ಕರ್ನಾಟಕ ರಾಜ್ಯಪಾಲರಾಗಿ ಗೆಹ್ಲೋಟ್

ಬೆಂಗಳೂರು : ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.
73 ವರ್ಷದ ಥಾವರ್ ಚಂದ್ ಮಧ್ಯಪ್ರದೇಶದ ದಲಿತ ಮುಖಂಡರಾಗಿದ್ದು ಆರೆಸ್ಸೆಸ್ ಹಿನ್ನೆಲೆ ಹೊಂದಿದ್ದಾರೆ. ಜತೆಗೆ ಈ ಹಿಂದೆ ಕರ್ನಾಟಕದ ಬಿಜೆಪಿ ಉಸ್ತುವಾರಿ ಆಗಿದ್ದರು.
ದೇಶದ ಆಡಳಿತ ಯಂತ್ರಕ್ಕೆ ರಾಷ್ಟ್ರಪತಿಗಳು ಮಂಗಳವಾರ ಮೇಜರ್ ಸರ್ಜರಿ ಮಾಡಿದ್ದು, ಎಂಟು ಮಂದಿ ರಾಜ್ಯಪಾಲರ ನೇಮಕ ಮತ್ತು ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಥಾವರ್ ಚಂದ್ ಗಹಲೋಟ್ (ಕರ್ನಾಟಕ), ಹರಿಬಾಬು ಕಂಭAಪತಿ (ಮಿಝೋರಾಂ), ಮಂಗುಭಾಯ್ ಚಗನ್ಭಾಯ್ ಪಟೇಲ್ (ಮಧ್ಯಪ್ರದೇಶ),
ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್ (ಹಿಮಾಚಲ ಪ್ರದೇಶ),
ಪಿ.ಎಸ್.ಶ್ರೀಧರನ್ ಪಿಳ್ಳ್ಯೆ (ಗೋವಾ), ಸತ್ಯದೇವ್ ನಾರಾಯಣ್ ಆರ್ಯ (ತ್ರಿಪುರಾ), ರಮೇಶ್ ಬಾಯಿಸ್ (ಜಾಖರ್‌ಂಡ್) ಹಾಗೂ ಬಂಡಾರು ದತ್ತಾತ್ರೇಯ (ಹರಿಯಾಣ) ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.

Latest Indian news

Popular Stories

error: Content is protected !!