ಟ್ವೀಟರ್ ಎಂಡಿ ವಿರುದ್ಧದ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್

ಗಾಜಿಯಾಬಾದ್: ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬAಧಿಸಿದAತೆ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸರು ನೀಡಿದ ನೋಟಿಸ್‌ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಈ ಹಿಂದೆ ಕೋಮು ಸೂಕ್ಷ್ಮ' ವಿಡಿಯೋವನ್ನು ವೇದಿಕೆಯಲ್ಲಿ ಅಪ್ಲೋಡ್ ಮಾಡಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಉತ್ತರ ಪ್ರದೇಶ ಪೊಲೀಸರು, ತನ್ನ ದೈಹಿಕ ಉಪಸ್ಥಿತಿಯನ್ನ ಕೋರಿ ಹೊರಡಿಸಿದ ನೋಟಿಸ್‌ಅನ್ನು ರದ್ದುಗೊಳಿಸುವಂತೆ ಮಹೇಶ್ವರಿ ಕೋರಿದ್ದರು. ಕರ್ನಾಟಕ ಹೈಕೋರ್ಟ್ನಲ್ಲಿ ಮಹೇಶ್ವರಿ ಪರವಾಗಿ ನ್ಯಾಯಮೂರ್ತಿ ಜಿ.ನರೇಂದರ್ ಅವ್ರ ಏಕಸದಸ್ಯ ಪೀಠದ ಮುಂದೆ ಹಾಜರಾದ ವಕೀಲ ಸಿ.ವಿ.ನಾಗೇಶ್ ಅವರು, ಸಿಆರ್ ಪಿಸಿಯ ಸೆಕ್ಷನ್ 41-ಎ ಅಡಿಯಲ್ಲಿಕಾನೂನು ವ್ಯಾಪ್ತಿ ಇಲ್ಲದೆ, ಕಾನೂನಿನ ಅನುಮತಿಯಿಲ್ಲದೆ’ ನೋಟಿಸ್ ನೀಡಲಾಗಿದೆ ಎಂದು ವಾದಿಸಿದ್ದರು.

Latest Indian news

Popular Stories

error: Content is protected !!