ಸಹಕಾರ: ಕಾನೂನು ರಚನೆ ಅಧಿಕಾರ ಕೇಂದ್ರಕ್ಕಿಲ್ಲ

ನವದೆಹಲಿ: ಸಹಕಾರ ಕ್ಷೇತ್ರ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಹಕಾರ ವಿಷಯದಲ್ಲಿ ಕೇಂದ್ರ ಮೂಗು ತೂರಿಸಬಾರದು, ಸಹಕಾರ ಕ್ಷೇತ್ರಕ್ಕೆ ಸಂಬAಧಿಸಿದ ಕಾನೂನು ರೂಪಿಸಲಾಗದು ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.
2011 ರಲ್ಲಿ ಸಂವಿಧಾನದ 97 ನೇ ತಿದ್ದುಪಡಿ ಮಾಡುವ ಮೂಲಕ ಸಹಕಾರ ಸಂಘಗಳಿಗೆ ಕಾಯಕಲ್ಪ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ಇದರಿಂದಾಗಿ ರಾಜ್ಯಗಳ ಅಧಿಕಾರ ಮೊಟಕುಗೊಂಡಿದೆ ಎಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಸಹಕಾರ ಸಂಘಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಂಬAಧಿಸಿದAತೆ ಸಂವಿಧಾನದ 97ನೇ ತಿದ್ದುಪಡಿ ಸಿಂಧುತ್ವವನ್ನು ಕೋರ್ಟ್ ಎತ್ತಿಹಿಡಿದಿದೆ. ತಿದ್ದುಪಡಿಯ ಕೆಲವು ಭಾಗಗಳನ್ನು ರದ್ದುಪಡಿಸಿದ್ದು, ಇದರಿಂದ ರಾಜ್ಯಗಳಿಗೆ ಮತ್ತೆ ಅಧಿಕಾರ ಸಿಕ್ಕಂತಾಗಿದೆ.
ಸಹಕಾರ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಕೆಲವರು ಗುಜರಾತ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟು 2013ರ ಏಪ್ರಿಲ್ 23 ರಂದು ತೀರ್ಪು ನೀಡಿ ಸಹಕಾರ ವಲಯಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಕೆ.ಎಂ. ಜೋಸೆಫ್ ಮತ್ತು ಬಿ.ಆರ್. ಗವಾಯಿ ಅವರಿದ್ದ ತ್ರಿಸದಸ್ಯ ಪೀಠ 2:1 ಬಹುಮತದೊಂದಿಗೆ ತೀರ್ಪು ನೀಡಿದೆ. 97 ನೇ ತಿದ್ದುಪಡಿಯ ಸಿಂಧುತ್ವ ಎತ್ತಿ ಹಿಡಿಯಲಾಗಿದ್ದು, ಸಹಕಾರ ಕಾಯ್ದೆ ರಚನೆಗೆ ಸಂಬAಧಿಸಿದ ಪರಿಚ್ಛೇದ ರದ್ದು ಮಾಡಲಾಗಿದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ರಚಿಸಿದ್ದು, ಗೃಹಸಚಿವ ಅಮಿತ್ ಶಾ ಅವರಿಗೆ ಹೊಸ ಸಚಿವಾಲಯದ ಹೊಣೆ ನೀಡಲಾಗಿದೆ.

Latest Indian news

Popular Stories

error: Content is protected !!