ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ಯ; ಅರಿವು ಮೂಡಿಸುವ ಕಾರ್ಯಕ್ರಮ

ಬೀದರ ಜುಲೈ 05 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷವು ಜುಲೈ.11 ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚಾರಿಸಲಾಗುತ್ತಿದೆ ಇದರ ನಿಮಿತ್ಯವಾಗಿ ಮೊದಲನೇ ಪಾಕ್ಷಿಕ ಜೂನ.27 ರಿಂದ ಜುಲೈ.10ರವರೆಗೆ IEC ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಜನರಿಗೆ ಜನಸಂಖ್ಯಾ ಸ್ಥಿರತೆ ಬಗ್ಗೆ, ಕುಟುಂಬ ಯೋಜನೆಯ ಮಹತ್ವದ ಬಗ್ಗೆ ಹಾಗೂ ಕುಟುಂಬ ಕಲ್ಯಾಣ ವಿಧಾನಗಳÀ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆಚರಿಸಲಾಗುತ್ತಿದ್ದು ಕುಟುಂಬ ಕಲ್ಯಾಣ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೋಂದಾಯಿಸಿಕೊಳ್ಳಲಾಗುತ್ತಿದೆ.
ಎರಡನೇ ಪಾಕ್ಷಿಕ ಜುಲೈ.11ರಿಂದ ರಿಂದ ಜುಲೈ.24ರ ವರಗೆ ಸೇವಾಪೂರೈಕೆ ಪಾಕ್ಷಿಕ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಸೂಕ್ತ ಕುಟುಂಬ ಕಲ್ಯಾಣ ಸೇವೆಗಳನ್ನು ಒದಗಿಸಲಾಗುವುದು. ಕುಟುಂಬ ಕಲ್ಯಾಣ ವಿಧಾನಗಳಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳಿದ್ದು, ಶಾಶ್ವತ ವಿಧಾನದಲ್ಲಿ ಮಹಿಳೆಯರಿಗೆ TUBECTOMY ಹಾಗೂ ಪುರುಷರಿಗೆ NSV ಸೇವೆಗಳನ್ನು ಆಯ್ದ ಸರ್ಕಾರಿ ಆರೋಗ್ಯ ಸಂಸ್ಥಗಳಲ್ಲಿ ಒದಗಿಸಲಾಗುವುದು. ತಾತ್ಕಾಲಿಕ ವಿಧಾನಗಳಲ್ಲಿ IUCD, PPIUCD, MALA-N, , ನಿರೋಧ್ ಗಳಿರುತ್ತವೆ.
ಕಳೆದ 3 ವರ್ಷದಳಿಂದ ಜಿಲ್ಲೆಯಲ್ಲಿ ಆಧುನಿಕ ಗರ್ಭನಿರೋಧಕ ವಿಧಾನವಾದ ANTARA ಚುಚ್ಚು ಮದ್ದು ಲಭ್ಯವಿದ್ದು ಈ ಚುಚ್ಚು ಮದ್ದು ಪ್ರತಿ 3 ತಿಂಗಳಿಗೊಮ್ಮೆ ತೆಗೆದುಕೊಳ್ಳಬಹುದಾಗಿದೆ ಹಾಗೂ ಮಕ್ಕಳು ಬೇಕೆನಿಸಿದಾಗ 7 ತಿಂಗಳ ಮುಂಚಿತವಾಗಿಯೇ ನಿಲ್ಲಿಸಬಹುದು ಹಾಗೂ ಈ ಚುಚ್ಚು ಮದ್ದು ಜಿಲ್ಲೆಯಲ್ಲಿ ಈಗಾಗಲೇ 3342 ಅರ್ಹ ಫಲಾನುಭವಿಗಳು ಸ್ವೀಕರಿಸುತ್ತಿದ್ದು ಯಾವುದೇ ಅಡ್ಡಪರಿಣಾಮಗಳು ಕಂಡುಬAದಿರುವುದಿಲ್ಲಾ. ಹಾಗಾಗಿ ಇದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನವಾಗಿರುತ್ತದೆ. ಆಧುನಿಕ ಗರ್ಭನಿರೋಧಕ ವಿಧಾನವಾದ CHAYA ಮಾತ್ರೆಯು ಕೂಡಾ ಪರ್ಯಾಯ ವಿಧಾನವಾಗಿದ್ದು ಮೊದಲ 3 ತಿಂಗಳು ವಾರಕ್ಕೆ 2 ಮಾತ್ರೆ ನಂತರ ವಾರಕ್ಕೆ 1 ಮಾತ್ರೆ ಸೇವಿಸಬಹುದಾಗಿದೆ. ಈ ಮಾತ್ರೆಯು ಜಿಲ್ಲೆಯಲ್ಲಿ 2927 ಜನರು ಸೇವಿಸುತ್ತಿದ್ದು ಯಾವುದೇ ಅಡ್ಡಪರಿಣಾಮಗಳು ಕಂಡುಬ0ದಿರುವುದಿಲ್ಲಾ ಹಾಗಾಗಿ ಇದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನವಾಗಿರುತ್ತದೆ ಹಾಗೂ ಎಲ್ಲಾ ಆರೋಗ್ಯ ಸಂಸ್ಥೆಗಳು, ಉಪಕೇಂದ್ರಗಳು ಹಾಗೂ ಆಶಾ ಕಾರ್ಯಕರ್ತೆಯರ ಹತ್ತಿರ ಉಚಿತವಾಗಿ ಲಭ್ಯವಿರುತ್ತದೆ ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories