ಗ್ರೂಪ್ ಡಿ ದಲಾಯತರ ಹುದ್ದೆಗೆ ಅರ್ಜಿ ಆಹ್ವಾನ

ಬೀದರ ಜೂನ್ 18 (ಕರ್ನಾಟಕ ವಾರ್ತೆ):- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಲಬುರಗಿ ಇಲ್ಲಿ ಖಾಲಿ ಇರುವ ಒಂದು ಗ್ರೂಪ್ ಡಿ ದಲಾಯತರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಹತೆ: ಮಾಜಿ ಸೈನಿಕರಾಗಿರಬೇಕು, 10ನೇ ತರಗತಿ ಪಾಸಾಗಿರಬೇಕು, 18 ರಿಂದ 52 ವರ್ಷಗಳ ಒಳಗೆ ಇರಬೇಕು.
ಅರ್ಜಿ ನಮೂನೆಯನ್ನು ಕಛೇರಿಯಿಂದ ಜೂನ.15 ರಿಂದ ಜೂನ.30 ರೊಳಗೆ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಿನಿ ವಿಧಾನಸೌಧ, ಕಲಬುರಗಿ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅವಶ್ಯಕ ಅಡಕಗಳೊಂದಿಗೆ ಕಛೇರಿಯ ವಿಳಾಸಕ್ಕೆ ದಿ: 03-07-2021 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: 08472225003 ದೂ.ಸಂಖ್ಯೆಗೆ ಸಂಪರ್ಕಿಸಲು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಲಬುರಗಿ ಸಂಪರ್ಕಿಸಬೇಕು.

Latest Indian news

Popular Stories

error: Content is protected !!