ಹಾನಗಲ್ ನಲ್ಲಿ ಪ್ರತಿ ಮನೆಗೆ 10,000 ರೂ ಹಂಚಿದರೂ ಬಿಜೆಪಿ ಸೋತಿದೆ : ರೈ

ಮಂಗಳೂರು : ‘ದೇಶದಾದ್ಯಂತ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಬೆಲೆ ಏರಿಕೆ, ಸರಕಾರದ ಆಡಳಿತ ವೈಫಲ್ಯವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ’ ಎಂದು ಮಾಜಿ ಸಚಿವ , ಹಿರಿಯ ಕಾಂಗ್ರೆಸ್ ನಾಯಕ ರಮಾನಾಥ ರೈ ಬುಧವಾರ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮಾನಾಥ ರೈ ಅವರು, ‘ಉಪಚುನಾವಣೆಯಲ್ಲಿ ಹಾನಗಲ್ ನಲ್ಲಿ ಬಿಜೆಪಿಯವರು ಪ್ರತಿ ಮನೆಗೆ 10,000 ರೂ. ಹಂಚಿದ್ದರು, ಆದರೂ ಸೋತಿದ್ದಾರೆ. ಸಿಂದಗಿಯಲ್ಲೂ ಹಣ ಹಂಚಿದ್ದರು, ಆಡಳಿತ ಯಂತ್ರ ದುರುಪಯೋಗ ಮಾಡಿದ್ದರು’ ಎಂದು ಆರೋಪಿಸಿದರು.

ಬೆಲೆ ಏರಿಕೆಯನ್ನು ಸಚಿವರು ಸಮರ್ಥಿಸುತ್ತಿರುವುದು ಖಂಡನೀಯ. ಕೊರೊನಾಕ್ಕೂ ಬೆಲೆ ಏರಿಕೆಗೂ ಸಂಬಂದ ಕಲ್ಪಿಸುತ್ತಿರುವುದು ಅರ್ಥಹೀನ. ಜನರ ಸಮಸ್ಯೆಗಳನ್ನು ಮರೆಮಾಚಿಸಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ,” ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Latest Indian news

Popular Stories

error: Content is protected !!