ಬೀದರ ತಾಲೂಕಿನಲ್ಲಿ ಶಾಸಕರಾದ ರಹೀಂ ಖಾನ ಪ್ರವಾಸ, ಜನತೆಗೆ ಸ್ಪಂದನೆ : Rahim khan

ಬೀದರ ಜೂನ್ 1 (ಕರ್ನಾಟಕ ವಾರ್ತೆ): ಬೀದರ ಶಾಸಕರಾದ ರಹೀಂ ಖಾನ್ ಅವರು ಜೂನ.1 ರಂದು ಬೀದರ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ವಿವಿಧ ಗ್ರಾಮಸ್ಥರ ಅಹವಾಲು ಆಲಿಸಿದರು.


ಬೀದರ ತಾಲ್ಲೂಕಿನ ಜಾಂಪಡ, ಕಪ್ಲಾಪೂರ, ಅಮದಲಪಾಡ್, ಮಾಳೆಗಾಂವ, ಮಿರ್ಜಾಪೂರ ಗ್ರಾಮಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.
ಮಾಳೆಗಾಂವ್ ಮತ್ತು ಜಾಂಪಡ ಗ್ರಾಮಗಳಲ್ಲಿ ಶಾಸಕರು ನರೇಗಾ ಕಾಮಗಾರಿ ಪರಿಶೀಲಿಸಿದರು.
ಮಾಳೆಗಾಂವ್ ಗ್ರಾಮದಲ್ಲಿನ ರಸಗೊಬ್ಬರ ವಿತರಣಾ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ, ಅಲ್ಲಿ ರಸಗೊಬ್ಬರ ಲಭ್ಯತೆ ಬಗ್ಗೆ ಮಾಹಿತಿ ಪಡೆದರು. ಇದೆ ವೇಳೆ ರೈತರ ಅಹವಾಲು ಆಲಿಸಿದರು. ನಮ್ಮೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಮಾಳೆಗಾಂವ್ ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು. ಕುಡಿವ ನೀರಿನ ಸಮರ್ಪಕ ಪೂರೈಕೆಗೆ ಗಮನ ಹರಿಸುವಂತೆ ಶಾಸಕರು ಪಿಡಿಓ ಅವರಿಗೆ ಸೂಚಿಸಿದರು. ಮಾಳೆಗಾಂವ್ ಗ್ರಾಮದ ನ್ಯಾಷನಲ್ ಮಿಶನ್ ಸೆಂಟರಗು ಕೂಡ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು.
ನಮ್ಮೂರಲ್ಲಿ ವಿದ್ಯುತ್ ಸರಿಯಾಗಿ ಬರುತ್ತಿಲ್ಲ ಎಂದು ಮಿರ್ಜಾಪುರ ಮತ್ತು ಜಾಂಪಡ ಎರಡು ಗ್ರಾಮಗಳ ಗ್ರಾಮಸ್ತರು ಶಾಸಕರ ಗಮನಕ್ಕೆ ತಂದರು. ತಾವುಗಳು ಕೂಡಲೇ ಜೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಶಾಸಕರು ತಿಳಿಸಿದರು.
ಕಾಪಲಾಪುರ ಮತ್ತು ಮಿರ್ಜಾಪುರ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಶಾಸಕರು, ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮೃತರ ಕುಟುಂಬದವರಿಗೆ ಸಾಂತ್ವನ: ಶಾಸಕರಾದ ರಹೀಂ ಖಾನ್ ಅವರು ಜೂನ್ 1ರಂದು ಪ್ರವಾಸ ಕೈಗೊಂಡ ವೇಳೆಯಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದರು. ಜಾಂಪಡ ಗ್ರಾಮದಲ್ಲಿ ಕೋವಿಡ್ ನಿಂದ ಮೃತರಾದ ಮೂರು ಜನರ ಕುಟುಂಬದವರಿಗೆ ತಾವು ಸಹಾಯ ಮಾಡುವುದಾಗಿ ಇದೆ ವೇಳೆ ಶಾಸಕರು ತಿಳಿಸಿದರು.
ಕ್ವಾರಂಟೈನ್ ಆಗಿದ್ದ ಕುಟುಂಬಕ್ಕೆ ಭೇಟಿ: ಕಾಪಾಲಾಪುರದಲ್ಲಿ ಕುಟುಂಬದ ಎಲ್ಲರಿಗೂ ಕೊವಿಡ್ ಸೋಂಕು ತಗುಲಿ ಎಲ್ಲರೂ ಹೋಮ್ ಕ್ವಾರಂಟೈನ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದು ಶಾಸಕರು, ಸಾಮಾಜಿಕ ಅಂತರ ಪಾಲನೆಯೊಂದಿಗೆ ಕುಟುಂಬದವರಿಗೆ ಧೈರ್ಯ ತುಂಬಿದರು.

Latest Indian news

Popular Stories

error: Content is protected !!