ಸಂಸತ್ ಎದುರು ಪ್ರತಿಭಟನೆಗೆ ರೈತರ ನಿರ್ಧಾರ

ನವದೆಹಲಿ:ಚಳಿಗಾಲದ ಅವೇಶನದ ಸಂದರ್ಭದಲ್ಲಿ ಸಂಸತ್ ಮುಂಭಾಗ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ಆರಂಭಿಸಲು ರೈತರು ತೀರ್ಮಾನಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿ ವಿರೋಧಿಸಿ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತೆ ಪ್ರತಿಭಟನೆ ತೀವ್ರಗೊಳಿಸಲು ತೀರ್ಮಾನಿಸಿದೆ.
ಚಳಿಗಾಲದ ಅವೇಶನ ಆರಂಭಗೊAಡು ಕೊನೆಗೊಳ್ಳುವವರೆಗೆ ಸಂಸತ್ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ಸಂಸತ್ ಒಳಗೆ ಪ್ರತಿಪಕ್ಷಗಳ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿವೆ ಎಂದು ಮೋರ್ಚಾ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರೈತ ಸಂಘಟನೆಗಳ ಪ್ರಮುಖ ಐದು ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ 200ಕ್ಕೂ ಹೆಚ್ಚು ಮಂದಿ ಪ್ರತಿನಿತ್ಯ ಸಂಸತ್ ಮುಂದೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ತೈಲ ಬೆಲೆ, ಗ್ಯಾಸ್ ಏರಿಕೆ ವಿರೋಸಿ ಜು.8ರಿಂದ ದೇಶದ್ಯಾಂತ ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಈ ಹಿಂದೆ ತೀರ್ಮಾನಿಸಿದ್ದವು.

Latest Indian news

Popular Stories