04 ಜನ ಮಾನಸಿಕ ಅಸ್ವಸ್ಥ ಮಹಿಳೆಯರ ಮುಂದಿನ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ಶಿವಮೊಗ್ಗದ ರಾಜ್ಯ ಮಹಿಳಾ ನಿಲಯಕ್ಕೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಸೂಚನೆ

ಬೀದರ ಜುಲೈ02 (ಕರ್ನಾಟಕ ವಾರ್ತೆ):- ವೈದ್ಯಾಧಿಕಾರಿಗಳ ವರದಿಯನ್ವಯ ಮಾನ್ಯ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಅತೀ ಮುತುವರ್ಜಿ ವಹಿಸಿ ಸದರಿ 04 ಜನ ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಜೂನ.26 ರಂದು ಬೀದರನ ಮಹಿಳಾ ಪೊಲೀಸ ಠಾಣೆಯ ಒಬ್ಬ ಮಹಿಳಾ ಪೊಲೀಸ ಪೇದೆ, ಸಹಾಯಕ ಪೊಲೀಸ ನಿರೀಕ್ಷಕರು, ಮನೋಶಾಸ್ತç ತಜ್ಞರಾದ ಮಲ್ಲಿಕಾರ್ಜುನ, ಬೀದರ ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕರಾದ ಕು. ಗೀತಾಂಜಲಿ ಮತ್ತು ಬೀದರ ಸ್ವಧಾರ ಗೃಹ ಶ್ರೀಹರಿ ಪಾಟೀಲ್, ಸ್ವಧಾರ ಗೃಹ ಬೀದರ ಇವರ ಬೆಂಗಾವಲಿನೊAದಿಗೆ ಶಿವಮೊಗ್ಗದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಅವರಿಗೆ ಮುಂದಿನ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಗೌರಿಶಂಕರ ಪರತಾಪೂರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬಸವಕಾರ್ಯ ಸಮಿತಿ ಸ್ವಧಾರ ಗೃಹದಲ್ಲಿ ಆಶ್ರಯ ಪಡೆಯುತ್ತಿದ್ದ 03 ಜನ ಮಾನಸಿಕ ಅಸ್ವಸ್ಥ ಮಹಿಳೆಯರಾದ ನಿಶಾ ಗಂಡ ಪಟ್ಟು 35 ವರ್ಷ, ಅನುಷಾ ತಂದೆ ಈಶ್ವರ್ 25 ವರ್ಷ ಮತ್ತು ಅರ್ಚನಾ 40 ವರ್ಷ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಆರತಿ 28 ವರ್ಷ, ಈ 04 ಜನ ಮಹಿಳೆಯರನ್ನು ಜಿಲ್ಲಾ ಬ್ರಿಮ್ಸ್ ಆಸ್ಪತ್ರೆಯ ಮನೋರೋಗ ವಿಭಾಗದಲ್ಲಿ ಕರೆದುಕೊಂಡು ಹೋಗಿ ಅಲ್ಲಿನ ಮನೋವೈದ್ಯಾಧಿಕಾರಿಗಳ ಹತ್ತಿರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ಸದರಿ ಮನೋವೈದ್ಯಾಧಿಕಾರಿಗಳು ತಪಾಸಣೆಯನ್ನು ಗೈದು ವರದಿಯನ್ನು ನೀಡಿರುತ್ತಾರೆ. ಸದರಿ ವರದಿಯನ್ವಯ ಮಹಿಳೆಯರು ಮಾನಸಿಕ ಅಸ್ವಸ್ಥರೆಂದು ಮನೋವೈದ್ಯಾಧಿಕಾರಿಗಳು ಪ್ರಮಾಣಿಕರಿಸಿ ಪತ್ರವನ್ನು ನೀಡಿರುತ್ತಾರೆ ಹಾಗೂ ಇವರ ಮುಂದಿನ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ಶಿಫಾರಸ್ಸು ಮಾಡಿರುತ್ತಾರೆ. ಅಲ್ಲದೇ ಸದರಿ ಮಹಿಳೆಯರ ಕೋವಿಡ್-19 ಪರೀಕ್ಷೆ ಮಾಡಿಸಿದಾಗ ನೆಗೆಟೀವ್ ವರದಿ ಬಂದಿರುತ್ತದೆ.

Latest Indian news

Popular Stories

error: Content is protected !!