ಸಿಎಂ ಹುದ್ದೆ: ವರಿಷ್ಠರ ತೀರ್ಮಾನವೇ ಅಂತಿಮ

ದಾವಣಗೆರೆ : ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಫೈನಲ್. ಮುಖ್ಯಮಂತ್ರಿ ಬದಲಾವಣೆ ತಮ್ಮ ಪ್ರಯತ್ನದ ಫಲ ಎನ್ನುತ್ತಿರುವ ಸಿಪಿ ಯೋಗೇಶ್ವರ, ಯತ್ನಾಳ್ ಏನು ಬೇಕಾದರೂ ಹೇಳಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಸಿಎಂ ಯಾರು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಲಿಂಗಾಯತ ಅಥವ ನಾನ್ ಲಿಂಗಾಯತ ಎಂಬುದು ಮಾಧ್ಯಮಗಳ ಸೃಷ್ಟಿ. ರಾಜ್ಯದ ಪ್ರಮುಖರು ಮುಖ್ಯಮಂತ್ರಿ ಆಗ್ತಾರೆ ಎಂದರು.

ಹಾಲುಮತ ಮಹಾಸಭಾದಿಂದ ಈಶ್ವರಪ್ಪ ಸಿಎಂ ಆಗಲಿ ಎಂಬ ಲಾಬಿ ಬಗ್ಗೆ ಮಾತನಾಡಿದ ಅವರು, ನನ್ನ ಬಗ್ಗೆ ಆಸಕ್ತಿ ಹಾಗೂ ಪ್ರೀತಿಯಿಂದ ಕೇಳ್ತಾರೆ. ಅವರ ಪ್ರೀತಿಗೆ ಸಂತೋಷ ಪಡುತ್ತೇನೆ. ಇಂಥ ಪ್ರಯತ್ನ ಮಾಡಬೇಡಿ ಎಂದು ನಾನು ಹೇಳುತ್ತೇನೆ ಎಂದರು. ಕೇಂದ್ರದ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೊ ಅದಕ್ಕೆ ರಾಜ್ಯದ ಎಲ್ಲ ಕಾರ್ಯಕರ್ತರು ಬದ್ಧವಾಗಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

Latest Indian news

Popular Stories

error: Content is protected !!