ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ರಾಜೀನಾಮೆ ನೀಡಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು:ಮಾತೃಪೂರ್ಣ’ ಯೋಜನೆಯಡಿ ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮೊಟ್ಟೆಗಳ ಖರೀದಿಯಲ್ಲಿ ಲಂಚ ಪಡೆದಿರುವ ಹಗರಣದಲ್ಲಿ ಭಾಗಿಯಾಗಿರುವ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಲಂಚದ ಹಣಕ್ಕೆ ಬಿಜೆಪಿ ನಾಯಕರು ಜೊಲ್ಲು ಸುರಿಸುತ್ತಿರುವವರು ಎಂದು ಲೋಕಕ್ಕೆ ಗೊತ್ತಿದೆ. ಆದರೆ ಇವರು ಸಣ್ಣಮಕ್ಕಳು ಮತ್ತು ಗರ್ಭಿಣಿಯರ ತಟ್ಟೆಗೂ ಕೈಹಾಕುವ ಮಟ್ಟಕ್ಕೆ ಇಳಿದಿರುವುದು ಖಾಸಗಿ ಸುದ್ದಿವಾಹಿನಿ ನಡೆಸಿರುವ ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ ಆದರಿಂದ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣವೇ ರಾಜೀನಾಮೆ ನೀಡಬೇಕು ಮತ್ತು ಈ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಬೇಕು.

ಒಂದೆಡೆ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಣ ನೀಡದೆ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಇನ್ನೊಂದೆಡೆ ಅದೇ ಕಾರ್ಯಕ್ರಮಗಳನ್ನು ತಮ್ಮ ಜೇಬು ತುಂಬಿಕೊಳ್ಳಲು ದುರ್ಬಳಕೆ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Latest Indian news

Popular Stories

error: Content is protected !!