ಸಿಎಂ ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್ ಶಾಸಕ !

ಕಲಬುರಗಿ: ಕಣ್ಣಿ ಮಾರುಕಟ್ಟೆ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದ ವೇದಿಕೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಉದ್ದೇಶಪೂರ್ವಕವಾಗಿಯೇಕರೆಯಲಾಗಿಲ್ಲ ಎಂದು ಆರೋಪಿಸಿರುವ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರು ಕಾರ್ಯಕ್ರಮದಿಂದ ಹೊರ ನಡೆದ ಘಟನೆ ಶನಿವಾರ ಇಲ್ಲಿ ನಡೆಯಿತು.
ಕಿಣ್ಣಿ ಮಾರುಕಟ್ಟೆ ಶಂಕುಸ್ಥಾಪನಾ ಸಮಾರಂಭಕ್ಕೆ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಶಾಸಕರನ್ನು ಆಹ್ವಾನಿಸಲಾಗಿಲ್ಲ. ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಪಾಟೀಲ್ ಅವರು ದೂರಿದ್ದಾರೆ.
ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ, ಆಮಂತ್ರಣ ಪತ್ರ ನೀಡಲಾಗಿತ್ತು. ಆದರೆ ವೇದಿಕೆಗೆ ಕರೆಯದೇ ಅವಮಾನಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮ ಬಿಜೆಪಿಯ ಕಾರ್ಯಕ್ರಮದಂತಿದೆ. ಹೀಗಾಗಿ ಕಾರ್ಯಕ್ರಮ ಬಹಿಷ್ಕರಿಸಿದ್ದೇನೆ ಎಂದು ಶಾಸಕ ಪಾಟೀಲ್ ತಿಳಿಸಿದ್ದಾರೆ.

Latest Indian news

Popular Stories

error: Content is protected !!