ರಾಜ್ಯ ಸರ್ಕಾರದ ಸಾರ್ಥಕ ಸಾಧನೆಗಳ ಪುಸ್ತಕ ಬಿಡುಗಡೆ

ಬೀದರ ಜುಲೈ 26 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಸಾರ್ಥಕ ಎರಡು ವರ್ಷಗಳ ಸಾಧನೆಗಳ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ‘ಜನಸ್ನೇಹಿ ಆಡಳಿತ 2 ವರ್ಷ-ಸವಾಲುಗಳ ಮೀರಿದ ಸಾಧನಾ ಪರ್ವ’ ಎನ್ನುವ ಕಿರು ಹೊತ್ತಿಗೆಯನ್ನು ಪ್ರಕಟಿಸಿದೆ.
ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ತೋರಿದ ಹತ್ತು ಹಲವು ಸಾಧನೆಗಳ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವನ್ನು ಜುಲೈ 26ರಂದು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಬಿಡುಗಡೆ ಮಾಡಿದರು.
ಪಶು ಸಂಗೋಪನೆ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ಸತತ ಪ್ರಯತ್ನ, ಕೇಂದ್ರ ಸಚಿವರಾದ ಭಗವಂತ ಖೂಬಾ, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಇನ್ನೀತರ ಜನ ಪ್ರತಿನಿಧಿಗಳ ಸಹಕಾರದಿಂದ ಐತಿಹಾಸಿಕ ಸಾಧನೆಯಾದ ಕಲ್ಯಾಣ ಕರ್ನಾಟಕ ನಾಮಕರಣ, ಐತಿಹಾಸಿಕ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಸಂಪರ್ಕ ಕ್ರಾಂತಿಯ ಪರ್ವ ಎಂದೇ ಬಣ್ಣಿಸಿರುವ ಬೀದರ-ಬೆಂಗಳೂರು ವಿಮಾನಯಾನಕ್ಕೆ ಚಾಲನೆ, ಬೀದರ-ಔರಾದ್, ಬೀದರ-ಹುಮನಾಬಾದ್, ಬೀದರ-ಭಾಲ್ಕಿ ರಾಷ್ಟಿçÃಯ ಹೆದ್ದಾರಿಗಳ ಕಾಮಗಾರಿಗೆ ಚಾಲನೆ, ಜಿಲ್ಲಾ ರಂಗಮAದಿರಕ್ಕೆ ಪೂಜ್ಯ ಶ್ರೀ ಚೆನ್ನಬಸವ ಪಟ್ಟದ್ದೇವರ ಹೆಸರು ನಾಮಕರಣ, ಬೀದರನಲ್ಲಿ ಸೋಲಾರ ಪಾರ್ಕ ನಿರ್ಮಾಣಕ್ಕೆ ಮಂಜೂರಾತಿ, ಬೀದರ ಜಿಲ್ಲಾ ಕಾರಾಗೃಹಕ್ಕೆ 100 ಕೋಟಿ ಮಂಜೂರಿ, ಔರಾದನಲ್ಲಿ 220 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆ, ಕನ್ನಡ ಭವನಕ್ಕೆ 2 ಕೋಟಿ ರೂ. ಮಂಜೂರಿ ಸೇರಿದಂತೆ ಹಲವಾರು ಮಹತ್ವದ ಸಾಧನೆಗಳ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಮತ್ತು ಕೋರೋನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಇನ್ನೀತರ ಇಲಾಖೆಗಳ ಸಹಕಾರದಿಂದ ಜಿಲ್ಲಾಡಳಿತ ಕೈಗೊಂಡ ದಿಟ್ಟ ಕ್ರಮಗಳ ಮಾಹಿತಿಯನ್ನು ಪುಸ್ತಕವು ಹೊಂದಿದೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಕಟಿಸಿದ ಪುಸ್ತಕವು ಆಕರ್ಷಕವಾಗಿದೆ. ರಾಜ್ಯ ಸರ್ಕಾರದ ಹಲವಾರು ಮಹತ್ವದ ಯೋಜನೆಗಳ ಅನುಷ್ಠಾನದ ವಿವರ ಹೊಂದಿದ ಈ ಕಿರು ಹೊತ್ತಿಗೆಯು ನಾನಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಜನತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೃಷಿ, ಆರೋಗ್ಯ, ಪಶು ಸಂಗೋಪನೆ, ರೇಷ್ಮೆ, ಆಹಾರ, ತೋಟಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಖಾದಿ ಮತ್ತು ಗ್ರಾಮೀಣ ಕೈಗಾರಿಕೆ, ಅರಣ್ಯ, ಕೈಗಾರಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಯುಷ್, ಕನ್ನಡ ಮತ್ತು ಸಂಸ್ಕೃತಿ, ಕಾರ್ಮಿಕ ಹಾಗೂ ಜೆಸ್ಕಾಂ ಸೇರಿದಂತೆ ಇನ್ನೂ ಅನೇಕ ಇಲಾಖೆಗಳು ಸೇರಿದಂತೆ ಮಹತ್ವದ ಸ್ವಚ್ಛಭಾರತ ಮಿಷನ್, ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2019-20 ಮತ್ತು 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ತೋರಿದ ಸಾಧನೆಗಳ ಮಾಹಿತಿಯನ್ನು ಒಳಗೊಂಡು ಕಿರು ಹೊತ್ತಿಗೆಯನ್ನು ಪ್ರಕಟಿಸಲಿಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ನೀಡಿದ ಸಹಕಾರ ಸ್ಮರಣೀಯವಾಗಿದೆ ಎಂದು ಇದೆ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ತಿಳಿಸಿದರು.
ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ವಾರ್ತಾ ಇಲಾಖೆಯ ಅಪ್ರೆಂಟಿಸ್ ತರಬೇತುದಾರರಾದ ಸಕ್ಕುಬಾಯಿ, ಸತ್ಯಜೀತ್, ಸಿದ್ದಮ್ಮ ಮತ್ತು ಕಚೇರಿಯ ಸಿಬ್ಬಂದಿ ಇದ್ದರು.

Latest Indian news

Popular Stories

error: Content is protected !!