ಸುಮಲತಾ ಬಣ್ಣ ಬಯಲು: ಎಚ್‌ಡಿಕೆ ಎಚ್ಚರಿಕೆ

ಬೆಂಗಳೂರು: ಏಜೆಂಟರನ್ನು ಇಟ್ಟುಕೊಂಡು ಸಂಸದೆ ಡೀಲ್ ಮಾಡುತ್ತಿರುವುದು ನಮಗೆ ಗೊತ್ತಿದೆ. ನನ್ನ ಬಳಿ ಸುಮಲತಾ ಅವರು ಮಾತನಾಡಿರುವ ಹಲವು ವೀಡಿಯೋಗಳಿವೆ. ಮುಂಬರುವ ಚುನಾವಣೆ ವೇಳೆ ಇದನ್ನು ಬಹಿರಂಗಪಡಿಸಿ ಅವರ ಬಣ್ಣ ಬಯಲು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಂಡ್ಯ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳುವ ಮೂಲಕ ಸುಮಲತಾ ಜನರನ್ನು ಭಯಗೊಳಿಸುತ್ತಿದ್ದಾರೆ. ಸುಮಲತಾ ಏನು ಇಂಜಿನಿಯರ್ ಆಗಿದ್ದಾರೆಯೇ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸುಮಲತಾ ಅವರ ಈ ದುರಂಹಕಾರ ಹೆಚ್ಚು ದಿನ ನಡೆಯೋಲ್ಲ. ಮಹಿಳೆ ಎಂದು ಸುಮ್ಮನಿರೋಕೆ ಆಗಲ್ಲ. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಸುಮಲತಾ ಜನರನ್ನು ಭಯ ಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.

Latest Indian news

Popular Stories

error: Content is protected !!