ಕಾಂಗ್ರೆಸ್ ನಾಯಕರ ಸೈಕಲ್ ಜಾಥಾ ನಾಳೆ

ಬೆಂಗಳೂರು: ಸೈಕಲ್ ಮೇಲೇರಿ ಐದು ಕಿಲೋಮೀಟರ್ ಜಾಥಾ ನಡೆಸಲು ತಯಾರಾಗಿದ್ದಾರೆ ಕಾಂಗ್ರೆಸ್ ನಾಯಕರು. ಇದಕ್ಕೆ ಕಾರಣ, ದುಬಾರಿಯಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ. ಇದನ್ನು ವಿರೋಧಿಸಿ ಪ್ರತಿಭಟನಾ ರೂಪದಲ್ಲಿ ನಾಳೆ (ಜುಲೈ 7) ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸೈಕಲ್ ಜಾಥಾ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೆAಗಳೂರಿನ 32 ಕಡೆ ಪ್ರತಿಭಟನೆ ನಡೆಯಲಿದ್ದು, ಕನಿಷ್ಠ ಐದು ಕಿಲೋಮೀಟರ್ ಸೈಕಲ್ ಜಾಥಾ ನಡೆಯಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಬಿಜೆಪಿ ನಾಯಕರು ಬೆಲೆ ಏರಿಕೆ ಬಗ್ಗೆ ಪ್ರತಿಭಟಿಸಿದ್ದರು. ಇಂದು ಬೆಲೆ ಏರಿಕೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ಸಂಗತಿಯನ್ನು ನಾವು ಜನರಿಗೆ ತಿಳಿಸುತ್ತೇವೆ ಎಂದರು. ಕರೊನಾದಿಂದ ಮೃತಪಟ್ಟವರ ನೈಜ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆ. ಹೀಗಾಗಿ ಪಕ್ಷದ ಕಡೆಯಿಂದ ಇಡೀ ರಾಜ್ಯಾದ್ಯಂತ ಡೆತ್ ಆಡಿಟ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಬಿಎಲ್ ಶಂಕರ್, ಎಂಎಲ್ ಸಿ ನಾತಲರಾಯಣ ಸ್ವಾಮಿ, ರಾಜ್ ಕುಮಾರ್, ರಾಮಚಂದ್ರಪ್ಪ, ರಮೇಶ್ ಬಾಬು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Latest Indian news

Popular Stories

error: Content is protected !!