ಶುಧ್ಧ ಮತ್ತು ಪ್ರಮಾಣ ತ ಬೀಜ ಬಳಸಿ ಕಳೆಗಳಿಂದ ಮುಕ್ತವಾಗಿ – ಡಾ ರಾಜೀವಕುಮಾರ ನೆಗಳೂರ

ಶುಧ್ಧವಾದ ಪ್ರಮಾಣ ತ ಬೀಜಗಳು, ಚೆನ್ನಾಗಿ ಕಳೆತಂಥ ಕಾಂಪೋಸ್ಟ ಹಾಗೂ ಕಳೆ ರಹಿತ ನೀರಾವರಿ ಕಾಲುವೆಗಳದ್ದಲ್ಲಿ ಕಳೆರಹಿತ ಬೆಳೆಗಳನ್ನು ಬೆಳಯಬಹುದಾಗಿದೆ ಹಾಗೂ ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಸಿಫಾರಸಿದ ಕಳೆನಾಶಕಗಳನ್ನು ಹುಡ್ ಹಾಕಿ ಬಳಸುವದರಿಂದ ಸಮರ್ಪಕವಾದ ರೀತಿಯಲ್ಲಿ ಕಳೆ ನಿರ್ವಹಣೆ ಮಾಡಬಹುದಾಗಿದೆ ಎಂದು ವಿಜಯಪುರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ರಾಜೀವಕುಮಾರ ಬಿ. ನೆಗಳೂರ ರವರು ಬೀದರ ಕೆ.ವಿ.ಕೆ ಕೃಷಿ ಪಾಠ ಶಾಲೆ ಸರಣ ಕಾರ್ಯಕ್ರಮದಲ್ಲಿ “ಮುಂಗಾರು ಬೆಳೆಗಳಲ್ಲಿ ಕಳೆಗಳ ಹತೋಟಿ” ವಿಷಯವಾಗಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರ ಬೀದರಿನ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಡಾ. ಸುನೀಲಕುಮಾರ ಎನ.ಎಮ್. ರವರು ಕೃಷಿಯಲ್ಲಿ ಕಳೆಗಳ ನಿರ್ವಹಣೆಯ ಅಗತ್ಯತೆ ಅವುಗಳಿಂದ ಆಗುವ ಹಾನಿಯ ಪ್ರಮಾಣ ಬೆಳೆಯೊಂದಿಗೆ ಕಳೆಗಳು ಒಡ್ಡುವ ಸ್ಫರ್ದೆಯ ಕುರಿತು ವಿವರಿಸಿದರು.
ಕೊನೆಯಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ರಾಜ್ಯದ ವಿವಿಧ ಮೂಲೆಗಳಿಂದ ಭಾಗವಹಿಸಿದ ರೈತರಿಗೆ ಭತ್ತ, ಜೋಳ, ತೊಗರಿ, ಉದ್ದು, ಹೆಸರು, ಸೋಯಾ ಅವರೆ, ನೆಲಗಡಲೆ, ತರಕಾರಿ ಬೆಳಗಳು, ಹಣ ್ಣನ ಬೆಳೆಗಳು ಹಾಗೂ ಅಡಿಕೆ ಮುಂತಾದ ಬೆಳೆಗಳಲ್ಲಿ ಬಳಸಬಹುದಾದ ಕಳೆ ನಿರ್ವಹಣೆ ವಿಧಾನಗಳ ಬಗ್ಗೆ ಸವಿವರವಾಗಿ ಉತ್ತರಿಸಿದರು.

Latest Indian news

Popular Stories