ಸೋಯಾ ಅವರೆ ಬೆಳೆಗೆ ಬಸವನ ಶಂಖದ ಹುಳುವಿನ ಬಾಧೆ; ಎಚ್ಚರ ವಹಿಸುವಂತೆ ರೈತಬಾಂಧವರಲ್ಲಿ ಮನವಿ.

ಬೀದರ ಜೂನ.24 (ಕರ್ನಾಟಕ ವಾರ್ತೆ) ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಸೋಯಾಅವರೆ ಬೆಳೆಗೆ ಬಸವನ (ಶಂಖದ) ಹುಳು ಬಾಧೆ ಕಂಡುಬAದಿದೆ. ಜಿಲ್ಲೆಯಲ್ಲಿ ವಿವಿಧೆಡೆ ಸೋಯಾಬಿನ್ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು. ವಾರದ ಹಿಂದೆ ಬಿತ್ತನೆ ಕೈಗೊಂಡ ಜಮೀನಿನಲ್ಲಿ ಸೋಯಾಅವರೆ ಬೆಳೆ ಮೊಳಕೆ ಒಡೆಯುವ ಹಂತದಲ್ಲಿರುವಾಗ ಹುಳುವಿನ ಬಾಧೆ ಕಾಣಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ನಡುವೆಯೇ ಬೀದರ ತಾಲ್ಲೂಕಿನ ಘೋಡಂಪಳ್ಳಿ, ಕಲಬೆಮಲ, ಔರಾದ ತಾಲ್ಲೂಕಿನ ಕೌಠಾ, ವಡಗಾಂವ, ಭಾಲ್ಕಿ ತಾಲ್ಲೂಕಿನ ಹಜನಾಳ, ಬಲ್ಲೂರು, ನಿಟ್ಟೂರು, ಗೋರನಾಳ ಗ್ರಾಮಗಳಲ್ಲಿ ಸೋಯಾಅವರೆ ಹಾಗೂ ಉದ್ದು ಬೆಳೆಗೆ ಬಸವನ ಹುಳುವಿನ ಕಾಟ ಕಾಡುತ್ತಿದೆ. ಕೃಷಿ ವಿಜ್ಞಾನ ಕೇಂದ್ರ ಜನವಾಡ, ಬೀದರನ ಹಿರಿಯ ವಿಜ್ಞಾನಿಗಳಾದ ಸುನೀಲಕುಮಾರ.ಎನ್.ಎಮ್ ಅವರು ರೈತರಿಗೆ ಬಸವನ ಹುಳುವಿನ ಬಾಧೆಯ ಲಕ್ಷಣ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಧೆಯ ಲಕ್ಷಣ: ಈ ಹುಳುಗಳು ಬೆಳೆಯುತ್ತಿರುವ ಗಿಡದ ಎಲೆ, ದೇಟು, ಕಾಂಡ ಹಾಗೂ ಕಾಂಡದ ತೊಗಟೆಗಳನ್ನು ಕೆರೆದು ತಿನ್ನುವುದು. ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಬಾಧೆ ಕಾಣಬಹುದು. ಮಳೆಗಾಲದಲ್ಲಿ ನೀರಿನ ಮೂಲದ ಸುತ್ತ ಮುತ್ತ ಹೊಲದಲ್ಲಿರುವ ನಡೆದಾಡಲು ಬಳಸುವ ಕಟ್ಟೆಗಳು, ಒಡಾಡುವ ಸ್ಥಳ, ಕಳೆ ಕಸಗಳು ಈ ಪೀಡೆಯ ಅಡಗುದಾಣಗಳಾಗಿವೆ. ಮತ್ತು ಶಂಖದ ಹುಳು ತನ್ನ ಜೀವಿತಾವಧಿಯಲ್ಲಿ 100-500 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು 3-5 ಸೆಂ.ಮೀ ಆಳದಲ್ಲಿ ಭೂಮಿಯ ಒಳಗಡೆ ಇಟ್ಟು ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ. ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೆಯಿಂದ ಮರಿಗಳು ಹೊರ ಬಂದು ಜೀವಿಸಿವುದನ್ನು ನೋಡುತ್ತದೆ. ಇಲ್ಲದಿದ್ದಲ್ಲಿ ಸೂಪ್ತಾವಸ್ಥೆಗೆ ಹೋಗುತ್ತವೆ.
ಬಾಧೆಯ ನಿರ್ವಹಣೆ:ಪೀಡೆಗೆ ಆಸರೆಯಾಗುವ ಅಡಗು ತಾಣಗಳಾದ ಹುಲ್ಲು, ಬಿದ್ದ ಕಸಕಡ್ಡಿ ತೆಗೆದು ಸ್ವಚ್ಛವಾಗಿಡಿವುದು, ಹೊಲದಲ್ಲಿ ಕೃಷಿ ತಾಜ್ಯಗಳ ಗುಂಪಿ ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂಡುತ್ತವೆ ಈ ಗುಂಪಿಗಳನ್ನು ಸುಡಬೇಕು ಮತ್ತು ಹೊಲದ ನಡೆದಾಡುವ ಕಟ್ಟೆ ಅಥವಾ ಅರಣಿಯ ಆರಂಭದಲ್ಲಿ (ಗಡಿ ಗುಂಟ) ಹರಳು (ದಪ್ಪ) ಉಪ್ಪನ್ನು ಸುರಿಯಬೇಕು, ಸಾಯಂಕಾಲ ಅಥವಾ ಮುಂಜಾನೆ ಸಮಯದಲ್ಲಿ ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆಹಾಕಿ ಅವುಗಳ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು.
ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲ ಹರಡಿ ಅಥವಾ ಕಳಿತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳು ಮೇಲೆ ಬ್ಲೀಚಿಂಗ್ ಪುಡಿ (8-10 ಕಿ.ಗ್ರಾಂ ಪ್ರತಿ ಎಕರೆಗೆ) ಧೂಳೀಕರಿಸಿ ನಾಶಪಡಿಸುವುದು, ಮೆಟಾಲ್ಡಿಹೈಡ್ (2.5 ಶೇ) ಮಾತ್ರೆಗಳನ್ನು ಎಕರೆಗೆ 2. ಕಿ.ಗ್ರಾಂ ನಂತೆ ಹೊದಲ್ಲಿ ಎರಚಿ. ಬಸವನ ಹುಳುಗಳು ಈ ಮಾತ್ರೆಗಳಿಗೆ ಆಕರ್ಷಿತವಾಗಿ ಸಾಯುತ್ತವೆ.

Latest Indian news

Popular Stories

error: Content is protected !!