ಮುಖ್ಯಮಂತ್ರಿ ಹುದ್ದೆ.. ಕ್ಷಣಕ್ಕೊಂದು ಹೆಸರು..!

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಕುತೂಹಲದ ಪ್ರಶ್ನೆಯ ಉತ್ತರಗಳು ಬದಲಾಗುತ್ತಲೇ ಇವೆ. ಸಿಎಂ ಹುದ್ದೆಗೇರುವ ನಾಯಕರ ಹೆಸರುಗಳು ಬದಲಾಗುತ್ತಲೇ ಇವೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಗಣಿ ಸಚಿವ ಮುರುಗೇಶ ನಿರಾಣಿ ಮುಂತಾದವರ ಹೆಸರುಗಳು ಚರ್ಚೆಯಲ್ಲಿದ್ದವು. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರೂ ಚರ್ಚೆಯಲ್ಲಿದೆ. ಮೂಲಗಳ ಪ್ರಕಾರ ಬೆಲ್ಲದ್ ಅವರು ವರಿಷ್ಠರ ನೆಚ್ಚಿನ ಆಯ್ಕೆ ಆಗಬಹುದು.
ಸದ್ಯ ಗೋವಾ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕರ್ನಾಟಕ ಬಿಜೆಪಿ ಸರ್ಕಾರದಲ್ಲಿನ ಪ್ರಮುಖ ಬದಲಾವಣೆ ಬಗ್ಗೆ ಸಂಜೆ ಪ್ರಕಟಿಸಲಿದ್ದಾರೆ. ಆದರೆ, ಯಡಿಯೂರಪ್ಪ ರಾಜೀನಾಮೆ ಯಾವಾಗ ನೀಡುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ವಿವರ ಸಿಕ್ಕಿಲ್ಲ.
ರಾಜ್ಯ ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಆಲೋಚನೆ ಹೈಕಮಾಂಡ್‌ನಲ್ಲಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಅಚ್ಚರಿಯ ಹೆಸರೊಂದನ್ನು ಹೈಕಮಾಂಡ್ ಘೋಷಿಸುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕ ಜನರ ನಾಡಿ ಮಿಡಿತ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಧಿಕಾರಿಗಳು ಸೇರಿದಂತೆ ಅನೇಕ ಮೂಲಗಳಿಂದ ಬಂದಿರುವ ಸಲಹೆ, ಸೂಚನೆಗಳನ್ನು ಹೈಕಮಾಂಡ್ ಸಂಗ್ರಹಿಸಲು ಆರಂಭಿಸಿ ಹಲವು ತಿಂಗಳುಗಳೇ ಕಳೆದಿವೆ, ಇನ್ನೇನಿದ್ದರೂ ನಿರ್ಣಯ ಪ್ರಕಟಿಸುವುದಷ್ಟೇ ಬಾಕಿ ಇದೆ.

Latest Indian news

Popular Stories

error: Content is protected !!