ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಓಡಾಡುವವರಿಗೆ ಕಾನೂನು ಕ್ರಮದ ಎಚ್ಚರಿಕೆ

ಬೀದರ ಜೂನ-3 (ಕರ್ನಾಟಕ ವಾರ್ತೆ): ರಾಜ್ಯಾದ್ಯಂತಕೋವಿಡ್-19 ಸೋಂಕು ವ್ಯಾಪಕ ರೀತಿಯಲ್ಲಿ ಹರಡುತ್ತಿದ್ದು, ಸದರಿ ಸಾಂಕ್ರಾಮಿಕ ರೋಗವನ್ನು ತಡೆಯಲು ರಾಜ್ಯ ಸರ್ಕಾರ ದಿನಾಂಕ 10-05-2021 ರಿಂದ 07-06-2021 ರವರೆಗೆ ಲಾಕಡೌನ್ (ನಿಷೇಧ) ವನ್ನು ಆದೇಶಿಸಿರುತ್ತಾರೆ.
ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಫೇಸ್‌ಮಾಸ್ಕ್ ಹಾಕದವರಿಗೆ ಒಟ್ಟು 1604 ಪ್ರಕರಣಗಳು ಹಾಕಿ 1,60,400 ರೂ. ದಂಡ ವಿಧಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರತಕ್ಕದ್ದು ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರತಕ್ಕದ್ದು ಅಂತಾ ಆದೇಶವಿದ್ದರು ಸಹ ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಸಂಚರಿಸಿದವರ 176 ವಾಹನಗಳನ್ನು ಜಪ್ತಿ ಮಾಡಿ ಕಾನೂನು ಪ್ರಕ್ರಿಯೆ ಕೈಕೊಳ್ಳಲಾಗಿದೆ.ಇನ್ನೂ ಮುಂದೆ ಸಾರ್ವಜನಿಕರು ಲಾಕ್‌ಡೌನ್‌ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಪೊಲೀಸ್ ವರಿಷ್ಠಾಧಿಕಾರಿಗಾದ ನಾಗೇಶ ಡಿ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories