ಬಿಎಸ್‌ವೈ ಬದಲಾವಣೆ, ಸುತ್ತೂರು ಶ್ರೀ ಮೌನ !

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿಗಳು ದಿನದಿಂದ ದಿನಕ್ಕೆ ಕುತೂಹಲವುಂಟು ಮಾಡುತ್ತಿದ್ದು, ರಾಜ್ಯದ ಬಹುತೇಕ ಮಠಾಧೀಶರು ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಸುತ್ತೂರು ಶ್ರೀಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಬಹುತೇಕ ಮಠಾಧೀಶರು ಸಿಎಂ ಬಿ.ಎಸ್.ವೈ. ಪರವಾಗಿ ಮಾತನಾಡಿದ್ದು, ಸಿಎಂ ಬದಲಾವಣೆ ಮಾಡಬಾರದು ಎಂದು ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.
ಮೈಸೂರು ಸುತ್ತೂರು ಮಠ ಕೆಲದಿನಗಳ ಹಿಂದೆ ಶಕ್ತಿ ಕೇಂದ್ರವಾಗಿ ಪರಿಣಮಿಸಿತ್ತು. ಸಚಿವರು, ಶಾಸಕರು, ಬಂಡಾಯ ನಾಯಕರು ಭೆಟಿ ನೀಡಿದ್ದರು. ಸಚಿವ ಸಿ.ಪಿ. ಯೋಗೇಶ್ವರ್, ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್, ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್ ಹೀಗೆ ಹಲವು ನಾಯಕರು ಶ್ರೀಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದೀಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆದಿದ್ದರೂ ಸುತ್ತೂರು ಶ್ರೀ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವ ಕಾರಣಕ್ಕೆ ಸುತ್ತೂರು ಶ್ರೀಗಳು ಮೌನ ವಹಿಸಿರಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Latest Indian news

Popular Stories

error: Content is protected !!