ಎದುರಿಸಬೇಕು: ಕಾಡ್ಲೂರ್ ಸತ್ಯನಾರಾಯಣಾಚಾರ್ಯ ಸಲಹೆ

ಬೀದರ ಸೆಪ್ಟೆಂಬರ್ 14 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇದರಡಿಯಲ್ಲಿ ಇತ್ತೀಚೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆ ಮೂಡಿಸೋಣ ಎನ್ನುವ ಫೋಷಣೆಯೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಾಡ್ಲೂರ್ ಸತ್ಯನಾರಾಯಣಾಚಾರ್ಯ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ನ್ಯಾ. ಸತ್ಯನಾರಾಯಣಾಚಾರ್ಯ ಅವರು, ಆತ್ಮಹತ್ಯೆ ತಡೆ ಕಾರ್ಯವು ಕೇವಲ ಆರೋಗ್ಯ ಇಲಾಖೆ ಮತ್ತು ಇನ್ನೀತರ ಇಲಾಖೆಗಳಿಗೆ ಸೀಮಿತವಾಗಬಾರದು. ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬAತಹ ಮಹತ್ವದ ಸಂದೇಶವನ್ನು ಜನತೆಗೆ ಹೆಚ್ಚು ಹೆಚ್ಚು ತಿಳಿಸುವ ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾನವನ ಜೀವನದಲ್ಲಿ ಒಂದಿಲ್ಲೊAದು ಸಂದರ್ಭದಲ್ಲಿ ನೋವುಗಳು ಎದುರಾಗುವುದು ಸಹಜ. ಎಂತಹದ್ದೇ ನೋವು ಎದುರಾದರು ಅದನ್ನು ಧೈರ್ಯದಿಂದ ಎದುರಿಸಬೇಕು. ಹಿರಿಯರು ಕಿರಿಯರಿಗೆ ಆತ್ಮಸ್ತೆöÊರ್ಯ ತುಂಬಬೇಕು ಎಂದು ಸಲಹೆ ಮಾಡಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ರಾಮ ಟಿ.ಪಿ. ಅವರು ಮಾತನಾಡಿ, ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರ ಎಂದು ಭಾವಿಸಬಾರದು. ಜೀವನದಲ್ಲಿ ಸಕರಾತ್ಮಕವಾಗಿ ಯೋಚಿಸಬೇಕು. ಧ್ಯಾನ, ಯೋಗ, ಸಂಗೀತದAತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಲ್ಲಿ ನಕರಾತ್ಮಕ ಭಾವನೆಗಳು ದೂರವಾಗಲಿವೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಮಹೇಶ ಬೀರಾದರ ಅವರು ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಮಾನಸಿಕ ಖಾಯಿಲೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅನೇಕ ತರಬೇತಿ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಮತ್ತು ಅದಕ್ಕೆ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿದೆ. ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಪ್ರಯತ್ನ ಪಡುವಂತಹ ಜನರಿಗೆ ಆತ್ಮ ಸಮಾಲೋಚನೆಯ ಮೂಲಕ ಸಲಹೆ ನೀಡಿ ಅವರಲ್ಲಿ ಭರವಸೆ ಮೂಡಿಸುವಂತಹ ಕೆಲಸಗಳನ್ನು ಸಹ ನಾವು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಜನರಿಗೆ ತಮ್ಮಲ್ಲಿರುವ ಮಾನಸಿಕ ಖಿನ್ನತೆಯ ಬಗ್ಗೆ ತಿಳಿವಳಿಕೆಯೆ ಇರುವುದಿಲ್ಲ. ಮಾನಸಿಕ ಒತ್ತಡ ಹೆಚ್ಚಾದಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ. ಎಲ್ಲಾ ವಯೋಮಾನದವರಲ್ಲಿ ಇಂತಹ ಸಮಸ್ಯೆಗಳು ಕಾಣಿಸುತ್ತವೆ. ತಕ್ಷಣ ಸೂಕ್ತ ಚಿಕಿತ್ಸೆ ದೊರತಲ್ಲಿ ಅವರ ಜೀವ ಉಳಿಸಬಹುದು. ಈ ನಿಟ್ಟಿನಲ್ಲಿ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಮಾನಸಿಕ ತಜ್ಞರಾದ ಡಾ.ಅಭಿಜಿತ್ ಪಾಟೀಲ್ ಅವರು ಮಾತನಾಡಿ, ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದ್ಯಾAತ ಸುಮಾರು 8 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಈ ವರ್ಷದ ಅಂತಾರಾಷ್ಟಿçÃಯ ಆತ್ಮಹತ್ಯೆ ತಡೆಗಟ್ಟುವ ಸಂಘ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಸಂದರ್ಭದಲ್ಲಿ “ಆತ್ಮಹತ್ಯೆ ತಡೆಗಟ್ಟಲು ಎಲ್ಲರೂ ಒಗ್ಗೂಡೋಣ” ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಕಾಂiÀiðಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಮಾನೂರೆ ಅಶೋಕ ಅಧ್ಯಕ್ಷರು ಜಿಲ್ಲಾ ವಕೀಲರ ಸಂಫ ಬೀದರ, ಡಾ. ರಾಜಶೇಖÀರ ಪಾಟೀಲ್, ಡಾ.ಶಿವಶಂಕರ ಭತಮೂರ್ಗೆ, ಡಾ.ಕೃಷ್ಣಾ ರೆಡ್ಡಿ, ಡಾ. ಸಂಜೀವಕುಮಾರ ಪಾಟೀಲ್, ಡಾ.ಸಂತೋಷ ಕಾಳೆ, ಡಾ.ಸಂಗಾರೆಡ್ಡಿ, ಡಾ.ಶ್ವೇತಾ ಪಾಟೀಲ್, ಸಂಗಮೇಶ ಕಾಂಬ್ಳೆ, ಸಂಜುಕುಮಾರ ಮಾನುರೆ, ಮಂಜುನಾಥ ಬಿ.ಆರ್.ಪಿ, ಪಾಡುರಂಗ ಬೇಲ್ದಾರ, ರಾಜೇಶ ಪ್ರ.ದ.ಸ, ಪರಶುರಾಮ ತೆಗೆನೊರ, ಶ್ರಾವಣ ಜಾಧವ, ಗಂಗಾಧರ ಕಾಂಬ್ಳೆ, ಜ್ಯೋತಿ ಬರ್ಮಾ, ಬ್ರಮಾರಂಭಾದೇವಿ, ಅಶ್ವಿನಿ, ಶಾಮರಾವ್, ಇಮಾನುವೇಲ್, ಪ್ರಮೋದ ರಾಠೋಡ, ಅಂಬದಾಸ, ರಮೇಶ, ಅಬ್ರಹಾಂ, ಸಂಜುಕುಮಾರ, ಅಬ್ದುಲ ಹೈ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ಹಾಗೂ ಬೀದರ ನಗರದ ಪ್ರಾಥಮಿಕ ಹಾಗೂ ಪೌಢ ಶಾಲಾ ಶಿಕ್ಷಕರು ಉಪಸ್ಥಿತರಿದರು.
ಶ್ರೀ ವೀರಶಟ್ಟಿ ಚನಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ್ ಗುಡ್ಡೆ ನಿರೂಪಸಿದರು. ಶಿಮಪ್ಪಾ ಬಿ ಸರಕುರೆ ವಂದಿಸಿದರು.

Latest Indian news

Popular Stories