೆ ಸಾಕಷ್ಟು ತಪ್ಪು ನಂಬಿಕೆಗಳಿದ್ದವು. ಜನ ಸಾಕಷ್ಟು ನಿರ್ಲಕ್ಷö್ಯ ವಹಿಸಿದ ಕಾರಣ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಮತ್ತು ಪತ್ರಿಕೆಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿರುವುದರಿಂದ ಜನರಲ್ಲಿ ಜಾಗೃತಿ ಮೂಡಿ, ರೋಗ ಲಕ್ಷಣಗಳು ಕಾಣ ಸಿದೊಡನೆ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಗೆ ದಾಖಲಾಗುವುದು ಆರಂಭವಾಗಿ, ರೋಗಿಗಳಿಗೆ ತಕ್ಷಣ ಚಿಕಿತ್ಸೆ ಲಭಿಸಿ ಮರಣ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪತ್ರಕರ್ತರು ಸೇರಿದಂತೆ ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸುಸಜ್ಜಿತ ಪತ್ರಿಕಾ ಭವನ: ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಖಾಸಗಿ ಹೋಟಲ್‌ಗಳಿಗೆ ಸಾಕಷ್ಟು ಖರ್ಚು ಬರುತ್ತಿದ್ದು. ಇದೀಗ ಬೀದರ ಜಿಲ್ಲೆಯಲ್ಲಿಯೇ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಗೊಳ್ಳುತ್ತಿದೆ. ತಾವು ಕಟ್ಟಡ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಸಚಿವರು ಹೇಳಿದರು.
೧,೦೦೦ ಜನ ವಾರಿರ‍್ಸ್ಗಳನ್ನು ಸನ್ಮಾನ: ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ನಿರಂತರ ಶ್ರಮಿಸುತ್ತಿರುವ ಕೋವಿಡ್ ವಾರಿಯರ್‌ಗಳಿಗೆ ವೈಯಕ್ತಿಕವಾಗಿ ಸನ್ಮಾನಿಸುತ್ತಿದ್ದು, ಇಲ್ಲಿವರೆಗೆ ೧,೦೦೦ ಜನ ವಾರಿರ‍್ಸ್ಗಳನ್ನು ಸನ್ಮಾನಿಸಿದ್ದೇನೆ. ಕೋವಿಡ್ ಅಥವಾ ಇನ್ನಿತರ ಕಾರಣಗಳಿಂದ ಮರಣ ಹೊಂದಿ ಪಕ್ಷದ ಕಾರ್ಯಕರ್ತರು, ನಿರ್ಗತಿಕರು ಹಾಗೂ ಬಡವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನಸಹಾಯ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಅಶೋಕಕುಮಾರ ಕರಂಜಿ, ಹಿರಿಯ ಪತ್ರಕರ್ತರಾದ ಗಂಧರ್ವ ಸೇನಾ, ವೆಂಕಟೇಶ ಮೋರ್ಕಂಡಿಕರ, ಸದಾನಂದ ಜೋಶಿ, ಯೂಸುಫ್ ರಹೀಂ ಬಿದ್ರಿ, ವೀರೇಶ ಮಠಪತಿ, ಬಸವರಾಜ ಪವಾರ, ಜಗನ್ನಾಥ ಜೀರಗಾ, ಶಿವಕುಮಾರ ವಣಗೇರಿ, ಉಪಾಧ್ಯಕ್ಷರಾದ ಶ್ರೀನಿವಾಸ ಚೌದ್ರಿ, ಕೋಶಾಧ್ಯಕ್ಷರಾದ ಫೃಥ್ವಿರಾಜ್ ಎಸ್., ಕಾರ್ಯದರ್ಶಿ ಸುನೀಲ್ ಕುಲಕಣ ð, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಧರಂಪೂರೆ, ಎಲೆಕ್ಟಾçನಿಕ್ ಮೀಡಿಯಾದ ಅನೀಲ್ ದೇಶಮುಖ, ಮಲ್ಲಿಕಾರ್ಜುನ ಮರ್ಕಲೆ, ಸಂಜೀವಕುಮಾರ ಬುಕ್ಕಾ ಹಾಗೂ ಇತರರು ಇದ್ದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ತಾಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಜಿಲ್ಲೆಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರು ಇದ್ದರು.
ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ ಸ್ವಾಮಿ, ಪತ್ರಕರ್ತರಾದ ಮಹಾರುದ್ರ ಡಾಕುಳಗಿ ಅವರು ನಿರೂಪಿಸಿದರು.

Latest Indian news

Popular Stories