ದೇವದೇವ ವನ ಸಸ್ಯಕ್ಷೇತ್ರಕ್ಕೆ ಸಿಇಓ ಜಹೀರಾ ನಸೀಮ್ ಭೇಟಿ

ಬೀದರ ಜೂನ್ 16 (ಕ.ವಾ.): ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಜೂನ್ 15ರಂದು ಬೀದರ ಹೊರವಲಯದ ದೇವ ದೇವ ವನ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಿಇಓ ಅವರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬೆಳೆಸಲಾದ ಸಸಿಗಳಾದ ಶ್ರೀಗಂಧ, ಬೇವು, ಹೆಬ್ಬೇವು, ಮಾವು, ನಿಂಬೆ, ಸಿಲ್ವರ್ ಓಕ ಹಾಗು ವಿವಿಧ ಸಸಿಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಸಿಇಓ ಅವರು, ರೈತರ ಹೊಲಗಳಲ್ಲಿ ಹಾಗು ಗ್ರಾಮದ ರಸ್ತೆ ಸಮುದಾಯ ಕಟ್ಟಡಗಳು, ಶಾಲೆ, ಅಂಗನವಾಡಿ ಹಾಗು ಆಸ್ಪತ್ರೆ ಆವರಣಗಳಲ್ಲಿ ಸಸಿಗಳನ್ನು ನೇಡಲು ಸಲಹೆ ಮಾಡಿದರು.
ಮುಂದಿನ ವರ್ಷಗಳಲ್ಲಿ ನರೇಗಾ ಯೋಜನೆಯಡಿ ನೀರು ಹಾಗು ಜಮೀನಿನ ವ್ಯವಸ್ಥೆ ಇರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳಿAದ ನರೇಗಾ ಯೋಜನೆಯಡಿ ನರ್ಸರಿಗಳನ್ನು ಸ್ಥಾಪಿಸಿ ಸ್ಥಳೀಯವಾಗಿ ಸಸಿಗಳನ್ನು ಬೆಳೆಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಸರ ಸಮತೋಲನ ಮತ್ತು ಸುಸ್ಥಿರ ಅಭಿವೃದ್ಧಿಗೆ ಮರಗಿಡಗಳನ್ನು ಬೆಳೆಸಿ ಪೋಷಿಸಲು ಇದೆ ವೇಳೆಯಲ್ಲಿ ಸಿಇಓ ಅವರು ಕರೆ ನೀಡಿದರು.
ಬೀದರ ತಾಲೂಕಿನಲ್ಲಿ 1.50 ಲಕ್ಷ ಶ್ರೀ ಗಂಧ ಹಾಗು 21 ಸಾವಿರ ವಿವಿಧ ಜಾತಿಯ ಸಸಿಗಳನ್ನು ಹಾಗು ಇಡೀ ಜಿಲ್ಲೆಯಲ್ಲಿ 7.5 ಲಕ್ಷ ಶ್ರೀಗಂಧ ಹಾಗು 61 ಸಾವಿರ ವಿವಿಧ ಸಸಿಗಳನ್ನು ಬೆಳೆಸಲಾಗಿದೆ ಎಂದು ಬೀದರ ಸಾಮಾಜಿಕ ಅರಣ್ಯ ವಲಯ ಸಂರಕ್ಷಣಾ ಅಧಿಕಾರಿ ಶ್ರೀ ಶಿವಕುಮಾರ ರಾಠೋಡ್ ಅವರು ಸಿಇಓ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೆ.ಎ.ಎಸ್ ಪ್ರೋಬೇಷನರ್ಸ ಅಧಿಕಾರಿಗಳಾದ ಆಶ್ವಿನ, ವೆಂಕಟಲಕ್ಷ್ಮಿ ಹಾಗು ಬೀದರ ತಾಪಂ ಸಹಾಯಕ ನಿರ್ದೇಶಕರಾದ ಶ್ರೀ ಶರತಕುಮಾರ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಾದ ಬಾಲಾಜಿ, ನಸೀರ್, ನರಸಿಂಗ್ ಉಪಸ್ಥಿತರಿದ್ದರು.

Latest Indian news

Popular Stories