ಬಿಎಸ್‌ವೈ ಬದಲಾದರೆ 6 ತಿಂಗಳಲ್ಲಿ ಬಿಜೆಪಿ ಸರಕಾರ ಪತನ

ಧಾರವಾಡ: ರಾಜ್ಯಕ್ಕೆ ಯಡಿಯೂರಪ್ಪ ಅವರಂತಹ ಮುಖ್ಯಮಂತ್ರಿ ಸಿಗುವುದು ಕಷ್ಟ. ಬಿಎಸ್‌ವೈ ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಲೇಬೇಕು. ಯಡಿಯೂರಪ್ಪ ಅವರನ್ನು ಬದಲಾಯಿಸಿದ್ದಲ್ಲಿ 6 ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಧಾರವಾಡದ ಮುರುಘಾ ಮಠದ ಸ್ವಾಮೀಜಿ ಎಚ್ಚರಿಸಿದ್ದಾರೆ.
ಸಿಎಂ ಬದಲಿಸಿದರೆ ಬಿಜೆಪಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅಡಿಪಾಯವಿದ್ದಂತೆ. ಇಂಥವರನ್ನು ಅವಧಿಗೆ ಮುನ್ನ ಬದಲಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಸಮರ್ಥ ಆಡಳಿತಗಾರ. ಇನ್ನೊಬ್ಬರ ಮನಸ್ಸು ನೋಯಿಸದ ವ್ಯಕ್ತಿ. ಅಂಥವರನ್ನು ಅವಧಿಗೆ ಮುನ್ನ ಬದಲಾಯಿಸುವುದು ಒಳ್ಳೆಯ ಸುದ್ದಿ ಅಲ್ಲ. ಕೇಂದ್ರದವರು ಯಾರೂ ಬಾಯಿ ಬಿಟ್ಟು ಬದಲಿಸುವ ವಿಚಾರ ಹೇಳಿಲ್ಲ. ಇದೊಂದು ಗಾಳಿ ಸುದ್ದಿ ಅಷ್ಟೇ. ಈ ಸುದ್ದಿ ತಿಳಿದು ಬದಲಾವಣೆ ಮಾಡಿದರೆ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಲಿಂಗಾಯತರು ಬೆಳೆಯುವುದು ಕೆಲವರಿಗೆ ಬೇಕಾಗಿಲ್ಲ. ಲಿಂಗಾಯತರು ಸಿಎಂ ಆಗಬಾರದೆಂಬ ಅಸಮಾಧಾನವೂ ಕೆಲವರಿಗೆ ಇದೆ. ಇದಕ್ಕಾಗಿಯೇ ಒಳಗೊಳಗೆ ಅಸಮಾಧಾನದ ಹೊಗೆ ಇದೆ. ಇದಕ್ಕೆ ಕೆಲವರು ಕಿಡಿ ಹಾಕುತ್ತಿದ್ದಾರೆ. ಕೇಂದ್ರದವರು ಅದನ್ನು ಲೆಕ್ಕಿಸಬಾರದು. ವಿರೇಂದ್ರ ಪಾಟೀಲರಿಗೆ ಆದಂತೆ ಬಿಎಸ್‌ವೈಗೆ ಆಗಬಾರದು ಎಂದು ಸ್ವಾಮೀಜಿ ತಿಳಿಸಿದರು.

Latest Indian news

Popular Stories

error: Content is protected !!