ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿಎಸ್‌ವೈ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್. ಯಡಯೂರಪ್ಪ ಅವರು ಪ್ರಕಟಿಸುವುದರೊಂದಿಗೆ ನಾಲ್ಕಾರು ದಿನಗಳಿಂದ ನಿರ್ಮಾಣವಾಗಿದ್ದ ನಾಯಕತ್ವ ಬದಲಾವಣೆ ಕುರಿತ ಗೊಂದಲ ತಿಳಿಯಾಯಿತು.
ಜುಲೈ 25 ರಂದು ಹೈಕಮಾಂಡ್ ಸಂದೇಶ ಬರಲಿದೆ. ಈ ಸಂದೇಶದAತೆ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹಲವು ಬಾರಿ ಹೇಳಿದ್ದರು. ಆದರೆ, ಜುಲೈ 25 ರಂದು ಯಾವುದೇ ಸಂದೇಶ ಬರಲಿಲ್ಲ. ಈ ನಡುವೆ ಗೋವೆಯ ಪಣಜಿಯಲ್ಲಿದ್ದದ್ದ ಬಿಜೆಪಿ ರಾಷ್ಟಿçÃಯ ಅದ್ಯಕ್ಷ ಜೆ.ಪಿ. ನಡ್ಡಾ ಅವರು ಯಡಿಯೂರಪ್ಪ ಆಡಳಿತವನ್ನು ಕೊಂಡಾಡಿದ್ದರು. ನಾಯಕತ್ವ ಬದಲಾವಣೆ ಇಲ್ಲ ಎಂದು ನಡ್ಡಾ ಹೇಳಿದ್ದಾಗಿಯೂ ವರದಿಯಾಗಿತ್ತು. ಇದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಬಿಜೆಪಿ ಅಧ್ಯಕ್ಷರ ಹೇಳಿಕೆ ನಂತರ ಯಡಿಯೂರಪ್ಪ ಬದಲಾವಣೆ ಆಗಲಿಕ್ಕಿಲ್ಲ ಎಂಬ ಚರ್ಚೆ ಶುರುವಾಗಿತ್ತು. ಮಠಾಧೀಶರ ಒತ್ತಡ ಸೇರಿದಂತೆ ಯಾವುದಕ್ಕೂ ಬಿಜೆಪಿ ನಾಯಕತ್ವವು ಪ್ರತಿಕ್ರಿಯಿಸಿರಲಿಲ್ಲ. ನಾಯಕತ್ವ ಬದಲಾವಣೆ ಕುರಿತು ಗೊಂದಲ ಇದೆ ಎಂದು ಸಚಿವರಾದ ಜಗದೀಶ ಶೆಟ್ಟರ್ ಮತ್ತು ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಮುಖ್ಯಮಂತ್ರಿ ಸ್ಥಾನದ ದಾವೇದಾರರು ಎಂದು ಗುರುತಿಸಿಕೊಂಡಿದ್ದವರೂ ಹೆಚ್ಚೇನು ಮಾತನಾಡಿರಲಿಲ್ಲ.
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಯಡಿಯುರಪ್ಪ ಬದಲಾವಣೆ ಆಗಲಿಕ್ಕಿಲ್ಲ ಎಂಬ ಅಭಿಪ್ರಾಯ ಗಟ್ಟಿಯಾಗಲಾರಂಭಿಸಿತ್ತು. ಆದರೆ, ಸೋಮವಾರ ನಡೆದ ಸಾಧನಾ ಸಮಾವೇಶದಲ್ಲಿ ಸ್ವತ: ಯಡಿಯೂರಪ್ಪ ಅವರೇ ರಾಜೀನಾಮೆ ವಿಷಯವನ್ನು ಪ್ರಕಟಿಸುವ ಮೂಲಕ ಎಲ್ಲ ಗೊಂದಲಗಳನ್ನು ಕೊನೆಗೊಳಿಸಿದರು.
ಬಿಜೆಪಿ ಸರಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾವುಕರಾಗಿಯೇ ಮಾತನಾಡಿದ್ದಾರೆ. `ನಾನು ತೀರ್ಮಾನ ಮಾಡಿದ್ದೇನೆ. ಊಟ ಮಾಡಿದ ನಂತರ ರಾಜಭವನಕ್ಕೆ ಹೋಗಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. 2 ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರಕ್ಕೆ ಅವಕಾಶ ಕೊಡಲ್ಲ. ಆದರೆ ಜೆ.ಪಿ. ನಡ್ಡಾ ಅವರು ನನಗೆ 2 ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟರು. ಪ್ರಧಾನಿ ಮೋದಿ, ಅಮಿತ್ ಶಾ ಜೋಡಿ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೇಶವನ್ನು ಮುನ್ನಡೆಸುವ ಅವಕಾಶ ಸಿಗಬೇಕು ಎಂದರು.
ಶಿಕಾರಿಪುರದಲ್ಲಿ ಸಂಘದ ಕಾರ್ಯಕರ್ತನಾಗಿ ಜೀವನ ಆರಂಭಿಸಿದೆ. ಆರ್ ಎಸ್ ಎಸ್ ಪ್ರಚಾರಕನಾಗಿ ಕಾರ್ಯ ಆರಂಭವಾಯಿತು. ಶಿಕಾರಿಪುರಸಭೆಗೆ ನಿಂತು, ಗೆದ್ದೆ. ಮನೆಯಿಂದ ಶಿಕಾರಿಪುರ ಕಚೇರಿಗೆ ತೆರಳುವಾಗ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಆದರೂ ಬದುಕಿದೆ. ಅಂದೇ ಜನಸೇವೆ ಮಾಡುವ ನಿರ್ಧಾರ ಮಾಡಿದೆ. ನಮ್ಮ ಕುಟುಂಬಕ್ಕೂ ಇದನ್ನು ಅವತ್ತೇ ಹೇಳಿದೆ. ಅದರಂತೆ ರೈತರಪರ, ದಲಿತರ ಪರ ಹೋರಾಟ ಮಾಡಿದೆ ಎಂದರು.
ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಂತ ಕೆಲಸ ಮಾಡಿದ ಪರಿಣಾಮ, ಇವತ್ತು ಸಿಎಂ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಲು ಇಚ್ಚೆ ಪಡುತ್ತೇನೆ. ಅಂದು ಅಟಲ್ ಬಿಹಾರಿ ವಾಜಪೇಯಿ ಅವರು ನೀವು ದೆಹಲಿಗೆ ಬನ್ನಿ ಎಂದಿದ್ದರು. ಆದರೆ, ನಾನು ದೆಹಲಿಗೆ ಬರೋದಿಲ್ಲ. ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು ಎಂದು ಹೇಳಿದ್ದೆ. ಇಲ್ಲಿಯೇ ಉಳಿದು ಪಕ್ಷ ಕಟ್ಟಿದೆ ಎಂದು ಯಡಿಯೂರಪ್ಪ ಭಾವುಕರಾಗಿ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡರು.

Latest Indian news

Popular Stories

error: Content is protected !!