ಟೆಲಿಕಾಂ ಕಂಪನಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿಗಳು

ಬೀದರ ಜುಲೈ 16 (ಕರ್ನಾಟಕ ವಾರ್ತೆ):-ಜಿಲ್ಲಾಮಟ್ಟದ ಟೆಲಿಕಾಂ ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 16ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಟೆಲಿಕಾಂ ಸಮನ್ವಯ ಸಮಿತಿಯ ಸಭೆ ನಡೆಯಿತು.
ಟೆಲಿಕಾಂ ಕಂಪನಿಗಳ ಕಾರ್ಯಚರಣೆಯಲ್ಲಿ ಎದುರಾಗುತ್ತಿರುವ ಕೆಲವು ತೊಂದರೆಗಳ ಬಗ್ಗೆ ಮತ್ತು ಮೂಲ ಸೌಕರ್ಯ ಸ್ಥಾಪನೆಯಲ್ಲಿ ಆಗುತ್ತಿರುವ ಕೊರತೆಗಳು ಸೇರಿದಂತೆ ಟೆಲಿಕಾಂ ಕಂಪನಿಗಳಿಗೆ ಸಂಬAಧಿಸಿದ ಕುಂದುಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಇಂಡಸ್ ಟಾವರ್ (ಏರ್‌ಟೇಲ್ ) ಮತ್ತು ಜಿಯೋ ನೆಟ್‌ವರ್ಕನ ಪ್ರತಿನಿಧಿಗಳು ಹಾಜರಿದ್ದು, ತಮಗೆ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಸಭೆಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಟೆಲಿಕಾಂ ಸೇವಾ ಪೂರೈಕೆದಾರರು, ಟೆಲಿಕಾಂ ಮೂಲ ಸೌಕರ್ಯ ಪೂರೈಕೆದಾರರು ಮತ್ತು ಇಂಟರನೆಟ್ ಸೇವಾ ಪೂರೈಕೆದಾರರೊಂದಿಗೆ ಸರಿಯಾದ ರೀತಿಯಲ್ಲಿ ಸಮನ್ವಯವಾಗುವಂತೆ ನೋಡಿಕೊಂಡು ಟೆಲಿಕಾಂನ ಸಮಸ್ಯೆಗಳನ್ನ ವೇಗವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಪರಿವರ್ತಕ (ಟ್ರಾನ್ಸಪರ್ಮರ್) ಅಧೀಕ ಭಾರ ಕಾರಣಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಸೇವೆ ನೀಡುವಲ್ಲಿ ತಮಗೆ ತೊಂದರೆಯಾಗುತ್ತಿದೆ ಎಂದು ಇಂಡಸ್ ಟಾವರ್ (ಏರ್‌ಟೇಲ್)ನ ಪ್ರತಿನಿಧಿಗಳು ಸಭೆಗೆ ತಿಳಿಸಿದರು. ಜೆಸ್ಕಾಂಗೆ ನಿಯಮಾನುಸಾರ ಶುಲ್ಕ ಪಾವತಿಸಿ ಹೊಸ ಟಿಸಿ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಇಂಡಸ್ ಟಾವರ್ (ಏರ್‌ಟೇಲ್)ನ ಪ್ರತಿನಿಧಿಗಳಿಗೆ ಸೂಚಿಸಿದರು.
ಬೀದರ ಜಿಲ್ಲೆಗೆ ಸಂಬAಧಿಸಿದAತೆ ಜಿಯೋ ನೆಟ್‌ವರ್ಕ್ನ 3 ಕುಂದುಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಯೋ ನೆಟ್‌ವರ್ಕ್ನ ಟಾವರ್ ಕೂಡಿಸಲು ಸಾರ್ವಜನಿಕರಿಂದ ಅಡೆತಡೆ ಕಿರಿಕಿರಿಯಾಗುತ್ತಿದೆ ಎಂದು ಆ ಕಂಪನಿಯ ಪ್ರತಿನಿಧಿಗಳು ಸಭೆಗೆ ತಿಳಿಸಿದರು. ಟಾವರ್ ಸ್ಥಾಪನೆಯಿಂದಾಗಿ ಯಾವ ತೊಂದರೆಯೂ ಇಲ್ಲ ಎಂದು ಜನರಿಗೆ ಮನವರಿಕೆ ಮಾಡಿ ಟಾವರ್ ಅಳವಡಿಸಿರಿ ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಆದಾಗ್ಯೂ ಸಾರ್ವಜನಿಕರು ಒಪ್ಪದೇ ಇದ್ದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿ, ಬಳಿಕ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರತಿ ತಿಂಗಳು ಸಭೆ: ಜಿಲ್ಲಾಮಟ್ಟದ ಟೆಲಿಕಾಂ ಸಮನ್ವಯ ಸಮಿತಿ ಸಭೆಯು ಇನ್ಮುಂದೆ ಪ್ರತಿ ತಿಂಗಳು ನಡೆಯಲಿದೆ. ಟಾವರ್ ಅಳವಡಿಸಲು ಅಡೆತಡೆಗಳು ಎದುರಾದರೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ಏನಾದರು ತೊಂದರೆಯಾದರೆ ಈ ಬಗ್ಗೆ ಸಮಿತಿಗೆ ದೂರುಗಳನ್ನು ಸಲ್ಲಿಸಬೇಕು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಮಟ್ಟದ ಟೆಲಿಕಾಂ ಸಮನ್ವಯ ಸಮಿತಿಯ ಸದಸ್ಯರು ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಆಗಿರುವ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ನಗರಸಭೆ ಪೌರಾಯುಕ್ತರಾದ ರವೀಂದ್ರನಾಥ ಅಂಗಡಿ, ಜೆಸ್ಕಾಂ ಅಭಿಯಂತರರಾದ ರಮೇಶ ಪಾಟೀಲ ಹಾಗೂ ಇತರರು ಇದ್ದರು.

Latest Indian news

Popular Stories

error: Content is protected !!