ಜುಲೈ 19ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳ ಆದೇಶ

ಬೀದರ ಜುಲೈ 06 (ಕರ್ನಾಟಕ ವಾರ್ತೆ):- ಬೀದರ ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಕಾಯಿದೆ 2005 ಕಲಂ 34 (ಎಂ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಾಲಾಯಿಸಿ ಜುಲೈ 5ರ ಬಳಗ್ಗೆ 6 ಗಂಟೆಯಿAದ ಅನ್ವಯವಾಗುವಂತೆ ಜುಲೈ 19ರ ಬೆಳಗ್ಗೆ 6 ಗಂಟೆವರೆಗೆ ವಿನಾಯಿತಿ ನೀಡಿ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಆದೇಶ ಹೊರಡಿಸಿದ್ದಾರೆ.
ಕೋವಿಡ್-19 ರ 2ನೇ ಅಲೆಯ ಸಾಂಕ್ರಾಮಿಕ ರೋಗ ನಿಯಂತ್ರನಕ್ಕಾಗಿ ನಿಷೇಧಿತ ಚಟುವಟಿಕೆಗಳು, ಕಟ್ಟಡ ಚಟುವಟಿಕೆಗಳು, ಕೈಗಾರಿಕೆಗಳು, ಕೈಗಾರಿಕಾ ಚಟುವಟಿಕೆಗಳು, ವಾಣಿಜ್ಯ ಮತ್ತು ಖಾಸಗಿ ವಹಿವಾಟು, ಸರಕಾರಿ ಕಛೇರಿಗಳು ಖಾಸಗಿ ಸಂಸ್ಥೆಗಳು ಕಂಟೇನ್ಮೆAಟ್ ವಲಯದ ಹೊರಗಿನ ಕಂಪನಿಗಳ ಕಾರ್ಯ, ಅಂತರ್ ರಾಜ್ಯ ಚಟುವಟಿಕೆಗಳು, ಸಾರ್ವಜನಿಕ ಚಲನ-ವಲನ, ಸರಕು ಸಾಗಾಣಿಕೆಗಳ ಚಲನ-ವಲನ, ಕೃಷಿ ಮತ್ತು ಸಂಬAಧಿಸಿದ ಚಟುವಟಿಕೆಗಳು, ಆರೋಗ್ಯ ಸೇವೆಗಳು, ಮದುವೆ ಸಮಾರಂಭಗಳು, ಅಂತ್ಯಕ್ರಿಯೆಗಳಿಗೆ ಒಳಗೊಂಡಿರುವAತೆ ಜುಲೈ 5ರ ಬೆಳಿಗ್ಗೆ 6 ಗಂಟೆಯಿAದ ಅನ್ವಯವಾಗುವಂತೆ ಜುಲೈ 19ರ ಬೆಳಿಗ್ಗೆ 6 ಗಂಟೆಯವರೆಗೆ ಕೆಲವು ಚಟುವಟಿಕೆಗಳಿಗೆ ವಿನಾಯ್ತಿ ನೀಡಿ ಹಾಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಮಾನ್ಯ ಸರಕಾರ ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಬೆಂಗಳೂರನ ಅಧ್ಯಕ್ಷರು ಅವರು ಆದೇಶಿಸಿರುತ್ತಾರೆ.
ಈ ಪ್ರಯುಕ್ತ ಬೀದರ ಜಿಲ್ಲೆಯಲ್ಲಿ ಕೋವಿಡ್ 19ರ ಎರಡನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಕಂಟೋನ್ಮೆAಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ಕೆಲವು ವಿನಾಯ್ತಿ ನೀಡಲು ಹಾಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 34 (ಎಂ) ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.

Latest Indian news

Popular Stories

error: Content is protected !!