ಅಬಕಾರಿ ದಾಳಿ ನಡೆಸಿ ೭೫,೦೦೦ ರೂ. ಮೌಲ್ಯದ ಸ್ವದೇಶಿ ಮದ್ಯ ಬಿಯರ್ ಹಾಗೂ ದ್ವಿಚಕ್ರ ವಾಹನ ಜಪ್ತಿ

ಕಲಬುರಗಿ,ಜೂ.೦೪-(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಮದ್ಯ ಮಾರಾಟದ ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಣ ಕೆ ಮಾಡುವÀವರನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಗುರುವಾರ ವಿವಿಧೆಡೆ ಅಬಕಾರಿ ದಾಳಿ ನಡೆಸಿ ಸ್ವದೇಶಿ ಮದ್ಯ ಬಿಯರ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿಪಡಿಸಲಾಗಿದೆ. ಈ ಜಪ್ತಿ ಮಾಡಿದ ಮುದ್ದೇಮಾಲಿನ ಹಾಗೂ ವಾಹನದ ಅಂದಾಜು ಒಟ್ಟು ಮೌಲ್ಯ ೭೫,೦೦೦ ರೂ. ಇರುತ್ತದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬಕಾರಿ ಅಧೀಕ್ಷಕ ಸಂಗನಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಚಿತ್ತಾಪೂರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಲಬುರಗಿ ಅಬಕಾರಿ ಜಂಟಿ ಆಯುಕ್ತರ ಕಚೇರಿ ಹಾಗೂ ಡಿ.ಸಿ.ಇ.ಐ.ಬಿ ಕಚೇರಿಯ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಗಳೊAದಿಗೆ ಗುರುವಾರ (ಜೂನ್ ೩ ರಂದು) ಸೇಡಂ ತಾಲೂಕಿನ ಬೊಂದೆಪಲ್ಲಿ ಇಂದಿರಾ ನಗರ ತಾಂಡಾದಲ್ಲಿ ಅಬಕಾರಿ ದಾಳಿ ನಡೆಸಿ ೧೦ ಲೀಟರ್ ಭಟ್ಟಿ ಸರಾಯಿ, ೭.೮೦೦ ಲೀಟರ್ ಬಿಯರ್ ಹಾಗೂ ಮಳಖೇಡ ಸ್ಟೇಷನ್ ತಾಂಡಾದ ಕಿಶನ ನಗರದ ಸೇವಾಲಾಲ ಗುಡಿ ಹತ್ತಿರ ಇರುವ ಗೋಜಿಬಾಯಿ ಇವರ ಮನೆಯ ಮೇಲೆ ಅಬಕಾರಿ ದಾಳಿ ಮಾಡಿ ೬೯.೧೨೦ ಲೀಟರ್ ಸ್ವದೇಶಿ ಮದ್ಯ ಜಪ್ತಿ ಮಾಡಿಕೊಂಡು ಸೇಡಂ ವಲಯದ ಅಬಕಾರಿ ಉಪ ನಿರೀಕ್ಷಕರಾದ ರಮಾ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಪ್ರಿಯಾಂಕ ಅವರು ತಲಾ ಒಂದು ಘೋರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನ ಮೇರೆಗೆ ಕಲಬುರಗಿ ವಲಯ ನಂ.೧ರ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳೊAದಿಗೆ ಕಲಬುರಗಿ ನಗರದ ಗಂಜ್‌ದಿAದ ದರ್ಗಾಕ್ಕೆ ಹೋಗುವ ಏರಿಯಾದಲ್ಲಿ ಗಸ್ತು ಮಾಡುತ್ತಿದ್ದಾಗ ಅಕ್ರಮವಾಗಿ ೧೮೦ ಎಂ.ಎಲ್. ಪ್ರಮಾಣದ ೪೮ ಟೆಟ್ರಾ ಪ್ಯಾಕೇಟುಗಳು, ಓರಿಜನಲ್ ಚೊಯಿಸ್ ವಿಸ್ಕಿ ಮದ್ಯ ಹಾಗೂ ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡು ಕಲಬುರಗಿ ವಲಯ ನಂ.೧ರ ಅಬಕಾರಿ ಉಪ ನಿರೀಕ್ಷಕ ಸಿದ್ದಮಲ್ಲಪ್ಪ ಅವರು ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಈ ಅಬಕಾರಿ ದಾಳಿ ಗಸ್ತು ಕಾರ್ಯಾಚರಣೆ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ, ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ, ಕಲಬುರಗಿ ವಿಭಾಗದ ಜಂಟಿ ಆಯುಕ್ತರ ಕಚೇರಿಯ ಡಿ.ಸಿ ಇ.ಐ.ಬಿ. ಧನರಾಜ್, ಸೇಡಂ ವಲಯದ ರವಿಕುಮಾರ, ಕಲಬುರಗಿ ವಲಯ ನಂ.೧ರ ಬಾಲಕೃಷ್ಣ ಮುದಕಣ್ಣ, ಅಬಕಾರಿ ಕಾನ್ಸ್ಸ್ಟೇಬಲ್ ವೆಂಕಟೇಶ ಹಾಗೂ ವಾಹನ ಚಾಲಕ ಆನಂದ ಪಾಲ್ಗೊಂಡಿದ್ದರು

ಕಲಬುರಗಿ ವಿಭಾಗದ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತರಾದ ಎಸ್.ಕೆ. ಕುಮಾರ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಅಕ್ರಮವಾಗಿ ಮದ್ಯ ಸಾಗಾಣ ಕೆ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ

Latest Indian news

Popular Stories

error: Content is protected !!