ಟೆಲಿಗ್ರಾಮ್ ಚಾನೆಲ್ ಆರಂಭಿಸಿದ ಹೈಕೋರ್ಟ್

ಬೆಂಗಳೂರು :ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸಲು ‘ಕರ್ನಾಟಕ ಹೈಕೋರ್ಟ್ ವರ್ಚುಯಲ್ ಕೇಸ್ ಇನ್ಫಾರ್ಮೇಷನ್ ಸರ್ವೀಸಸ್’ ಹೆಸರಿನ ಟೆಲಿಗ್ರಾಮ್ ಚಾನೆಲ್ ಪ್ರಾರಂಭಿಸಿದೆ. ಇ-ಕೋರ್ಟ್ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ ಹಾಗೂ ದೈನಂದಿನ ಆದೇಶಗಳು ಈ ಚಾನೆಲ್ ನಲ್ಲಿ ಲಭ್ಯವಾಗಲಿವೆ. ಹೈಕೋರ್ಟ್ನ ಈ ಚಾನೆಲ್‌ನಲ್ಲಿ ಈಗಾಗಲೇ 6500 ಸದಸ್ಯರಿದ್ದಾರೆ.
ಜಿಲ್ಲಾ ನ್ಯಾಯಾಲಯಗಳ ಚಾನೆಲ್ ಗಳಲ್ಲಿ 5 ಸಾವಿರಕ್ಕೂ ಅಧಿಕ ಚಂದಾದಾರರಿದ್ದಾರೆ. ಚಾನೆಲ್ ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರು, ‘ವಕೀಲರು, ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಈ ಸೇವೆ ಉಪಯೋಗವಾಗಲಿದೆ. ಡಿಜಿಟಲ್ ಯುಗದಲ್ಲಿ ನೈಜ ಸಮಯದಲ್ಲಿ ಎಲ್ಲಾ ವಿಚಾರಣೆಗಳನ್ನು ಜನರು ನೋಡಬಹುದಾಗಿದೆ. ಈ ಸೌಲಭ್ಯವನ್ನು ವಕೀಲರು ಹಾಗೂ ಇತರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ

Latest Indian news

Popular Stories